ಕಡಿಮೆ ವೆಚ್ಚ ಅಧಿಕ ಲಾಭ: ನೀಲಗಿರಿ ರೈತರ ಕಲ್ಪಂ

ದೊಡ್ಡಬಳ್ಳಾಪುರ ಸುತ್ತ ಮುತ್ತ ಮಳೆಯ ಅಭಾವವಿರುವುದರಿಂದ ಅಲ್ಲಿನ ನೂರಾರು ರೈತರು ನೀಲಗಿರಿ ಬೆಳೆಯನ್ನೇ ತಮ್ಮ ಬದುಕಾಗಿಸಿಕೊಂಡಿದ್ದಾರೆ.
ನೀಲಗಿರಿ
ನೀಲಗಿರಿ
Updated on

ದೊಡ್ಡಬಳ್ಳಾಪುರಸುತ್ತ ಮುತ್ತ ಮಳೆಯ ಅಭಾವವಿರುವುದರಿಂದಅಲ್ಲಿನ ನೂರಾರು ರೈತರು ನೀಲಗಿರಿಬೆಳೆಯನ್ನೇ ತಮ್ಮ ಬದುಕಾಗಿಸಿಕೊಂಡಿದ್ದಾರೆ. ಅದರಲ್ಲೂ ಸರ್ವೆಹಾಗೂ ನೀಲಗಿರಿ ಮರಗಳನ್ನು ತಾಲ್ಲೂಕಿನಲ್ಲಿಹೆಚ್ಚಾಗಿ ಬೆಳಸಲಾಗುತ್ತಿದೆ. ಅತೀ ಕಡಿಮೆ ನೀರಿನಲ್ಲೂಹೆಚ್ಚಿನ ಪಸಲನ್ನು ತೆಗೆಯಬಹುದು. ಕಷ್ಟದಕಾಲದಲ್ಲಿ ತುರ್ತು ಅವಶ್ಯಕತೆಗಳಿಗೆ ರೈತರಿಗೆಆರ್ಥಿಕ ನೆರವು ನೀಡುವುದೇ ಮರಗಳು. ಹಾಗಾಗಿ ತಾಲೂಕಿನ ಬಹುತೇಕರೈತರು ನೀಲಗಿರಿ, ಸರ್ವೆ ಬೆಳೆಯುತ್ತಿದ್ದಾರೆ. ಸರ್ವೆಗಿಡಗಳು ಎರಡರಿಂದ ಮೂರು ವರ್ಷಕ್ಕೆಲ್ಲಾಕಟಾವಿಗೆ ಬರುತ್ತವೆ. ನೀಲಗಿರಿ ಸಸಿಗಳನ್ನು ಗಾತ್ರಕ್ಕೆತಕ್ಕಂತೆ 2 ವರ್ಷದಿಂದ 12 ವರ್ಷದ ವರೆಗೂ ಕಟಾವುಮಾಡಬಹುದಾಗಿದೆ.

ದೊಡ್ಡಬಳ್ಳಾಪುರಜಿಲ್ಲೆಯ ಮಲ್ನಾಯಕನ ಹಳ್ಳಿ, ಸೇರಿದಂತೆ ಸುತ್ತಮುತ್ತಲಿನಗ್ರಾಮಗಳ ರೈತರು ನೀಲಗಿರಿ ಬೆಳೆಗೆಹೆಚ್ಚಿನ ಒತ್ತು ನೀಡಿದ್ದಾರೆ. ವರ್ಷದಿಂದವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆಆಗುತ್ತಿರುವುದರಿಂದ ಕಂಗಾಲಾಗಿರುವ ರೈತರು ಕಡಿಮೆ ಖರ್ಚಿನಲ್ಲಿಖಚಿತ ಲಾಭ ಗಳಿಸುವ ಉದ್ದೇಶದಿಂದನೀಲಗಿರಿ ಬೆಳೆಸಲು ಮುಂದಾಗಿದ್ದಾರೆ. ಇದರಿಂದಕೃಷಿ ಭೂಮಿ ನೀಲಗಿರಿ ತೋಪುಗಳಾಗಿಪರಿವರ್ತನೆಗೊಳ್ಳುತ್ತಿದೆ. ಒಂದೆಡೆ ಅರಣ್ಯ ನಾಶಎಗ್ಗಿಲ್ಲದೆ ಸಾಗುತ್ತಿದ್ದರೆ ಮತ್ತೊಂದೆಡೆ ನೆಡು ತೋಪುಗಳನ್ನು ಬೆಳೆಸುವಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ. ಜಿಲ್ಲೆಯ ನಾನಾ ಕಡೆಗಳಲ್ಲಿನೆಡುತೋಪ ಸಾಮಾನ್ಯವಾಗುತ್ತಿದೆ. ಸರ್ವೆ, ನೀಲಗಿರಿ ಸಸಿಗಳನ್ನುರೈತರು ತಮ್ಮ ಹೊಲಗದ್ದೆಗಳು ಹಾಗೂತೆಂಗಿನ ತೋಟಗಳ ನಡುವೆ ಇಲ್ಲವೆಯಾವುದೇ ಬೆಳೆ ಬೆಳೆಯಲಾದ ಜಮೀನುಗಳಲ್ಲಿನೆಡುವ ಮೂಲಕ ಪರಿಸರದ ಬಗ್ಗೆಯೂಕಾಳಜಿ ತೋರುತ್ತಿದ್ದಾರೆ. ಸರ್ವೆ ಸಸಿಗಳು ಕಡಿಮೆಮೊತ್ತಕ್ಕೆ ದೊರೆಯುತ್ತವೆ. ಒಂದೂವರೆ ತಿಂಗಳಿಂದ 2 ತಿಂಗಳಸಸಿಗಳನ್ನು 3 ಚದರ ಅಡಿಗೆ ಒಂದರಂತೆಒಂದನ್ನು ನಾಟಿ ಮಾಡಲಾಗುತ್ತದೆ.

