ಕೃಷಿ ಕಾಯಕದಲ್ಲಿ ತೊಡಗಿ ಸ್ಪೂರ್ತಿಯಾಗಿರುವ ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ

60 ವರ್ಷ ಕಳೆದ ನಂತರ ಇಳಿ ವಯಸ್ಸಿನಲ್ಲಿ ಬದುಕಿದ್ದು, ಆಚೀಚೆ ಓಡಾಡಿಕೊಂಡು ತಮ್ಮ ಕೆಲಸ ತಾವು ಮಾಡಿಕೊಂಡಿರುವುದೇ...
ಇಡುಕ್ಕಿಯ ತಮ್ಮ ಜಮೀನಿನಲ್ಲಿ ಪಪ್ಪಚನ್ ಮತ್ತು ತ್ರೆಸ್ಸ್ಯಮ್ಮ ದಂಪತಿ
ಇಡುಕ್ಕಿಯ ತಮ್ಮ ಜಮೀನಿನಲ್ಲಿ ಪಪ್ಪಚನ್ ಮತ್ತು ತ್ರೆಸ್ಸ್ಯಮ್ಮ ದಂಪತಿ
Updated on
ಇಡುಕ್ಕಿ: 60 ವರ್ಷ ಕಳೆದ ನಂತರ ಇಳಿ ವಯಸ್ಸಿನಲ್ಲಿ ಬದುಕಿದ್ದು, ಆಚೀಚೆ ಓಡಾಡಿಕೊಂಡು ತಮ್ಮ ಕೆಲಸ ತಾವು ಮಾಡಿಕೊಂಡಿರುವುದೇ ಕಷ್ಟ ಎಂಬ ಪರಿಸ್ಥಿತಿ ಇರುವ ಇಂದಿನ ಕಾಲದಲ್ಲಿ ಶತಾಯುಷಿಯೊಬ್ಬರು ಈಗಲೂ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆ ಮಾಡುತ್ತಿದ್ದಾರೆ ಎಂದರೆ ಆಶ್ಚರ್ಯವಾಗುವುದಿಲ್ಲವೇ? ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿರುವವರು ಅವರ ಪತ್ನಿ, ಅವರಿಗೂ ವಯಸ್ಸು 80 ದಾಟಿದೆ.ಇವರಿಬ್ಬರ ದಾಂಪತ್ಯ, ಕೆಲಸದ ವಿಧಾನ ಬೇರೆಯವರಿಗೆ ಮಾದರಿಯಾಗಿದೆ.
ಶತಾಯುಷಿ ಕಲಪ್ಪುರಕಲ್ ಪಪ್ಪಚನ್ ಮತ್ತು ಅವರ ಪತ್ನಿ ತ್ರೆಸ್ಸ್ಯಮ್ಮ ಅವರಿಗೆ ಕೃಷಿ ಕೆಲಸ ಮಾಡಿಕೊಂಡಿರದೆ ದಿನ ಕಳೆಯಲು ಸಾಧ್ಯವೇ ಇಲ್ಲವಂತೆ. ಮೂಲತಃ ಕೇರಳದ ಪಾಲದವರಾಗಿರುವ ಪಪ್ಪಚನ್ 1952ರಲ್ಲಿಯೇ ತಮ್ಮ ಹುಟ್ಟಿದ ಊರನ್ನು ಬಿಟ್ಟು ಇಡುಕ್ಕಿಗೆ ಬಂದರು. ಅಲ್ಲಿ ದೊಡ್ಡ ಜಮೀನು ಖರೀದಿಸಿದರು. ಸ್ವಾತಂತ್ರ್ಯ ಹೋರಾಟಗಾರರಾದ ಪಪ್ಪಚನ್ ಅಂತಹ ಜಮೀನು ಖರೀದಿಸಿದ್ದು ಮನೆಯವರಾರಿಗೂ ಇಷ್ಟವಾಗಲಿಲ್ಲವಂತೆ. ಸ್ವತಃ ಅವರ ಪತ್ನಿಗೆ ಕೂಡ. ಎಲ್ಲರ ಭಾವನೆಯನ್ನು ಸುಳ್ಳಾಗಿಸಿ ಆ ಜಮೀನಿನಲ್ಲಿ ಕೃಷಿ ಮಾಡಿ ಸಾಧಿಸಿ ತೋರಿಸಿದ್ದಾರೆ.
