20 ಎಕರೆ ಭೂಮಿಯಲ್ಲಿ ಏನೆನೂ ಬೆಳೆದಿದ್ದಾರೆ ಅಂದರೆ ನಮಗೆ ಆಶ್ಚರ್ಯವೆನಿಸಬಹುದು. ಇವರ ಜಮೀನನಲ್ಲಿ ಹಲವಾರು ವಿದಧ ಬೆಳೆಗಳು ನಮ್ಮ ಕಣ್ಣಿಗೆ ಬಿಳುತ್ತವೇ ಈ ಎಲ್ಲಾ ಬೆಳೆಗಳಿಗೆ ಸೂಕ್ತವಾಗಿ ನೀರು ಹರಿಸಲು ತಮ್ಮ ಸ್ವಂತ: ತೋಟದಲ್ಲೆ ಎರಡು ಬೋರ್‍ವೆಲ್ ಹಾಕಿಸಿದ್ದಾರೆ. 4 ಎಕರೆ ಕಬ್ಬು , 3 ಎಕರೆ ನಿಂಬೆತೋಟ, 3 ಎಕರೆ ಚಿಕ್ಕು ಹಣ್ಣು (ಸಪೋಟಾ), 1 ಎಕರೆ ಟಮೋಟಾ, 1 ಎಕರೆ ಬದನೆಕಾಯಿ, 1 ಎಕರೆ ಡಬ್ಬು ಮೆಣಸಿನಕಾಯಿ 1 ಎಕರೆ ಈರುಳ್ಳಿ ಮತ್ತು 6 ಎಕರೆ ತೋಗರಿ. ಇವೇಲ್ಲಾ ಬೆಳೆಗಳಿಂದ ವರ್ಷಕ್ಕೆ ಎರಡು ಪಸಲನ್ನು ತೆಗೆಯುತ್ತಾರೆ.