ನಗರಗಳಲ್ಲಿ ಬೇಸಿಗೆಯಲ್ಲಿ ತರಕಾರಿ ಬೆಳೆಯುವ ವಿಧಾನ

ತರಕಾರಿ ಬೆಳೆಯಲು ಸೂರ್ಯನ ಬೆಳಕು ಬೇಕು ಎಂಬುದು ನಮಗೆಲ್ಲಾ ಗೊತ್ತಿರುವ ವಿಷಯ. ಎಲ್ಲಾ ಗಿಡಗಳಿಗೂ ಸಮ ಪ್ರಮಾಣದ ಬೆಳಕಿನ ಅಗತ್ಯವಿರುವುದಿಲ್ಲ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ತರಕಾರಿ ಬೆಳೆಯಲು ಸೂರ್ಯನ ಬೆಳಕು ಬೇಕು ಎಂಬುದು ನಮಗೆಲ್ಲಾ ಗೊತ್ತಿರುವ ವಿಷಯ. ಎಲ್ಲಾ ಗಿಡಗಳಿಗೂ ಸಮ ಪ್ರಮಾಣದ ಬೆಳಕಿನ ಅಗತ್ಯವಿರುವುದಿಲ್ಲ ಎಂಬುದು ಕೂಡ ಗೊತ್ತಿರುವ ಸಂಗತಿ. ಕೆಲವು ಗಿಡಗಳು ಬಿರು ಬಿಸಿಲಿನಲ್ಲಿಯೂ ಚೆನ್ನಾಗಿ ಬೆಳೆಯುತ್ತದೆ. ಇನ್ನು ಕೆಲವು ಗಿಡಗಳು ಸೂರ್ಯನ ಶಾಖಕ್ಕೆ ಬಾಡಿ ಹೋಗುತ್ತವೆ. ಹಾಗಾಗಿ ಮನೆಯ ಟೆರೇಸ್ ಮೇಲೆ ಅಥವಾ ಮನೆ ಮುಂದೆ ಗಾರ್ಡನ್ ಬೆಳೆಯುವವರು ಸೂಕ್ತ ಕಾಲಕ್ಕೆ ಸೂಕ್ತ ಗಿಡಗಳನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ. ಹಾಗಾದರೆ ಮಾತ್ರ ನಮ್ಮಲ್ಲಿ ಸಿಗುವ ಸಂಪನ್ಮೂಲವನ್ನು ಬಳಸಿಕೊಂಡು ಉತ್ತಮ ಫಲಿತಾಂಶ ಪಡೆಯಬಹುದು.

ಸೌತೆಕಾಯಿ, ಸೋರೆಕಾಯಿ, ಕುಂಬಳಕಾಯಿ, ಹಾಗಲಕಾಯಿ, ಹೀರೇಕಾಯಿ ಮೊದಲಾದ ತರಕಾರಿಗಳು ಬೇಸಿಗೆ ಕಾಲದಲ್ಲಿ ಚೆನ್ನಾಗಿ ಬೆಳೆಯುತ್ತವೆ. ಇನ್ನು ಬದನೆಕಾಯಿ, ಬೆಂಡೆಕಾಯಿ, ಮೆಣಸಿನಕಾಯಿ, ಸಿಹಿ ಗೆಣಸು, ಸ್ವೀಟ್ ಜೋಳ, ಅಳಸಂಡೆ ಮೊದಲಾದವುಗಳನ್ನು ಬೇಸಿಗೆ ಕಾಲದಲ್ಲಿ ಕಂಟೈನರ್ ಗಳಲ್ಲಿ ಬೆಳೆಯಬಹುದು. ಕಲ್ಲಂಗಡಿ, ಖರಬೂಜ, ಪಾಲಕ್, ಭಾರತೀಯ ಬೀನ್ಸ್ ಮೊದಲಾದವುಗಳು ಕೂಡ ಬೇಸಿಗೆ ಕಾಲದ ಬೆಳೆಗಳಾಗಿವೆ. ಆಲೂಗಡ್ಡೆ, ಕಾಲಿಫ್ಲವರ್, ಕ್ಯಾಬೇಜ್, ಮೂಲಂಗಿ, ಕ್ಯಾರೆಟ್ ಮೊದಲಾದವುಗಳನ್ನು ಬೇಸಿಗೆ ಕಾಲದಲ್ಲಿ ಬೆಳೆಸದಿರುವುದು ಸೂಕ್ತ. 

