ಕಲ್ಲಂಗಡಿ ಕೈಯಲ್ಲಿ ಆರೋಗ್ಯ

ಕಲ್ಲಂಗಡಿ
ಕಲ್ಲಂಗಡಿ

ಬೇಸಿಗೆ ಕಾಲಕ್ಕೆ ಬಯಸಿ ತಿನ್ನಬೇಕಾದ ಹಾಗೂ ಬಾಯಾರಿದವರ ಮೆಚ್ಚುಗೆಗೆ ಪಾತ್ರವಾದ ಹಣ್ಣು, ಕಲ್ಲಂಗಡಿ. ಈ ಹಣ್ಣು ಮೊದಲು ಆಫ್ರಿಕಾ ದೇಶದಲ್ಲಿ ಹುಟ್ಟಿತ್ತು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ, ಇದರ ವೈಜ್ಞಾನಿಕ ಹೆಸರು 'ಸೊಟ್ರುಲೆಸ್ ಕ್ಯೂಕರ್ಬಟಿಸ್‌'.       

ಈ ಹಣ್ಣಿನಲ್ಲಿ ಹಲವು ರೀತಿಯ ಪೋಷಕಾಂಶಗಳು ಒಳಗೊಂಡಿದ್ದು ನಮ್ಮ ದೇಹಕ್ಕೆ ವಿವಿಧ ರೀತಿಯಲ್ಲಿ ಸಹಕಾರಿಯಾಗಿದೆ. 100ಗ್ರಾಂ ಕಲ್ಲಂಗಡಿಯಲ್ಲಿ ಈ ರೀತಿಯ ಪೋಷಕಾಂಶಗಳು ಇರುತ್ತವೆ. ನೀರಿನಾಂಶ ಶೇ.95.8, ಮೇಧಸ್ಸು 2ಗ್ರಾಂ, ಖನಿಜಾಂಶ 0.2ಮಿ.ಗ್ರಾಂ, ಕಬ್ಬಿಣಾಂಶ 12ಮಿ.ಗ್ರಾಂ, ರಂಜಕ 0.04ಮಿ.ಗ್ರಾಂ, ಸಿ ಜೀವಸತ್ವ 0.1ಮಿ.ಗ್ರಾಂ, ಸಸಾರಜನಕ 0.2ಗ್ರಾಂ. ಕಾರ್ಬೋಹೈಡ್ರೇಟ್ 3.3ಗ್ರಾಂ,ಥಿಯಾಮಿನ್ 0.01ಮಿ.ಗ್ರಾಂ,ಸಿಯಾಮಿನ್ 0.01ಮಿ.ಗ್ರಾಂ.

ಈ ಹಣ್ಣಿನ ರಸವು ಹಲವು ಮಾರಕ ರೋಗಗಳ ವಿರುದ್ಧ ಕೆಲಸ ಮಾಡುತ್ತದೆ. ಕಲ್ಲಂಗಡಿ ರಸ ಮತ್ತು ಮಜ್ಜಿಗೆಯನ್ನು ಸೇರಿಸಿ ಕುಡಿದರೆ ಕಾಮಾಲೆ ರೋಗನಿವಾರಣೆಯಾಗುತ್ತದೆ. ಕಲ್ಲಂಗಡಿ ರಸದ ಜೊತೆಗೆ ಜೀರಿಗೆ ಸೇರಿಸಿ ಸೇವಿಸಿದರೆ ಉರಿಮೂತ್ರ ನಿವಾರಣೆಯಾಗುತ್ತದೆ.ಕಲ್ಲಂಗಡಿಯಲ್ಲಿ 95ರ್ ನೀರಿನಾಂಶವಿರುವುದರಿಂದ ಮೂತ್ರ ವಿಸರ್ಜನೆ ಸರಳವಾಗುತ್ತದೆ.ಕಲ್ಲಂಗಡಿ, ಕಿಡ್ನಿ ಸ್ಟೋನ್ ಕರಗಿಸುವಲ್ಲಿಯೂ ಅತ್ಯಂತ ನಿರ್ಣಾಯಕ ಪಾತ್ರ ನಿರ್ವಹಿಸುತ್ತದೆ.

ಅನೇಕ ಖಾಯಿಲೆಗಳು ಕಲ್ಲಂಗಡಿಹಣ್ಣಿನಿಂದ ಗುಣವಾಗುತ್ತದೆಯಾದರೂ ಅದನ್ನು ನಿರ್ಲಕ್ಷಿಸಿ ಇನ್ನೂ ನಾವು ಅವೇ ರೋಗಗಳಿಗೆ ತುತ್ತಾಗುತ್ತಿದ್ದೇವೆ ಎನ್ನುವುದು ವಿಪರ್ಯಾಸ.

-ಕೆ.ಎಂ.ವಿಶ್ವನಾಥ, ಮರತೂರ
mankavi143@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com