ನೀಲಗಿರಿಹೆಚ್ಚು ಲಾಭದಾಯಕ: ರೈತರಿಗೆ ನೀಲಗಿರಿ, ಸರ್ವೆಬೆಳೆ ಲಾಭದಾಯಕವೂ ಹೌದು. ಒಂದು ಎಕರೆಗೆ1800 ರಿಂದ 2200 ರವರೆಗೆ ನಾಟಿ ಮಾಡಬಹುದಾಗಿದೆ. ಸಸಿಗಳಿಗೆ ಬತ್ತ,ಕಬ್ಬು, ರಾಗಿ ಬೆಳೆಗಳಂತೆ ಹೆಚ್ಚುನೀರು ಬೇಕಾಗುವುದಿಲ್ಲ. 5 ರಿಂದ 6 ಅಡಿ ಬೆಳೆಯುವವರೆಗೆಅಗತ್ಯಕ್ಕೆ ತಕ್ಕಂತೆ ನೀರೂಣಿಸಿದರೆ ಸಾಕು. ನಂತರ ಇವಕ್ಕೆತಿಂಗಳಿಗೊಮ್ಮೆ ಅಥವಾ ಎರಡು ತಿಂಗಳಿಗೊಮ್ಮೆನೀರು ಹಾಯಿಸಿದರೂ ಸಾಕಾಗುತ್ತದೆ. ಐದಾರು ಇಂಚು ದಪ್ಪದಾದಪ್ರತಿ ನೀಲಗಿರಿ, ಸರ್ವೆ ಪೋಲ್ಗಳಿಗೆಮಾರುಕಟ್ಟೆಯಲ್ಲಿ 250 ರಿಂದ 320 ಬೆಲೆ ಇದೆ. ಸರ್ವೆಮರಗಳಿಂದ ಪ್ರತಿ ಎಕರೆಗೆ 3ರಿಂದ4 ಲಕ್ಷ, ನೀಲಗಿರಿ ಮರಗಳಿಂದ 4ರಿಂದ5 ಲಕ್ಷ ಲಾಭಗಳಿಸಬಹುದು ಎನ್ನುತ್ತಾರೆ ರೈತರು. ಸರ್ವೆ ಮರವನ್ನುಕಟಾವು ನಂತರ ಮತ್ತೆ ನೆಡಬೇಕು.ಆದರೆ, ನೀಲಗಿರಿ ಕಟಾವು ಮರಗಳಬುಡದಿಂದ ಚಿಗುರಿ ಅವುಗಳೇ ಮತ್ತೆಮರಗಳಾಗುತ್ತವೆ. ಇದರಿಂದ ರೈತರಿಗೆ ಆದಾಯವಿದೆ.ಆಯಾ ಭೂಮಿಯ ಫಲವತ್ತತೆ ಆಧಾರದಮೇಲೆ ಇಳುವರಿ ಸಿಗುತ್ತದೆ.

