ಸ್ಥಳದ ಅಭಾವದ ನಡುವೆಯೂ ಮನಸ್ಸಿಗೆ ಮುದ ನೀಡುವ ಗಾರ್ಡನಿಂಗ್

ಇಂದಿನ ಅತ್ಯಂತ ವೇಗದ ಜೀವನ ಶೈಲಿಯ ಪರಿಣಾಮವಾಗಿ ಎಲ್ಲಾ ಕಡೆಗಳಲ್ಲಿ ಎತ್ತರವಾದ ಕಟ್ಟಡಗಳು, ಮಾಲ್, ಅಪಾರ್ಟ್‍ಮೆಂಟ್, ವಿಲ್ಲಾ ಇವುಗಳೇ ಎಲ್ಲಾ ಜಾಗವನ್ನು ತುಂಬಿಕೊಂಡಿವೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಇಂದಿನ ಅತ್ಯಂತ ವೇಗದ ಜೀವನ ಶೈಲಿಯ ಪರಿಣಾಮವಾಗಿ ಎಲ್ಲಾ ಕಡೆಗಳಲ್ಲಿ ಎತ್ತರವಾದ ಕಟ್ಟಡಗಳು, ಮಾಲ್, ಅಪಾರ್ಟ್‍ಮೆಂಟ್, ವಿಲ್ಲಾ ಇವುಗಳೇ ಎಲ್ಲಾ ಜಾಗವನ್ನು ತುಂಬಿಕೊಂಡಿವೆ.ನಗರ ಪ್ರದೇಶಗಳಲ್ಲಿ ಗಾರ್ಡನ್ ಎಂಬ ಕಾನ್ಸೆಪ್ಟ್  ನಿಧಾನಕ್ಕೆ ಕಣ್ಮರೆಯಾಗುತ್ತಿದೆ. ಸ್ವಲ್ಪ ವಿಸ್ತಾರವಾದ ಮನೆ ಕಟ್ಟಲೂ ಜಾಗವಿಲ್ಲದಿರುವಾಗ ಇನ್ನು ಗಾರ್ಡನ್ ಬೆಳೆಯುವುದಾದರೂ ಎಲ್ಲಿಂದ ಸಾಧ್ಯ?  ಏನ್ನೊ ಪ್ರಶ್ನೆ ಮನಸ್ಸಲ್ಲಿ ಮೂಡುತ್ತದೆ. ಆದರೆ ಇರುವ ಜಾಗದಲ್ಲೇ ಬುದ್ದಿವಂತಿಕೆಯಿಂದ ಗಾರ್ಡನಿಂಗ್ ಮಾಡಬಹುದು.

ಮನೆಯ ಸುತ್ತ ಹಸಿರು ಇರಬೇಕೆಂದು ಬಯಸುವವರು ಇನ್ ಡೋರ್ ಗಾರ್ಡನ್ ಮಾಡುವುದು, ಮನೆಯ ಗೋಡೆಗಳನ್ನು, ಕಾಂಪೌಂಡ್ ಗಳನ್ನೇ ಗಾರ್ಡನ್ ಆಗಿ ಮಾಡುವುದನ್ನು ನೋಡುತ್ತೇವೆ. ಬಳ್ಳಿ ಗಿಡಗಳನ್ನು ನೆಟ್ಟು  ಮನೆಯ ಕಂಬಗಳಿಗೆ, ಗೋಡೆಗೆ, ಕಿಟಕಿಗಳಿಗೆ ಬಳ್ಳಿಗಳನ್ನು ಹಬ್ಬಿಸಿ ಬಿಡುತ್ತಾರೆ. ಈ ರೀತಿಯ ಬಳ್ಳಿಗಳು ಬೆಳೆದು ಮನೆಯ ಸೊಬಗನ್ನು ಹೆಚ್ಚಿಸುವುದಂತು ನಿಜ, ಆದರೆ ಈ ರೀತಿಯ ಗಾರ್ಡನ್ ಮಾಡಲು ಹೆಚ್ಚಿನವರು ಮುಂದೆ ಬರುತ್ತಿಲ್ಲ. ಗಾರ್ಡನಿಂಗ್ ಎಂಬುದೊಂದು ಕಲೆ.ಗಾರ್ಡನಿಂಗ್ ಮಾಡುವುದರಲ್ಲಿ ಆಸಕ್ತಿ ಇದ್ದರೆ ಮನೆಯ ಒಳಗೆ ಕೂಡ ಕಂಟೈನರ್ ಗಾರ್ಡನಿಂಗ್ ಮಾಡಬಹುದು.

