ಪ್ರತಿ 4 ದಿನಗಳಿಗೊಮ್ಮೆ ವಾತಾವರಣಕ್ಕೆ ಅನುಗುಣವಾಗಿ ಕಾರ್ಬನ ಡೈಜಿಮ್, ಹೆಗ್ಜಾಕೊನಾಜೋಲ್, ಪ್ರೋಪಿಕೊನಾಜೋಲ್‍ನಂತಹ ಶಿಲಿಂಧ್ರ ನಾಶಕ ಸಿಂಪಡಿಸುವುದರ ಜೊತೆಗೆ ಬೆಳೆಯ ಬೆಳವಣಿಗೆಗೆ ಉತ್ತೇಜನ ಒದಗಿಸುವ ಸಲುವಾಗಿ ಆ್ಯಂಪಲ್, ಮಿಂಗಲ್ ಮತ್ತು ಉಪಮ್ ನಂತಹ ಸಿಂಪರಣೆಗಳನ್ನು ನೀಡಿದ್ದಾರೆ ಮತ್ತು ಹಚ್ಚಿದ ಎಂಟು ದಿನಗಳ ನಂತರ ಪ್ರತಿ 2ದಿನಕ್ಕೊಮ್ಮೆ ನೀರಿನಲ್ಲಿ ಕರಗುವ ಎಸ್‍ಎಪಿ, ಸಾರಜನಕ, 19:19:19, 12:61, 30:0:45, 0:0:50 ಗೊಬ್ಬರಗಳನ್ನು ಬಳಸಲಾಗಿದೆ. ಬೆಳೆಗಳಿಗೆ ಡ್ರಿಪ್ ಮೂಲಕ ನೀರು ಒದಗಿಸಲಾಗುತ್ತಿದ್ದು, ಹಚ್ಚಿದ 1 ರಿಂದ 10 ದಿನಗಳ ವರೆಗೆ ಒಂದು ದಿನಕ್ಕೆ 20 ನಿಮಿಷ, 10 ರಿಂದ 20 ದಿನಗಳ ವರೆಗೆ 30ರಿಂದ 40 ನಿಮಿಷ, 20 ರಿಂದ 35 ದಿನಗಳವರೆಗೆ 1 ತಾಸು, 35ರಿಂದ 45 ದಿನಗಳವರೆಗೆ 1 ವರೆ ತಾಸು, 45ರಿಂದ 50ದಿನಗಳ ವರೆಗೆ 2 ತಾಸು ನಂತರ 50 ರಿಂದ 55 ದಿನಗಳವರೆಗೆ 1 ತಾಸು ಹೀಗೆ ದಿನಕಳೆದಂತೆ ನೀರಿನ ಪ್ರಮಾಣ ಕಡಿಮೆ ಮಾಡುತ್ತಾ ಬಂದಿದ್ದೇವೆ ಇದರಿಂದ ಕಡಿಮೆ ನೀರಿನಲ್ಲಿ ಉತ್ತಮ ಬೆಳೆ ಹಾಗೂ ಲಾಭ ಮಾಡಿಕೊಳ್ಳಬಹುದು ಎಂದು ಧನಪಾಲ್ ಹೇಳುತ್ತಾರೆ.