ನೀಲಗಿರಿ ಆಕರ್ಷಣೆ?:ನೀಲಗಿರಿಯು ಕಡಿಮೆ ಮಳೆ ಬೀಳುವಪ್ರದೇಶದಲ್ಲೂ ಹುಲುಸಾಗಿ ಬೆಳೆಯುತ್ತದೆ. ನೀಲಗಿರಿ ಸಸಿ ನೆಟ್ಟುಒಂದು ವರ್ಷ ಪೋಷಿಸಿದರೆ ಸಾಕುಅದು ಪ್ರತಿ ಮೂರು ವರ್ಷಕ್ಕೊಮ್ಮೆಕಟಾವಿಗೆ ಬರುತ್ತದೆ. ನೀಲಗಿರಿಗೆ ಯಾವುದೇ ಜಾನುವಾರುಗಳ ಕಾಟಇಲ್ಲ. ಯಾವುದೇ ಉಳುಮೆ, ಗೊಬ್ಬರದಖರ್ಚೂ ಇಲ್ಲ. ಬೇಲಿ ನಿರ್ಮಿಸಿಕಾಪಾಡುವ ಅಗತ್ಯವೂ ಇಲ್ಲ. ಹೆಚ್ಚುಕೃಷಿ ಭೂಮಿ ಉಳ್ಳ ರೈತರುನಿರ್ವಹಣೆ ಮಾಡಲಾಗದೆ ನೀಲಗಿರಿ ಬೆಳೆಯಲು ಮುಂದಾಗಿದ್ದರೆಸಾಂಪ್ರದಾಯಿಕ ಬೆಳೆಗಳಲ್ಲಿ ನಷ್ಟ ಅನುಭವಿಸಿದ ಅನೇಕರೈತರು ನೀಲಗಿರಿಯತ್ತ ಮುಖ ಮಾಡಿದ್ದಾರೆ. ಜಿಲ್ಲೆಯಲ್ಲಿಜಮೀನು ಖರೀದಿಸಿ ಬೇರೆಡೆ ವಾಸವಿರುವವರುರಕ್ಷಣೆ ದೃಷ್ಟಿಯಿಂದ ತಮ್ಮ ಭೂಮಿಯನ್ನು ನೀಲಗಿರಿನೆಡುತೋಪನ್ನಾಗಿ ಪರಿವರ್ತಿಸಿದ್ದಾರೆ.

ಮಳೆ ಕೊರತೆ ಹಾಗೂಅಂರ್ತಜಲ ಕುಸಿತದಿಂದ ನೀರಿನ ಆಭಾವ ಹೆಚ್ಚಾಗಿ. ಸಾವಿರಾರು ಅಡಿ ಬೋರ್ ವೆಲ್ ಕೊರೆಸಿದರು ನೀರು ಸಿಗದಂತಾಗಿದೆ.ಇಂತ ಪರಿಸ್ಥಿತಿಯಲ್ಲಿ ಆದಾಯ ಬೆಳೆಗಳನ್ನು ಸಾಧ್ಯವಿಲ್ಲ. ಹಾಗೂ ಪರಿಸ್ಥಿತಿಯಲ್ಲಿ ಕಷ್ಟಪಟ್ಟು ಆದಾಯಬೆಳೆಗಳನ್ನು ಬೆಳೆದರು ಸೂಕ್ತ ಮಾರುಕಟ್ಟೆ ಧಾರಣೆ ಸಿಗದೆ ನಷ್ಟ ಅನುಭವಿಸಬೇಕಾಗುತ್ತದೆ. ನಮ್ಮ ಬಳಿಜಮೀನಿದೆ ಆದರೆ ಉಳುಮೆ ಮಾಡಲುಸಾಧ್ಯವಾಗುತ್ತಿಲ್ಲ. ಹೀಗಾಗಿ ನಾನು ಬೇರೆ ಕೆಲಸ ಮಾಡಿಕೊಂಡಿದ್ದು,ಜಮೀನನ್ನು ಪಾಳು  ಬಿಡುವುದುಸರಿಯಲ್ಲ ಎನ್ನುವ ಉದ್ದೇಶದಿಂದ ನಾನುಎರಡೂವರೆ ಎಕರೆ ಜಮೀನಿನಲ್ಲಿ ನೀಲಗಿರಿಬೆಳೆಯುತ್ತಿದ್ದೇನೆ. ಬೆಳೆಗೆ ಹೆಚ್ಚುಪರಿಶ್ರಮದ ಅಗತ್ಯ ಇಲ್ಲ. ಮೊದಲಸರ್ತಿ ಸಸಿ ನೆಟ್ಟಾಗ ಮಾತ್ರಸ್ವಲ್ಪ ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಮೊದಲ ಸಲ ಕಟಾವಿಗೆಬಂದ ನಂತರ ಮುಂದಿನ ಸಲದಿಂದಬುಡದಿಂದಲೇ ಸಸಿ ಬೆಳೆಯುತ್ತದೆ ಇದರಿಂದನಮಗೆ ಹೆಚ್ಚಿನ ಲಾಭ ಸಿಗುತ್ತದೆಎಂದಿದ್ದಾರೆ ಮಲ್ನಾಯಕನಹಳ್ಳಿ ರೈತ ಅಪ್ಪಾಜ್ಜಿಗೌಡ.

- ವಿಶ್ವನಾಥ್. ಎಸ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com