ಹಿಂಸಾಚಾರದ ಮೇಲೆ ಹವಾಮಾನದ ಪರಿಣಾಮ: ವಿಜ್ಞಾನಿಗಳ ಅಧ್ಯಯನ

ಹವಾಮಾನ ವೈಪರೀತ್ಯ, ಬಿಸಿಲು, ತಂಪು ಹೇಗೆ ಮಾನವನ ಮನಸ್ಸು ಮತ್ತು ವರ್ತನೆ ಮೇಲೆ ಪರಿಣಾಮ...
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ವಾಷಿಂಗ್ಟನ್: ಹವಾಮಾನ ವೈಪರೀತ್ಯ, ಬಿಸಿಲು, ತಂಪು ಹೇಗೆ ಮಾನವನ ಮನಸ್ಸು ಮತ್ತು ವರ್ತನೆ ಮೇಲೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಅಮೆರಿಕದ ವ್ರಿಜೆ ವಿಶ್ವವಿದ್ಯಾಲಯದ ಅಮ್ಸ್ಟೆರ್ಡಾಮ್ ನ ವಿಜ್ಞಾನಿಗಳಾದ ಪೌಲ್ ವಾನ್ ಲಂಗೆ ಮತ್ತು ಮರಿಯಾ ಐ ರಿಂದೆರು ಮತ್ತು ಬ್ರಾಡ್ ಬುಷ್ಮನ್ ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ. ಇವರು ತಯಾರಿಸಿ ಅಭಿವೃದ್ಧಿಪಡಿಸಿದ ಮಾದರಿಗೆ ಕ್ಲಾಶ್ (ಕ್ಲೈಮೇಟ್ ಅಗ್ರೆಶ್ಶನ್, ಅಂಡ್ ಸೆಲ್ಫ್ ಕಂಟ್ರೋಲ್ ಇನ್ ಹ್ಯೂಮನ್ಸ್) ಎಂದು ಕರೆದಿದ್ದಾರೆ. ಅತಿಯಾದ ಉಷ್ಣತೆಯಲ್ಲಿರುವವರು ಹೆಚ್ಚು ಆಕ್ರಮಣಕಾರಿ ವರ್ತನೆಯನ್ನು ಹೊಂದಿರುತ್ತಾರೆ ಎಂದು ಅಧ್ಯಯನ ತಿಳಿಸಿದೆ.

ತುಂಬಾ ಬಿಸಿಯಾದ ವಾತಾವರಣ ಮತ್ತು ಋತುಗಳಲ್ಲಿ ಹವಾಮಾನದಲ್ಲಿ ಬದಲಾವಣೆ ಕಡಿಮೆಯಿದ್ದರೆ, ಅಲ್ಲಿಯ ಜನರು ವೇಗದ ಜೀವನ ತಂತ್ರ ರೂಪಿಸುವವರಾಗಿದ್ದು, ಭವಿಷ್ಯದ ಬಗ್ಗೆ ಕಡಿಮೆ ಗಮನ ಕೊಡುತ್ತಾರೆ. ಕಡಿಮೆ ಸ್ವ ನಿಯಂತ್ರಣ ಹೊಂದಿದ್ದು, ಹೆಚ್ಚು ಆಕ್ರಮಣಶೀಲತೆ ಮತ್ತು ಹಿಂಸಾಚಾರದ ಮನೋಭಾವ ಹೊಂದಿರುತ್ತಾರೆ.

ನಮ್ಮ ದಿನ ನಿತ್ಯದ ಜೀವನದ ಮೇಲೆ, ಸಂಸ್ಕೃತಿ ಮೇಲೆ ಹವಾಮಾನ ಪರಿಣಾಮ ಬೀರುತ್ತದೆ. ನಮ್ಮ ಸಂಶೋಧನೆಯಿಂದ ವಿಶ್ವದ ವಿವಿಧ ಭಾಗಗಳಲ್ಲಿ ಹಿಂಸೆಯ ಮೇಲೆ ಹವಾಮಾನ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಜನರು ತಿಳಿದುಕೊಳ್ಳಬಹುದು ಎನ್ನುತ್ತಾರೆ ವಾನ್ ಲಂಗೆ.

ಹೆಚ್ಚು ಉಷ್ಣತೆ ಜನರಲ್ಲಿ ಕಿರಿಕಿರಿ, ಆಕ್ರಮಣ ಮನೋಭಾವವನ್ನು ಹುಟ್ಟುಹಾಕಬಹುದು. ಹಾಗೆಂದು ಕೊಲೆ ಮಾಡುವಂತಹ ಮನೋಭಾವವನ್ನು ಹುಟ್ಟುಹಾಕುವುದಿಲ್ಲ ಎನ್ನುತ್ತಾರೆ ಮತ್ತೊಬ್ಬ ಸಂಶೋಧಕ ಬುಷ್ಮನ್.

ಕೇವಲ ಸೆಖೆ ಮಾತ್ರವಲ್ಲ, ಉಷ್ಣಾಂಶದಲ್ಲಿ ಬದಲಾವಣೆಯಾಗದಿದ್ದರೆ ಕೂಡ ಹಿಂಸಾತ್ಮಕ ಮನೋಭಾವ ವ್ಯಕ್ತಿಯಲ್ಲಿ ಬೆಳೆಯುವುದು ಹೆಚ್ಚು. ಋತುಮಾನಗಳಲ್ಲಿ ಉಷ್ಣಾಂಶದಲ್ಲಿ ಬದಲಾಗುವುದರಿಂದ ಜನಜೀವನ, ಸಂಸ್ಕೃತಿ ಮೇಲೆ ಕೂಡ ಭಾರಿ ಪರಿಣಾಮ ಬೀರುತ್ತದೆ. ಹವಾಮಾನದ ಬದಲಾವಣೆಗೆ ತಕ್ಕಂತೆ ಬಟ್ಟೆಬರೆ ಧರಿಸುವುದು, ಆಹಾರ ತಯಾರಿಸುವುದು, ಸಂಗ್ರಹಿಸಿಡುವುದರಲ್ಲಿ ತೊಡಗುತ್ತೇವೆ.

ವಿಶ್ವಾದ್ಯಂತ ಹಿಂಸಾಚಾರ ವ್ಯತ್ಯಾಸಗಳಿಗೆ ಈ ಅಧ್ಯಯನ ಗಟ್ಟಿಯಾದ ಚೌಕಟ್ಟನ್ನು ಒದಗಿಸಿಕೊಡುತ್ತದೆ ಎಂದು ಸಂಶೋಧಕರು ನಂಬಿದ್ದಾರೆ. ಈ ಅಧ್ಯಯನ ಬಿಹೇವಿಯರಲ್ ಮತ್ತು ಬ್ರೈನ್ ಸೈನ್ಸಸ್ ನಲ್ಲಿ ಪ್ರಕಟಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com