''ಭೂಮಿಯಲ್ಲಿ ಮೈ ಬಗ್ಗಿಸಿ ದುಡಿಯುವುದರಿಂದಾಗಿಯೇ ನನ್ನ ದೇಹ ಇಂದಿಗೂ ಆರೋಗ್ಯವಾಗಿದೆ. ದುಡಿಯುವುದು ನನ್ನ ಅಭ್ಯಾಸ, ಅದಿಲ್ಲದೆ ನಾನು ಬದುಕಲೇ ಸಾಧ್ಯವಿಲ್ಲ''ಎನ್ನುತ್ತಾರೆ ಪಪ್ಪಚನ್. ಇದಕ್ಕೆ ಅವರ ಪತ್ನಿಯೂ ಈ ಇಳಿ ವಯಸ್ಸಿನಲ್ಲಿಯೂ ದುಡಿಯುವುದು ಏಕೆ ಎಂದು ಬೇಸರ ಮಾಡಿಕೊಳ್ಳದೆ ಸಹಕಾರ ನೀಡುತ್ತಾ ಬಂದಿದ್ದಾರೆ.
ಯೌವ್ವನದಲ್ಲಿ ಕಟ್ಟಪನದಲ್ಲಿ ಭೋಗ್ಯಕ್ಕೆ ತೆಗೆದುಕೊಂಡ ಜಮೀನಿನಲ್ಲಿ ಕೃಷಿ ಮಾಡಲು ಮುಂದಾದಾಗ ಯಾರೂ ಸಹಾಯ ಮಾಡಲು ಮುಂದೆ ಬರಲಿಲ್ಲವಂತೆ. ಆಗ ಕೈಯಲ್ಲಿ ದುಡ್ಡಿರಲಿಲ್ಲ. ಜೀವನಕ್ಕೂ ಕಷ್ಟವಿತ್ತು. ಆದರೆ ಈಗಿನಂತೆ ಕೂಲಿಕಾರರ ಸಮಸ್ಯೆ ಆ ದಿನಗಳಲ್ಲಿರಲಿಲ್ಲ. ಹಾಗಾಗಿ ಅಲ್ಪಸ್ವಲ್ಪ ಕೂಲಿಯವರ ಸಹಾಯದಿಂದ ಕಷ್ಟಪಟ್ಟು ದುಡಿದು ಜಮೀನಿನಲ್ಲಿ ಬೆಳೆ ಬೆಳೆದೆ ಎನ್ನುತ್ತಾರೆ ಪಪ್ಪಚನ್.
ಲೀಸ್ ಗೆ ತೆಗೆದುಕೊಂಡ ಜಮೀನಿನಲ್ಲಿ ಬೆಳೆ ಬೆಳೆದು ಹುಷಾರಾಗಿದ್ದನ್ನು ಕಂಡ ಅವರ ಸಹೋದರರು ಕೂಡ ಒಟ್ಟಾಗಿ ಜಮೀನು ಖರೀದಿಸೋಣ ಎಂದರಂತೆ. 1955ರ ವೇಳೆಯಲ್ಲಿ 20 ಎಕರೆ ಜಮೀನು ಪಡೆದು ಅದರಲ್ಲಿ ಭತ್ತ ಸೇರಿದಂತೆ ಎಲ್ಲಾ ರೀತಿಯ ಬೆಳೆಗಳನ್ನು ಬೆಳೆಯತೊಡಗಿದರು. ಈ ಮಧ್ಯೆ 1944ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಕ್ಕಾಗಿ 10 ದಿನಗಳ ಕಾಲ ಪಪ್ಪಚನ್ ಜೈಲಿನಲ್ಲಿದ್ದರು. ಅಲ್ಲಿ ಅವರಿಗೆ ಹೋರಾಟದ ಕಿಚ್ಚು ಹತ್ತಿಕೊಂಡಿತು. ತನ್ನ ತಾಯಿಯ ನಿಧನದ ನಂತರ 5ನೇ ತರಗತಿಗೆ ಓದು ನಿಲ್ಲಿಸಿದರು.  
ಈ 100ರ ವಯಸ್ಸಿನಲ್ಲಿಯೂ ಪಪ್ಪಚನ್ ಶಿಸ್ತಿನ ಜೀವನ ಶೈಲಿ ಅಳವಡಿಸಿಕೊಂಡಿರುವುದರಿಂದ ಯಾವುದೇ ರೋಗವಿಲ್ಲದೆ ಜೀವನ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com