ರೇಷ್ಮೆಯಿಂದ ಬದುಕು ಕಟ್ಟಿಕೊಂಡ ವಿದ್ಯಾವಂತ ಯುವಕ

ಭಾರತದ ದೇಶಿಯ ಬೆಳೆಯಾಗಿರುವ ರೇಷ್ಮೆ ಕಡಿಮೆ ವೆಚ್ಚದಲ್ಲಿ ಬೆಳೆದು. ಆರ್ಥಿಕವಾಗಿ ಸಧೃಡಗೊಳ್ಳುಬಹುದು.
ಯುವ ರೈತ ಹರೀಶ್
ಯುವ ರೈತ ಹರೀಶ್

ಭಾರತದ ದೇಶಿಯ ಬೆಳೆಯಾಗಿರುವ ರೇಷ್ಮೆ ಕಡಿಮೆ ವೆಚ್ಚದಲ್ಲಿ ಬೆಳೆದು. ಆರ್ಥಿಕವಾಗಿ ಸಧೃಡಗೊಳ್ಳುಬಹುದು. ಅಟ್ಟದ ಮಾದರಿಯಲ್ಲಿ ಹುಳುಸಾಕಣೆ, ಹನಿ ನೀರಾವರಿ ಪದ್ಧತಿ ಸೇರಿದಂತೆ ಹಲವು ನೂತನ ತಾಂತ್ರಿಕತೆಗಳು ರೇಷ್ಮೆ ಬೆಳೆ ಹೆಚ್ಚಾಗಿ ಬೆಳೆಯಲು ಇಂದು ಪ್ರೇರಕ ಶಕ್ತಿಯಾಗಿದೆ.

ಬೆಂಗಳೂರಿನಿಂದ ಸುಮಾರು 51 ಕಿ.ಮೀ ದೂರದ ನಂದಗುಡಿಯಲ್ಲಿಂದು ರೇಷ್ಮೆ ಬೆಳೆ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಭಾಗದ ಜನರು ಹೆಚ್ಚು ರೇಷ್ಮೆ ಬೆಳೆಗೆ ಅವಲಂಬಿತರಾಗಿ ಸಧೃಡ ಬದುಕು ಕಟ್ಟಿಕೊಂಡು ಸ್ವಾವಲಂಬಿಗಳಾಗಿದ್ದಾರೆ. ಈ ಭಾಗದಲ್ಲಿ ಸಮರ್ಪಕವಾಗಿ ಮಳೆಯಾಗದ ಹಿನ್ನೆಲೆಯಲ್ಲಿ ಇನ್ನಿತರ ಕೃಷಿ ಬೆಳೆಗಳಿಗೆ ತಿಲಾಂಜಲಿ ಇಟ್ಟು. ಇಲ್ಲಿನ ರೈತರು ರೇಷ್ಮೆ ಬೆಳೆ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.

ರೇಷ್ಮೆ ಬೆಳೆಗೆ ಮುಖ್ಯವಾಗಿ ಬೇಕಾದದ್ದು ಸ್ವಚ್ಛತೆ. ರೇಷ್ಮೆ ಹುಳುಗಳನ್ನು ಸಾಕುವಾಗ ಅವುಗಳನ್ನು ಜೋಪಾನವಾಗಿ ನೋಡಿಕೊಳ್ಳಬೇಕು. ಅದಕ್ಕಾಗಿ ಕತ್ತಲೆಕೋಣೆಯಲ್ಲಿ ಮಂದ ದೀಪದ ಬೆಳೆಕಿನಲ್ಲಿ ರೇಷ್ಮೆ ಹುಳುಗಳ ಪೋಷಣೆ ಮಾಡಬೇಕು. ಹುಳುಗಳು ಹೆಚ್ಚು ಆರೋಗ್ಯಕರವಾಗಿ ಬೆಳೆದರೆ ಅಷ್ಟೇ ಹೆಚ್ಚು ಪಸಲು ದೊರೆಯುತ್ತದೆ.

ರೇಷ್ಮೆಯಿಂದ ಬದುಕು ಕಟ್ಟಿಕೊಂಡ ವಿದ್ಯಾವಂತ ಯುವಕ
ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಬೆಂಗಳೂರಿನಲ್ಲಿ ಕೆಲ ತಿಂಗಳ ಕೆಲಸ ನಿರ್ವಹಿಸಿ ಆದರಿಂದ ಸುಖ ಕಾಣದೆ ಮತ್ತೆ ತಮ್ಮ ಊರಾದ ನಂದಗುಡಿಯಿಂದ 2 ಕಿ.ಮೀ ದೂರದಲ್ಲಿರುವ ರಾಮಗೋವಿಂದಪುರಕ್ಕೆ ಬಂದ ಹರೀಶ್ ಮುಂದೆ ರೇಷ್ಮೆ ಬೆಳೆಯನ್ನು ಬದುಕಿನ ಉದ್ಯೋಗವನ್ನಾಗಿ ಮಾಡಿಕೊಂಡು ಇಂದು ನೆಮ್ಮದಿಯ ಜೀವನ ನಡೆಸುತ್ತಿರುವ ಯುವ ರೈತ.

