ಬಾಳೆಹಣ್ಣು ಅಳಿದುಹೋಗುವ ಎಚ್ಚರಿಕೆ ನೀಡಿದ ಸಸ್ಯ ರೋಗಶಾಸ್ತ್ರಜ್ಞ

ಬಹುಷಃ ವಿಶ್ವದಾದ್ಯಂತ ಅತಿ ಹೆಚ್ಚು ಮಾರಾಟವಾಗುವ ಹಣ್ಣು ಬಾಳೆ, ಇನ್ನೊಂದು ದಶಕದಲ್ಲಿ ಅಳಿದುಹೋಗುವ ಸಾಧ್ಯತೆ ಇದೆ ಎನ್ನುತ್ತದೆ ಅಧ್ಯಯನವೊಂದು.
ಬಾಳೆಹಣ್ಣು
ಬಾಳೆಹಣ್ಣು
ಸಿಡ್ನಿ: ಬಹುಷಃ ವಿಶ್ವದಾದ್ಯಂತ ಅತಿ ಹೆಚ್ಚು ಮಾರಾಟವಾಗುವ ಹಣ್ಣು ಬಾಳೆ, ಇನ್ನೊಂದು ದಶಕದಲ್ಲಿ ಅಳಿದುಹೋಗುವ ಸಾಧ್ಯತೆ ಇದೆ ಎನ್ನುತ್ತದೆ ಅಧ್ಯಯನವೊಂದು. 
ಮೂರು ಫಂಗಲ್ ರೋಗಗಳಿಂದ ಉದ್ಭವಿಸುವ ಸಿಗತೋಕ ಕಾಂಪ್ಲೆಕ್ಸ್ ಎಂಬ ಖಾಯಿಲೆಯಿಂದ ಈ ಅಪಾಯವಿದ್ದು ವಿಶ್ವ ಬಾಳೆಹಣ್ಣು ಪೂರೈಕೆಗೆ ಭಾರಿ ಮಾರಕ ಎಂದು ಬ್ರಿಟಿಷ್ ಮೂಲದ ಜರ್ನಲ್ ಪಿ ಎಲ್ ಓ ಎಸ್ ಜೆನೆಟಿಕ್ಸ್ ಪ್ರಕಟಿಸಿರುವುದಾಗ ಮಾಧ್ಯಮವೊಂದು ಮಂಗಳವಾರ ವರದಿ ಮಾಡಿದೆ. 
ಸಿಗತೋಕ ಕಾಂಪ್ಲೆಕ್ಸ್ ಫಂಗಲ್ ರೋಗಗಳಾದ, ಹಳದಿ ಸಿಗತೋಕ, ಯುಮುಸಾಏ ಎಲೆ ಮಚ್ಚೆ ಮತ್ತು ಕರಿ ಸಿಗತೋಕಗಳಿಂದ ಮುಂದಿನ 5 ರಿಂದ 10 ವರ್ಷಗಳಲ್ಲಿ ಬಾಳೆಹಣ್ಣಿನ ಪೂರೈಕೆಯನ್ನೇ ನಾಶಗೊಳಿಸುವ ಸಾಧ್ಯತೆ ಇದೆ ಎಂದು ಅಧ್ಯಯನದಲ್ಲಿ ಅಮೆರಿಕಾದ ಸಸ್ಯ ರೋಗಶಾಸ್ತ್ರಜ್ಞ ಲೊಅನ್ನಿಸ್ ಸ್ಟರ್ಗಿಯೋಪೌಲೌಸ್ ಹೇಳಿರುವುದಾಗಿ ವರದಿಯಾಗಿದೆ. 
ಬಾಳೆಹಣ್ಣಿನ ರೋಗನಿರೋಧಕ ಶಕ್ತಿಯನ್ನು ಕಳೆಗುಂದಿಸುವುದಲ್ಲದೆ ಕರಿ ಸಿಗತೋಕ ಸಸ್ಯದ ಸೆಲ್ ಗೋಡೆಗಳನ್ನು ಒಡೆಯುವ ಎನ್ಸೈಮ್ ಗಳನ್ನೂ ಕೂಡ ಉತ್ಪಾದಿಸುತ್ತದೆ ಎಂದು ಅಧ್ಯಯನ ತಿಳಿಸಿದೆ. 
ವಿಶ್ವದಾದ್ಯಂತ 140 ಮಿಲಿಯನ್ ಟನ್ ಬಾಳೆಹಣ್ಣು ಉತ್ಪಾದಿಸಲಾಗುತ್ತಿದ್ದು, ಭಾರತದಲ್ಲಿಯೇ 25 ಮಿಲಿಯನ್ ಬಾಳೆಹಣ್ಣು ಉತ್ಪಾದನೆಯಾಗುತ್ತದೆ. ವಿಶ್ವದ 10 ಮುಂಚೂಣಿ ಬಾಳೆಹಣ್ಣು ಉತ್ಪಾದನೆಯಲ್ಲಿ ಭಾರತವೂ ಒಂದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com