ದೀರ್ಘಕಾಲಿಕ ಮರಗಳಾದ ಪಪ್ಪಾಯ, ಬಾಳೆಗಿಡ, ಕರಿಬೇವು, ದಾಳಿಂಬೆ ಮತ್ತು ನಿಂಬೆ ಗಿಡಗಳಿಗೆ ಸ್ವಲ್ಪ ನೆರಳಿನ ಅವಶ್ಯಕತೆಯಿದೆ. ತೆಂಗಿನ ಗರಿ, ಇತರ ಮರಗಳ ಎಲೆಗಳು, ಶಾಲು, ಸೀರೆಯ ಹೊದಿಕೆ ಮೊದಲಾದವುಗಳನ್ನು ಬಳಸಿ ಚಪ್ಪರ ತಯಾರಿಸಿ ಬೆಳೆಸಬೇಕು. ಗಿಡದ ಸುತ್ತಲೂ ತೆಂಗಿನ ಗರಿಗಳನ್ನು ನೇರವಾಗಿ ಮಣ್ಣಿನಲ್ಲಿ ಊರಬೇಕು. ಇದರಿಂದಲೂ ಸ್ವಲ್ಪ ನೆರಳು ಸಿಗುತ್ತದೆ. ನೆರಳು ಬಲೆ ಮತ್ತೊಂದು ಆಯ್ಕೆಯಾಗಿರುತ್ತದೆ.

ಬೇಸಿಗೆ ಕಾಲದಲ್ಲಿ ಗಿಡಗಳಿಗೆ ಚೆನ್ನಾಗಿ ನೀರು ಪೋಣಿಸುತ್ತಾ ಮಣ್ಣು ತೇವವಾಗಿರುವಂತೆ ನೋಡಿಕೊಳ್ಳಬೇಕು. ಬೆಳಗ್ಗೆಗಿಂತ ಸಾಯಂಕಾಲ ಗಿಡಗಳಿಗೆ ನೀರು ಪೋಣಿಸುವುದು ಉತ್ತಮ. ಮಣ್ಣು ಹೆಚ್ಚು ನೀರನ್ನು ಹೀರಿಕೊಂಡು ತೇವವನ್ನು ಇಟ್ಟುಕೊಳ್ಳುತ್ತದೆ. ಡ್ರಿಪ್ ಮೂಲಕ ಗಿಡಗಳಿಗೆ ನೀರುಣಿಸಿದರೆ ಹೆಚ್ಚು ನೀರು ಉಳಿಸಬಹುದು. ಮತ್ತು ನೀರು ಗಿಡಗಳ ಬೇರಿಗೆ ಹೋಗಿ ತಲುಪುತ್ತದೆ ಮಣ್ಣು ಚೆನ್ನಾಗಿ ನೀರನ್ನು ಹೀರಿಕೊಳ್ಳುತ್ತವೆ.

ಗಟ್ಟಿಯಾದ ಗಿಡಗಳಾದ ಕಪ್ಪು ಉದ್ದು, ಹೆಸರು ಕಾಳು ಮತ್ತು ಅಳಸಂಡೆಗಳ ಗಿಡಗಳನ್ನು ತಂಪಾಗಿರಿಸಲು ಗಿಡದ ಸುತ್ತಲೂ ಹಸಿರು ಹುಲ್ಲು ಹೊದಿಕೆ ಮಾಡಬೇಕು. ನಗರಗಳಲ್ಲಿ ಹಣ್ಣು, ತರಕಾರಿ ಕೃಷಿ ಮಾಡುವ ಬಗ್ಗೆ  ನಿಮಗೆ ಇನ್ನಷ್ಟು ಮಾಹಿತಿ ಬೇಕೆಂದಲ್ಲಿ nallini@artyplantz.com ವಿಳಾಸಕ್ಕೆ ಮೇಲ್ ಮಾಡಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com