ಅಸ್ಸಾಮಿನಲ್ಲಿ ಮತ್ತೊಂದು ರೈನೋ ಕೊಂದ ಬೇಟೆಗಾರರು

ಅಸ್ಸಾಮಿನ ಕಾಜಿರಂಗ ಅಭಯಾರಣ್ಯದಲ್ಲಿ ಬೇಟೆಗಾರರು ಒಂದು ಕೊಂಬಿನ ರೈನೋಸರಸ್ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ಕೊಂಬಿನ ರೈನೋಸರಸ್ (ಸಂಗ್ರಹ ಚಿತ್ರ)
ಒಂದು ಕೊಂಬಿನ ರೈನೋಸರಸ್ (ಸಂಗ್ರಹ ಚಿತ್ರ)

ಗೌಹಾಟಿ: ಅಸ್ಸಾಮಿನ ಕಾಜಿರಂಗ ಅಭಯಾರಣ್ಯದಲ್ಲಿ ಬೇಟೆಗಾರರು ಒಂದು ಕೊಂಬಿನ ರೈನೋಸರಸ್ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಭಯಾರಣ್ಯದಲ್ಲಿ ರೈನೋದ ಅವಶೇಷಗಳು ಪತ್ತೆಯಾಗಿವೆ ಎಂದು ಅಭಯಾರಣ್ಯದ ನಿರ್ದೇಶಕ ಎಂ ಕೆ ಯಾದವ್ ತಿಳಿಸಿದ್ದಾರೆ.

ಈ ವರ್ಷ ಈ ಅಭಯಾರಣ್ಯದಲ್ಲಿ ಕೊಲ್ಲಲಾಗಿರುವ ೧೩ ನೇ ರೈನೋ ಇದಾಗಿದೆ.

"ಬೇಟೆಗಾರರನ್ನು ಸೆರೆಹಿಡಿಯಲು ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಅಭಯಾರಣ್ಯದಲ್ಲಿ ಗಸ್ತು ಸುತ್ತುವ ಕಾರ್ಯ ಚುರುಕುಗೊಂಡಿದೆ" ಎಂದು ಯಾದವ್ ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ಪಾರಂಪರಿಕ ತಾಣ ಎಂದು ಗುರುತಿಸಲಾಗಿರುವ ಈ ಅಭಯಾರಣ್ಯದ ಒಟ್ಟು ವಿಸ್ತೀರ್ಣ ೮೫೮ ಚದರ ಕಿಲೋಮೀಟರ್ ಗಳು. ಇದರ ಬಹುತೇಕ ಭಾಗ ಪ್ರವಾಹದಲ್ಲಿ ಸಿಲುಕಿದ್ದು, ಪ್ರಾಣಿಗಳನ್ನು ಎತ್ತರದ ಸ್ಥಾನಗಳಿಗೆ ನೂಕಿದೆ. ಇಂತಹ ಸಂದರ್ಭಗಳಲ್ಲಿ ಚಟುವಟಿಕೆ ನಡೆಸುವ ಬೇಟೆಗಾರರು ರೈನೋಗಳನ್ನು ಕೊಲ್ಲುತ್ತಾರೆ.

ಈ ಅಭಯಾರಣ್ಯದಲ್ಲಿ ಇದೇ ವರ್ಷ ಸುಮಾರು ೧೫ ಬೇಟೆಗಾರರನ್ನು ಕೂಡ ಕೊಲ್ಲಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com