ಪ್ರಕೃತಿ ಜೊತೆಗೆ ಕಡಿದ ಸಂಪರ್ಕ ನಗರಗಳಲ್ಲಿ ಮಾನಸಿಕ ರೋಗಗಳನ್ನು ಹೆಚ್ಚಿಸಿದೆ: ಅಧ್ಯಯನ

ನಗರ ಪ್ರದೇಶಗಳಲ್ಲಿ ಮಾನಸಿಕ ರೋಗಗಳು ಮತ್ತು ಮನಸ್ಸಿನ ಭಾವನೆಗಳಲ್ಲಿನ ಅಸ್ವಾಭಾವಿಕ ಏರುಪೇರು ಸಾಮಾನ್ಯವಾಗಿದ್ದು, ಇದಕ್ಕೆ ಪೃಕೃತಿ ಜೊತೆಗಿನ ಒಡನಾಟ ಕಡಿಮೆಯಾಗಿರುವುದು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್: ನಗರ ಪ್ರದೇಶಗಳಲ್ಲಿ ಮಾನಸಿಕ ರೋಗಗಳು ಮತ್ತು ಮನಸ್ಸಿನ ಭಾವನೆಗಳಲ್ಲಿನ ಅಸ್ವಾಭಾವಿಕ ಏರುಪೇರು ಸಾಮಾನ್ಯವಾಗಿದ್ದು, ಇದಕ್ಕೆ ಪೃಕೃತಿ ಜೊತೆಗಿನ ಒಡನಾಟ ಕಡಿಮೆಯಾಗಿರುವುದು ಕಾರಣ ಎನ್ನುತ್ತಾರೆ ಸಂಶೋಧಕರು.

"ಪಾಕೃತಿಕ ವಾತಾವರಣದಿಂದ ನಮ್ಮನ್ನು ಬೇರ್ಪಡಿಸಿಕೊಂದಿರುವುದಕ್ಕೂ ಮತ್ತು ಅಸಂಖ್ಯಾತ ರೋಗಗಳಿಗೂ ಸಂಬಂಧವಿದೆ" ಎನ್ನುತ್ತಾರೆ ವಾಶಿಂಗ್ಟನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಪೀಟರ್ ಖಾನ್.

ಜರ್ನಲ್ ಆಫ್ ಸೈನ್ಸ್ ನಲ್ಲಿ ಪ್ರಕಟಿತವಾಗಿರುವ ಈ ಲೇಖನದಲ್ಲಿ ಸಮಾಜದಲ್ಲಿ ನಗರ ಕೇಂದ್ರಗಳು ಸ್ವಾಭಾವಿಕ ಪ್ರಕೃತಿಯಿಂದ ದೂರವುಳಿದು ನಾಗರಿಕರ ಮೇಲೆ ಸೃಷ್ಟಿಸುತ್ತಿರುವ ಒತ್ತಡವನ್ನು ಚರ್ಚಿಸಿದೆ.

"ನಗರದಲ್ಲಿ ಬೆಳೆಯುವ ಮಕ್ಕಳು ನಕ್ಷತ್ರಗಳನ್ನೇ ನೋಡುವುದಿಲ್ಲ. ನಕ್ಷತ್ರಗಳಿಂದ ಬೆಳಗುತ್ತಿರುವ ವಿಶಾಲ ಆಕಾಶದಡಿ ನಡೆಯದೆ ಇರುವುದನ್ನು ನೀವು ಊಹಿಸಿಕೊಳ್ಳಬಲ್ಲಿರಾ? ಅದು ಸೃಷ್ಟಿಸುವ ಬೆರಗು, ಕಲ್ಪನೆ ಎಲ್ಲವೂ ಮತ್ತೆ ಹೇಗೆ ಸಿಗಲು ಸಾಧ್ಯ" ಎಂದು ಕೇಳಿದ್ದಾರೆ ಖಾನ್.

"ನಾವು ದೊಡ್ಡ ದೊಡ್ಡ ನಗರಗಳನ್ನು ಕಟ್ಟಿದಂತೆ ಪೃಕೃತಿ ಜೊತೆಗಿನ ಸಂಬಂಧ ಕಳೆದುಕೊಳ್ಳುತ್ತಿದ್ದೇವೆ. ಇದು ನಮ್ಮ ಅಸ್ತಿತ್ವಕ್ಕೆ ಬಹಳ ಅವಶ್ಯಕ" ಎಂದು ಕೂಡ ಅವರು ಹೇಳಿದ್ದಾರೆ.

ನಾವು ಸೃಷ್ಟಿಸುವ ನಗರಗಳು ಹೆಚ್ಚೆಚ್ಚು ಪ್ರಾಕೃತಿಕ ಸೌಂದರ್ಯವನ್ನು ಒಳಗೊಳ್ಳುವಂತೆ ಮಾಡಬೇಕು ಎಂದು ಕೂಡ ಖಾನ್ ವಾದಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com