ಮೊದಲು ಭೂಮಿಯನ್ನು ಚೆನ್ನಾಗಿ ಹದ ಮಾಡಿಕೊಂಡು ಒಂದುವರೆ ಎಕರೆಯಲ್ಲಿ ಸಾಲಿನಿಂದ ಸಾಲಿಗೆ 6 ಅಡಿ ಸಸಿಯಿಂದ ಸಸಿಗೆ 5 ಅಡಿ ಅಂತರದಲ್ಲಿ ಅಂಗಾಂಶ ಕೃಷಿ ಜಿ-9 ಬಾಳೆ ಸಸಿಗಳನ್ನು ನಾಟಿ ಮಾಡಲಾಗಿದ್ದು, ನಾಟಿ ಮಾಡುವ ಪೂರ್ವದಲ್ಲಿ ಬೆಡ್ ನಿರ್ಮಾಣಕ್ಕೂ ಮುಂಚೆ 1 ಎಕರೆಗೆ 10 ಟನ್ ಕಾಂಪೋಸ್ಟ್ ಗೊಬ್ಬರ್, ಡಿಪಿಎ 75ಕೆಜಿ, ಅಮಿನೋ ಜಿ ಪ್ಲಸ್ 24 ಕೆಜಿ, ಎಸ್.ಎ.ಪಿ 80 ಕೆಜಿ ಹಾಗೂ 2 ಕೆಜಿಯಷ್ಟು ಮಿಕ್ಸ ಮಾಡಿ ಬೋದನಲ್ಲಿ ಹಾಕಿಕೊಂಡು ಹನಿ ನಿರಾವರಿ ಅಳವಡಿಸಿ ಬಾಳೆ ಸಸಿ ಲಾವಣಿ ಮಾಡಿಕೊಂಡು ತದನಂತರ ಅದೇ ಬಾಳೆಯಲ್ಲಿ ಮಿಶ್ರ ಬೆಳೆಯಾಗಿ ಪಪ್ಪಾಯಿ ತೈವಾನ್ ರೆಡ್ ಲೇಡಿ ಬೆಳೆಯನ್ನು ಸಾಲಿನಿಂದ ಸಾಲು 12 ಅಡಿ ಹಾಗೂ ಸಸಿಯಿಂದ ಸಸಿಗೆ 8 ಅಡಿ ಅಂದರೆ 1 ಸಾಲು ಬಿಟ್ಟು 1 ಸಾಲಿನಲ್ಲಿ ಎರಡು ಬಾಳೆ ಸಸಿಯ ಮಧ್ಯ ಪಪ್ಪಾಯಿ ಸಸಿಗಳನ್ನು ನಾಟಿ ಮಾಡಿಕೊಂಡೆವು. ಕಾರಣ ಇಷ್ಟೆ ಇದರಿಂದ ಪಪ್ಪಾಯಿಯಲ್ಲಿ ಕಾಣುವ ಮುಖ್ಯ ರೋಗ ಪಿಆರ್‍ಎಸ್‍ವಿ( ಪಪ್ಪಾಯಿ ರಿಂಗ್ ಸ್ಪಾಟ್ ವೈರಸ್) ತಕ್ಕ ಮಟ್ಟಿಗೆ ಅಂದರೆ 90% ರಷ್ಟು ಹತ್ತೋಟಿ ಆಗಿದೆ. ಅಂದರೆ ಒಂದೇ ಖರ್ಚಿನಲ್ಲಿ ಎರಡು ಬೆಳೆಗಳನ್ನು ಬೆಳೆಯಲು ಸಾಧ್ಯವಾಗಿದೆ. ಅಲ್ಲದೆ ಮುಖ್ಯವಾಗಿ ಕಾಡುವ ರಸಹೀರುವ ಕೀಟ್, ಹೇನುಗಳು ಕೂಡಾ ಹತೋಟಿಯಾಗಿವೆ. ತೋಟದ ಸುತ್ತಲೂ ಚೋಗಚೆಯನ್ನು ಕೂಡಾ ಹಾಕಿದ್ದೇವೆ ಎನ್ನುತ್ತಾರೆ ರೈತ ಧನಪಾಲ ಯಲ್ಲಟ್ಟಿ.