ಕಾಫಿ ಬೆಳಗಾರರಿಗೂ ತಟ್ಟಿದ ಬೇಸಿಗೆ ಬಿಸಿ

ಬೇಸಿಗೆಯಲ್ಲಿ ಉಷ್ಣತೆ ಹೆಚ್ಚಾಗುತ್ತಿದ್ದು, ಮಳೆಯೂ ಬಾರದ ಹಿನ್ನಲೆಯಲ್ಲಿ ಕಾಫಿ ಬೆಳೆ ಮೇಲೆ ಭಾರಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಸೋಮವಾರಪೇಟೆ: ಬೇಸಿಗೆಯಲ್ಲಿ ಉಷ್ಣತೆ ಹೆಚ್ಚಾಗುತ್ತಿದ್ದು, ಮಳೆಯೂ ಬಾರದ ಹಿನ್ನಲೆಯಲ್ಲಿ ಕಾಫಿ ಬೆಳೆ ಮೇಲೆ ಭಾರಿ ಪರಿಣಾಮ ಬೀರಿದೆ. 
ಮಾರ್ಚ್- ಏಪ್ರಿಲ್ ಒಳಗಾಗಿ ಕಾಫಿ ಗಿಡಗಳು ಹೂ ಬಿಡುತ್ತಿತ್ತು. ಆದರೆ, ಈ ಬಾರಿ ಕೇವಲ ಶೇ.30 ಕಾಫಿ ಬೆಳೆಗಳು ಮಾತ್ರ ಹೂ ಬಿಟ್ಟಿದ್ದು, ಇನ್ನುಳಿದ ಶೇ.70 ಕಾಫಿ ಬೆಳೆಗಳು ನಷ್ಟವಾಗುವ ಸಾಧ್ಯತೆ ಇದೆ. ಇನ್ನು ಬೇಸಿಗೆಯ ಬಿಸಿ ಮೆಣಸು ಬೆಳೆ ಮೇಲೂ ಪರಿಣಾಮ ಬೀರಿದೆ. ಈ ಹಿನ್ನಲೆಯಲ್ಲಿ ಈ ಬಾರಿ ಕಾಫಿ ಮತ್ತು ಪೆಪ್ಪರ್ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ಇದೇ ರೀತಿ ರಾಜ್ಯದಲ್ಲಿ ಉಷ್ಣತೆ ಮುಂದುವರೆದು, ಮಳೆಯೂ ಬಾರದಿದ್ದರೆ ಕಾಫಿ ಮತ್ತು ಮೆಣಸು ಬೆಳೆ ಕುಸಿತವಾಗುತ್ತದೆ. 
ಕಳೆದ ವರ್ಷ ದೇಶದಲ್ಲಿ 3.5 ಲಕ್ಷ ಟನ್ ಕಾಫಿ ಉತ್ಪಾದನೆ ಮಾಡಲಾಗಿತ್ತು. ಕೊಡಗಿನ 1.10 ಲಕ್ಷ ಹೆಕ್ಟೇರ್ ನಲ್ಲಿ 1.6ಲಕ್ಷ ಟನ್ ಕಾಫಿ ಉತ್ಪಾದನೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಈ ಬಾರಿ ಕಾಫಿ ಉತ್ಪಾದನೆ ಶೇ.20ರಷ್ಟು ಇಳಿಕೆಯಾಗಿದೆ. ಸರಿಯಾದ ಸಮಯಕ್ಕೆ ಮಳೆ ಬಾರದೆ ಇರುವುದು ಮತ್ತು ಉಷ್ಣತೆ ಹೆಚ್ಚಾಗಿರುವುದು ಇದಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ. 
ಸರಿಯಾದ ಸಮಯದಲ್ಲಿ ಮಳೆ ಬಾರದೇ ಇರುವುದರಿಂದ ಮತ್ತಷ್ಟು ಕಾಫಿ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಭೂಮಿಯಲ್ಲಿ ನೀರಿನಂಶ ಪೂರ್ಣವಾಗಿ ಬತ್ತುಹೋಗಿದ್ದು, ಬೆಳೆದಿರುವ ಕೆಲವು ಕಾಫಿ ಗಿಡಗಳು ಒಣಗಿ ಹೋಗಿದೆ. ಬಾಣವಾರ, ಅಬ್ಬುರಕಟ್ಟೆ, ಎಡವರೆ ಮತ್ತು ಯಡವನಾಡು ಕಾಫಿ ಬೆಳಗಾರರು ಕಂಗಾಲಾಗಿದ್ದಾರೆ ಎಂದು ಮಡಿಕೇರಿ ಕಾಫಿ ಮಂಡಳಿ ಉಪ ನಿರ್ದೇಶಕ ಅನಂತ ಕುಮಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com