ಅಂಡಮಾನ್ ನಲ್ಲಿ ಮಾನವ ನೆಲೆಯಿಂದ ಮೊಸಳೆಗಳಿಗೆ ಬಿಡುಗಡೆ ಭಾಗ್ಯ

ದಕ್ಷಿಣ ಅಂಡಮಾನ್ ಜಿಲ್ಲೆಯಲ್ಲಿ ಮೊಸಳೆಗಳು ಜನರ ಮೇಲೆ ದಾಳಿ ನಡೆಸಿವೆ ಎಂಬ ವರದಿಗಳ ನಡುವೆ ಮನುಷ್ಯರು ನೆಲೆಸಿರುವ ಪ್ರದೇಶಗಳಿಂದ ಈ ಸರೀಸೃಪಗಳನ್ನು ಹೊರದಬ್ಬುವ ಕಾರ್ಯಕ್ಕೆ ಅರಣ್ಯ ಇಲಾಖೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಪೋರ್ಟ್ ಬ್ಲೇರ್: ದಕ್ಷಿಣ ಅಂಡಮಾನ್ ಜಿಲ್ಲೆಯಲ್ಲಿ ಮೊಸಳೆಗಳು ಜನರ ಮೇಲೆ ದಾಳಿ ನಡೆಸಿವೆ ಎಂಬ ವರದಿಗಳ ನಡುವೆ ಮನುಷ್ಯರು ನೆಲೆಸಿರುವ ಪ್ರದೇಶಗಳಿಂದ ಈ ಸರೀಸೃಪಗಳನ್ನು ಹೊರದಬ್ಬುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.
ಮನುಷ್ಯರು ನೆಲೆಸಿರುವ ಪ್ರದೇಶಗಳಲ್ಲಿ ಈ ಪ್ರಾಣಿಗಳು ಇರುವುದರ ಬಗ್ಗೆ ಸಮೀಕ್ಷೆ ನಡೆಸಿ ಅಲ್ಲಿಂದ ಅವುಗಳನ್ನು ಓಡಿಸಲು ಸಿಬ್ಬಂದಿಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಎಂ ಎಸ್ ನೇಗಿ ಆದೇಶಿಸಿದ್ದಾರೆ. 
ಮಾನವ ಮತ್ತು ಮೊಸಳೆ ಸಂಘರ್ಷವನ್ನು ತಡೆಯಲು ತಮ್ಮ ಇಲಾಖೆ ತೆಗೆದುಕೊಂಡಿರುವ ಮುನ್ನಚ್ಚೆರಿಕಾ ಕ್ರಮಗಳನ್ನು ಪರಿಶೀಲಿಸಲು ಅವರು ದಕ್ಷಿಣ ಅಂಡಮಾನ್ ನ ವಿವಿಧ ಪ್ರದೇಶಗಳಿಗೆ ಈ ವಾರದ ಮೊದಲ ಭಾಗದಲ್ಲಿ ತೆರಳಿದ್ದರು. 
ಮುಂದಾಪಹಾರ್ ಮತ್ತು ಹೊಸ ವಾಂದೂರ್ ಬಳಿಯ ಕಾರ್ಬಿನ್ಸ್ ಕೋವ್ ಗೆ ಭೇಟಿ ನೀಡಿದ ಸಮಯದಲ್ಲಿ ಅಧಿಕಾರಿಗಳಿಗೆ ಹೊಸ ಭಿತ್ತಿ ಹಲಗೆಗಳನ್ನು ಹಾಕಲು ಸೂಚಿಸಿದ್ದು, ಅವುಗಳಿಂದ ಹೊರಗೆ ಜನ ಈಜಾಡುವುದರಿಂದ ತಡೆಯಲು ತಿಳಿಸಿದ್ದಾರೆ. 
ಹೊಸ ಪ್ರವಾಸ ಋತುವಿನ ಪ್ರಾರಂಭಕ್ಕೂ ಮುಂಚಿತವಾಗಿ ಸುರಕ್ಷತೆಗಾಗಿ ಅಗತ್ಯ ಬಿದ್ದ ಕಡೆಗೆ ಬಲೆಗಳನ್ನು ಸರಿಪಡಿಸಲು ಕೂಡ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈಗಾಗಲೇ ಸುರಕ್ಷತೆಗಾಗಿ ಹಲವೆಡೆ ಶಾಲಾ ಮಕ್ಕಳು ನೀರಿಗೆ ಇಳಿಯದಂತೆ ಅರಣ್ಯ ಇಲಾಖೆ ಬೇಲಿ ಹಾಕಿದೆ. 
ಈ ಸಂಘರ್ಷಕ್ಕೆ ಗ್ರಾಮಸ್ಥರು ಕಸ ಬಿಸಾಕುವುದು ಕೂಡ ಒಂದು ಕಾರಣ ಎಂದಿರುವ ನೇಗಿ, ಸಮುದ್ರದ ಕೊರಕುಗಳಲ್ಲಿ ಕಸ ಎಸೆಯುವುದರಿಂದ, ಅದರೆಡೆಗೆ ಮೊಸಳೆಗಳು ಆಕರ್ಷಿತವಾಗುತ್ತವೆ ಎಂದು ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com