ವರ್ಷಕ್ಕೆ ಸುಮಾರು 12 ಬೆಳೆಗಳನ್ನು ಬೆಳೆಯುವ ಮೂಲಕ ವರ್ಷಾಪೂರ್ತಿ ನಿರಂತರ ಕಾರ್ಯೋನ್ಮುಖರಾಗಿರುತ್ತಾರೆ. ಒಂದೂವರೆ ಎಕರೆಯಲ್ಲಿ ಹಿಪ್ಪುನೇರಳೆ ಸೊಪ್ಪನ್ನು ಬೆಳೆದು ಹುಳು ಸಾಕಾಣೆಯಲ್ಲಿ ತೊಡಗಿದ್ದಾರೆ. ತಿಂಗಳಿಗೆ ಸುಮಾರು 220 ಕೆಜಿಯಷ್ಟು ರೇಷ್ಮೆ ಗೂಡುಗಳನ್ನು ಮಾರಾಟ ಮಾಡುತ್ತಾ ವರ್ಷಕ್ಕೆ ಲಕ್ಷಾಂತರ ರುಪಾಯಿ ಲಾಭ ಪಡೆಯುತ್ತಿದ್ದಾರೆ.

ಭೂಮಿ ಫಲವತ್ತತೆ ಮುಖ್ಯ
ರೇಷ್ಮೆಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡವರು ವರ್ಷ­ಕ್ಕೊಮ್ಮೆ ಮಣ್ಣಿನ ಪರೀಕ್ಷೆ ಮಾಡಿಸಬೇಕು. ಮಣ್ಣಿನ ಫಲವತ್ತತೆ ಕಾಯ್ದು­ಕೊಳ್ಳಬೇಕಿದ್ದು, ರಾಸಾಯನಿಕ ಗೊಬ್ಬರ ಬಳಸಬಾರದು. ರಾಸಾಯನಿಕ ಗೊಬ್ಬರದ ಅತಿ ಬಳಕೆ­ಯಿಂದ ಭೂಮಿ ಫಲವತ್ತತೆ ಪ್ರಮಾಣ ಕಡಿಮೆಯಾಗುತ್ತದೆ. ಉತ್ತಮ ಹಿಪ್ಪು­ನೇರಳೆ ಬೆಳೆಯಲು ಆಗುವುದಿಲ್ಲ. ಆ ಎಲೆ ಸೇವಿಸುವುದರಿಂದ ಸೂಕ್ಷ್ಮವಾದ ರೇಷ್ಮೆಹುಳುಗಳಿಗೆ ಅಪಾಯವಾಗುತ್ತದೆ.

ಹಿಪ್ಪೆ ನೇರಳೆ ಬೆಳೆ ರೇಷ್ಮೆ ಹುಳು ಸಾಕಣೆ
ಹಿಪ್ಪೆ ನೇರಳೆಯನ್ನು ವಿವಿಧ ಹವಮಾನದಲ್ಲಿ ಬೇರೆ ಬೇರೆ ರೀತಿಯ ಮಣ್ಣುಗಳಲ್ಲಿ ಬೆಳೆಯಬಹುದು. ಉತ್ತಮ ಗುಣ ಮಟ್ಟದ ಎಲೆಗಳ ಬೆಳೆಯು ಯಶಸ್ವಿ ಗೂಡುಗಳ ಉತ್ಪಾದನೆಗೆ ಅವಶ್ಯ. ಇದಕ್ಕಾಗಿ ಹಲವು ಕಾರ್ಯವಿಧಾನಗಳ ಅನುಸರಣೆ ಅಗತ್ಯ. ರೇಷ್ಮೆ ಹುಳುಗಳು ತಮ್ಮ ಲಾರ್ವ ಅವಸ್ಥೆಯಲ್ಲಿ ಐದು ವಿವಿಧ ಹಂತಗಳನ್ನು ಹಾದು ಹೋಗುವವು. ಆ ವಿವಿದ ಅವಸ್ಥೆ ಗಳಲ್ಲಿರುವವು. ಲಾರ್ವ ಅವಧಿಯಲ್ಲಿ ವಿಶೇಷವಾಗಿ ವಿನ್ಯಾಸ ಮಾಡಿದ ಸಾಕಣೆ ಕೊಠಡಿ ಮತ್ತು ಅತ್ಯಂತ ಹೆಚ್ಚಿನ ಕಾಳಜಿ, ಸಮಯಕ್ಕೆ ಸರಿಯಾದ ನಿರ್ವಹಣೆಯಾಗ ಬೇಕು. ಆಗ ಮಾತ್ರ ಅತ್ಯುತ್ತಮ ರೇಷ್ಮೆ ಸಿಗುವುದು.

- ವಿಶ್ವನಾಥ್. ಎಸ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com