ಮಣ್ಣಿನ ಪಾಟ್ ಗಳಲ್ಲಿ ಉಪ್ಪಿನ ಅಂಶವನ್ನು ತೆಗೆಯಲು ವೈಟ್ ವಿನೆಗರ್ ಮತ್ತು ಅಲ್ಕೋಹಾಲ್ ,ಜೊತೆಗೆ ನೀರನ್ನು ಸಮ ಪ್ರಮಾಣದಲ್ಲಿ ಮಿಶ್ರ ಮಾಡಬೇಕು.ಇದನ್ನು ಪಾಟ್ ಗೆ ಹಚ್ಚಿ ಬ್ರಶ್ ನಿಂದ ತಿಕ್ಕಬೇಕು.ಇದರಲ್ಲಿ ಯಾವುದಾದರು ಗಿಡ ನೆಡುವ ಮೊದಲು ಇದನ್ನು ಸಂಪೂರ್ಣವಾಗಿ ಒಣಗಲು ಬಿಡಬೇಕು.

ಗಾರ್ಡನಿಂಗ್ ಮಾಡುವಾಗ ನಿಮ್ಮ ಉಗುರುಗಳ ಕೆಳಗೆ ಮಣ್ಣು ಸೇರುವುದನ್ನು ತಪ್ಪಿಸಲು ಸೋಪ್ ನಲ್ಲಿ ಉಗುರುಗಳನ್ನು ಗೀರಬೇಕು.ಇದರಿಂದ ಮಣ್ಣು ಸೇರುವ ಜಾಗದಲ್ಲಿ ಸೋಪು ಇರುವುದರಿಂದ ಮಣ್ಣು ಮೆತ್ತಿಕೊಳ್ಳುವುದಿಲ್ಲ.ಗಾರ್ಡನಿಂಗ್ ಮಾಡಿ ಮುಗಿದ ನಂತರ ಉಗುರಿಗೆ ಅಂಟಿಕೊಂಡ ಸೋಪನ್ನು ನೈಲ್ ಬ್ರಶ್ ಮೂಲಕ ತೆಗೆಯಿರಿ.  ಇದರಿಂದ ಉಗುರುಗಳು ಸ್ವಚ್ಚವಾಗಿರುತ್ತದೆ. ಗಿಡಗಳನ್ನು ಟ್ರಿಮ್ ಮಾಡುವಾಗ ಟ್ರಿಮ್ಮರ್ ಗೆ ಸ್ವಲ್ಪ ಎಣ್ಣೆ ಹಚ್ಚಿಕೊಂಡರೆ ಗಿಡ ತುಂಡಾಗುವುದು ಅಥವಾ ಜಾಮ್ ಆಗುವುದು ತಪ್ಪುತ್ತದೆ.

ಉದ್ದವಾಗಿರುವ ಒಂದು ಕೋಲನ್ನು ಅಳತೆ ಕೋಲಾಗಿ ಬಳಸಿ. ಗಾರ್ಡನ್‌‌ನಲ್ಲಿ ಉದ್ದವಾಗಿರುವ ಒಂದು ಕೋಲನ್ನು ಕೆಳಗೆ ಅಡ್ಡವಾಗಿ ಇಡಿ ಮತ್ತು ಅಳತೆ ಟೇಪ್‌ನಲ್ಲಿ ಇದರ ಅಳತೆ ತೆಗೆದುಕೊಳ್ಳಿ. ನಿರ್ಧಿಷ್ಟ ಅಳತೆಯಲ್ಲಿ ಗಿಡಗಳನ್ನು ನೆಡಬೇಕೆಂದಾಗ ಪದೇ ಪದೇ ಅಳತೆ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಮೊದಲೇ ಮಾಡಿಟ್ಟುಕೊಂಡ ಗುರುತುಗಳ ಆಧಾರದ ಮೇಲೆ ಗಿಡ ನೆಡಬಹುದು. ಶಾಶ್ವತ ಗುರುತು. ಶಾಶ್ವತ ಗುರುತನ್ನು ಮಾಡಲು ಗಿಡಗಳ ಹೆಸರುಗಳನ್ನು ಕಲ್ಲುಗಳನ್ನು ಅಳವಡಿಸಿ ಕೆಳಗೆ ನೆಲದ ಮೇಲೆ ಆ ಗಿಡಕ್ಕೆ ಸರಿಯಾಗಿ ಬರೆಯಿರಿ.

ಇನ್ನೊಂದು ಆಸಕ್ತಿಕರ ಕೆಲಸವೆಂದರೆ ಒಂದು ಉದ್ದ ಟೇಪ್ ತೆಗೆದುಕೊಂಡು ಅದನ್ನು ನಿಮ್ಮ ಕೈಗೆ ಸುತ್ತಿಕೊಳ್ಳಿ ನಂತರ ಗಿಡಗಳ ಮೇಲೆ ಅದನ್ನು ನಿಧಾನವಾಗಿ ಭಾರಿಸಿ.  ಇದರಿಂದ ಗಿಡದ ಎಲೆಗಳ ಅಡಿಯಲ್ಲಿರುವ ಹುಳುಗಳು ಕೆಳಗೆ ಬೀಳುವುದನ್ನು ಕಾಣಬಹುದು. ತರಕಾರಿ, ಅಕ್ಕಿ ತೊಳೆದ ನೀರನ್ನು ವ್ಯಯಿಸಬೇಡಿ. ತರಕಾರಿಗಳನ್ನು ಬೇಯಿಸಿ ಉಳಿದ ನೀರನ್ನು ಹಾಗೆಯೇ ಚೆಲ್ಲಬೇಕಾಗಿಲ್ಲ. ಅದನ್ನು ಗಿಡಗಳ ಬುಡದಲ್ಲಿ ಹಾಕಿ ನೋಡಿ ಇದರಿಂದ ಗಿಡ ಬೇಗ ಬೆಳೆಯುತ್ತದೆ. ಹಾಗೆಯೇ ಕಾಫಿ ಮತ್ತು ಟೀ ಮಾಡಿ ಉಳಿದ ವೇಸ್ಟ್ ಅನ್ನು ಗಿಡಗಳ ಬುಡಕ್ಕೆ ಹಾಕಿದರೇ ಗಿಡಗಳು ಚೆನ್ನಾಗಿ ಬೆಳೆಯುತ್ತವೆ.

