ಈ ಬಾರಿ ರಾಷ್ಟ್ರಪ್ರಶಸ್ತಿ ಪಡೆದ ರಾಜ್ಯದ ಏಕೈಕ ರೈತ ಧರೆಪ್ಪ ಕಿತ್ತೂರ

ವಿಭಿನ್ನ ಆಲೋಚನೆಯ ಸಾವಯವ ಕೃಷಿಕ ಪ್ರಯೋಗ ಶೀಲ ರೈತ ಧರೆಪ್ಪ ಕಿತ್ತೂರ ಅವರು ಕೇಂದ್ರ...
ಧರೆಪ್ಪ ಕಿತ್ತೂರ
ಧರೆಪ್ಪ ಕಿತ್ತೂರ
ಬನಹಟ್ಟಿ(ಬಾಗಲಕೋಟೆ): ವಿಭಿನ್ನ ಆಲೋಚನೆಯ ಸಾವಯವ ಕೃಷಿಕ, ಪ್ರಯೋಗ ಶೀಲ ರೈತ ಧರೆಪ್ಪ ಕಿತ್ತೂರ ಅವರು ಕೇಂದ್ರ ಸರ್ಕಾರದ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ನೀಡುವ ಐಎಆರ್‍ಐ ಮೆಡಲ್ ಫಾರ್ಮರ್ ಫೆಲೋ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬೆಳೆಗಳಿಗೆ ಸಂಗೀತ ಆಲಾಪನೆ ಸೇರಿದಂತೆ ಕೃಷಿಯಲ್ಲಿ ಯಾವಾಗಲೂ ವಿನೂತನ ಪ್ರಯೋಗ ಮಾಡುವ ತೇರದಾಳದ ಈ ಧರೆಪ್ಪ ಕಿತ್ತೂರ ಅವರು, ಕಡಿಮೆ ನೀರಿನಲ್ಲೂ ವಾತಾವರಣ ಹಾಗೂ ಮಾರುಕಟ್ಟೆಯ ಬಗ್ಗೆ ತಿಳಿದು ಕೊಂಡು ಬೆಳೆ ಬೆಳೆದು ಕೃಷಿಯ ಬಗ್ಗೆ ಇತರರಿಗೂ ಮಾಹಿತಿ ನೀಡುತ್ತಾ ಈ ಭಾಗದ ಮಾದರಿ ರೈತರಾಗಿದ್ದಾರೆ.
ಧರೆಪ್ಪ ಕಿತ್ತೂರ ಅವರು ಕೃಷಿಯಲ್ಲಿ ಸಂಶೋಧನೆ, ತಂತ್ರಜ್ಞಾನ, ಹೊಸ ಆವಿಷ್ಕಾರಗಳ ಪರಿಚಯ ಮತ್ತು ಅದರ ಪ್ರಸರಣ ಕಾರ್ಯ ಗುರುತಿಸಿ ಕೇಂದ್ರ ಸರ್ಕಾರ ಅವರಿಗೆ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದೆ.
ಈ ಬಾರಿ ದೇಶಾದ್ಯಂತ ನಾಲ್ವರು ರೈತರು ರಾಷ್ಟ್ರಮಟ್ಟದ ಈ ಪ್ರಶಸ್ತಿಗೆ ಭಾಜನಾರಾಗಿದ್ದು. ಅದು ಕರ್ನಾಟಕದಿಂದ ಆಯ್ಕೆಯಾದ ಏಕೈಕ ರೈತ ಧರೆಪ್ಪ ಕಿತ್ತೂರ. ಪಂಜಾಬ, ಉತ್ತರ ಪ್ರದೇಶ ಮತ್ತು ಬಿಹಾರದಿಂದ ಇತರೆ ಮೂವರು ರೈತರನ್ನು ಆಯ್ಕೆ ಮಾಡಲಾಗಿದೆ. 
ಈ ಪ್ರಶಸ್ತಿಗೆ ಆಯ್ಕೆಯಾದ ರೈತರು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಅಧ್ಯಯನ ಮಾಡುವ ಕೃಷಿ ತಜ್ಞರಿಗೆ ಪಾಠ ಹೇಳುವ ಅತಿಥಿಯಾಗಲಿದ್ದಾರೆ. ಮಾ. 19 ರಿಂದ 21ರ ವರೆಗೆ ನಡೆಯಲಿರುವ ರಾಷ್ಟ್ರೀಯ ಕೃಷಿ ಉನ್ನತಿ ಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ರಾಧಾ ಮೋಹನ ಸಿಂಗ್ ಅವರಿಂದ ಧರೆಪ್ಪ ಕಿತ್ತೂರ ಅವರು ಪ್ರಶಸ್ತಿ ಪಡೆಯಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com