ಅರಣ್ಯನಾಶದ ವಿರುದ್ಧ ಧ್ವನಿ ಎತ್ತಲಿರುವ ಪರಿವರ್ತಿತ ಚಂಬಲ್ ಕಣಿವೆ ಡಕಾಯಿತರು

ಬದಲಾಗಿರುವ ಚಂಬಲ್ ಕಡಿವೆಯ ಮಾಜಿ ಡಕಾಯಿತರು, ಪರಿಸರ ಉಳಿಸಲು ಅರಣ್ಯನಾಶದ ವಿರುದ್ಧ ಚಳುವಳಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ.
ಚಂಬಲ್ ಕಣಿವೆಯ ಒಂದು ದೃಶ್ಯ
ಚಂಬಲ್ ಕಣಿವೆಯ ಒಂದು ದೃಶ್ಯ

ಜೈಪುರ: ಬದಲಾಗಿರುವ ಚಂಬಲ್ ಕಡಿವೆಯ ಮಾಜಿ ಡಕಾಯಿತರು, ಪರಿಸರ ಉಳಿಸಲು ಅರಣ್ಯನಾಶದ ವಿರುದ್ಧ ಚಳುವಳಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ.

ಅಂತರಾಷ್ಟ್ರೀಯ ಅರಣ್ಯ ದಿನವಾದ ಭಾನುವಾರದಂದು ೨೫ಕ್ಕೂ ಹೆಚ್ಚು ಮಾಜಿ ಡಕಾಯಿತರು ಜೈಪುರದಲ್ಲಿ ಒಂದೇ ಸೂರಿನಡಿ ಸೇರಿ, ಯಾವ ವ್ಯವಸ್ಥೆಯ ವಿರುದ್ಧವೂ ಅಲ್ಲ, ಯಾವ ವ್ಯಕ್ತಿಯ ವಿರುದ್ಧವೂ ಅಲ್ಲ ನಮ್ಮ ಹೋರಾಟ ಮಾಲಿನ್ಯ ಮತ್ತು ಅರಣ್ಯ ನಾಶದ ವಿರುದ್ಧ ಎಂದಿದ್ದಾರೆ.

ಪರಿಸರ ಮತ್ತು ಅರಣ್ಯ ನಾಶದ ಬಗ್ಗೆ ಜನರಿಗೆ ಅರಿವು ಮೂಡಿಸಲು ಮೊದಲು ಎನ್ನಬಹುದಾದ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಈಗ ಹೊಸ ಗುರಿ ಹೊಂದಿರುವ ಈ ಮಾಜಿ ಡಕಾಯಿತರು, ನಾವು ಕಾಡಿನಲ್ಲಿರಬೇಕಾದರೆ ಅರಣ್ಯ ನಾಶ ಬಹಳ ಕಡಿಮೆ ಇತ್ತು. ನಾವೆಲ್ಲರೂ ಕಾಡನ್ನು ರಕ್ಷಿಸುತ್ತಿದ್ದೆವು, ಏಕೆಂದರೆ ಅದು ನಮಗೆ ರಕ್ಷಣೆ ನೀಡುತ್ತಿತ್ತು ಎಂದಿದ್ದಾರೆ.

ಅವರು ಈಗ ಕಾಡನ್ನು ತೊರೆದಿದ್ದು, ಈ ಎಲ್ಲ ಮಾಜಿ ಡಕಾಯಿತರು ಒಟ್ಟಾಗಿ ಸೇರಿ ಪರಿಸರಕ್ಕೆ ಬಹಳ ಪ್ರಮುಖವಾಗಿರುವ ಕಾಡ-ಮರಗಳನ್ನು ಉಳಿಸಲು ಮುಂದಾಗಿದ್ದಾರೆ.

ಕಲ್ಪತರು ಎಂಬ ಎನ್ ಜಿ ಒ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇವರೆಲ್ಲರೂ ಮರಗಳನ್ನು ಮತ್ತು ಕಾಡುಗಳನ್ನು ಉಳಿಸುವ ವಚನ ತೆಗೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com