ಮನೆಯಲ್ಲಿ ಅವಧಿ ಮುಗಿದ ಮಾತ್ರೆ, ಔಷಧ ಇದ್ದರೆ ಗಿಡದ ಬುಡದಲ್ಲಿನ ಸ್ವಲ್ಪ ಮಣ್ಣನ್ನು ಮೇಲೆ ತೆಗೆದು ಅದರ ಒಳಗೆ ಮಾತ್ರೆ, ಔಷಧಿ ಹಾಕಿ ಮುಚ್ಚಿ. ಇದರಿಂದ ಗೊಬ್ಬರ ಪೂರೈಕೆಯಾಗುತ್ತದೆ.

ಇನ್ನು ಗಾರ್ಡನ್ ಮಾಡಲು ಸಾಕಷ್ಟು ಹಣ ಖರ್ಚಾಗುತ್ತದೆ ಎಂದು ಹೆಚ್ಚಿನವರು ಅಂದುಕೊಳ್ಳುತ್ತಾರೆ. ಆದರೆ ಈ ರೀತಿ ಬೆಳೆಸಿದ ಗಿಡಗಳು ಮನೆಗೆ ರಾಯಲ್ ಲುಕ್ ನೀಡುತ್ತದೆಯೇ ಹೊರತು ಇದನ್ನು ಬೆಳೆಸುವುದು ಕಷ್ಟದ ಕೆಲಸವಲ್ಲ. ಕಿಟಕಿಗೆ ಗಿಡ ಹಬ್ಬುವಂತೆ ನೆಟ್ಟರೆ ಬೆಳಕು ಸರಿಯಾಗಿ ಬರುವುದಿಲ್ಲ ನಿಜ, ಆದ್ದರಿಂದ ಬೆಳಕು ಸರಿಯಾಗಿ ನಿಮ್ಮ ಮನೆಯೊಳಗೆ ಬೀಳುವಂತೆ ಗಿಡವನ್ನು ಬೆಳೆಸಿ. ಬಳ್ಳಿ ಕಿಟಕಿಗೆ ಹಬ್ಬಲು ಬಿಡಬೇಡಿ,   ನಿಮ್ಮ ಮನೆ ಸುತ್ತ ಹಸಿರು ಇದ್ದರೆ ಶುದ್ಧ ಗಾಳಿ ಸೇವಿಸಬಹುದು. ಕೆಲವೊಂದು ಬಳ್ಳಿ ಗಿಡಗಳಿಗೆ ಹೆಚ್ಚಿನ ಆರೈಕೆ ಬೇಕು,  ಕೆಲವೊಂದಕ್ಕೆ ಬೇಡ, ಗಿಡಗಳ ಆರೈಕೆಗೆ ಹೆಚ್ಚು ಪುರುಸೊತ್ತು ಇಲ್ಲದಿರುವುದು. ನೀರು ಕಮ್ಮಿ ಹೀರುವ,  ಹೆಚ್ಚು ಆರೈಕೆ ಬೇಕಿಲ್ಲದ ಗಿಡಗಳನ್ನು, ಬಳ್ಳಿಗಳನ್ನು ನೆಟ್ಟು ಗಾರ್ಡನ್ ಮಾಡಬಹುದು. ಈ ರೀತಿಯ ಗಾರ್ಡನ್ ಬಗ್ಗೆ ಗಮನಿಸಬೇಕಾದ ಅಂಶವೆಂದರೆ ಮನೆಗೆ ಗಿಡವನ್ನು ಹಬ್ಬಿಸಿ ಬಿಡುವುದರಿಂದ ಮನೆಯ ಅಂದ ಹೆಚ್ಚುವುದು, ಆದರೆ ಗಿಡದಲ್ಲಿ ಹಾವು ಸೇರದಂತೆ ಎಚ್ಚರವಹಿಸಬೇಕು. ಗಿಡಕ್ಕೆ ಹಾವು ಬರದಂತೆ ತಡೆಯುವ ಕೀಟನಾಶಕ ಸಿಂಪಡಿಸಬೇಕು.

   -ಶಿಲ್ಪ.ಡಿ.ಚಕ್ಕೆರೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com