ಗುಜರಾತಿನಲ್ಲಿ ನೀಲ್ಗಾಯ್ ಗುಳುಂ ಮಾಡಿದ 20 ಅಡಿ ಉದ್ದದ ಹೆಬ್ಬಾವು

ಹೆಬ್ಬಾವು ತನಗಿಂತಲೂ ದೊಡ್ಡಾದಾದ ಬೇಟೆಯನ್ನು ನುಂಗುವ ಸಾಮರ್ಥ್ಯ ಹೊಂದಿರುತ್ತದೆ ಎಂದು ಹೇಳಲಾಗುತ್ತದೆ. ಇಂತಹ ಒಂದು ಘಟನೆಯಲ್ಲಿ ಗುಜರಾತಿನ ಜುನಾಗಢ ಜಿಲ್ಲೆಯಲ್ಲಿ 20 ಅಡಿ ಹೆಬ್ಬಾವು
ನೀಲ್ಗಾಯ್ ಗುಳುಂ ಮಾಡಿದ 20 ಅಡಿ ಉದ್ದದ ಹೆಬ್ಬಾವು
ನೀಲ್ಗಾಯ್ ಗುಳುಂ ಮಾಡಿದ 20 ಅಡಿ ಉದ್ದದ ಹೆಬ್ಬಾವು
ಜುನಾಗಢ: ಹೆಬ್ಬಾವು ತನಗಿಂತಲೂ ದೊಡ್ಡಾದಾದ ಬೇಟೆಯನ್ನು ನುಂಗುವ ಸಾಮರ್ಥ್ಯ ಹೊಂದಿರುತ್ತದೆ ಎಂದು ಹೇಳಲಾಗುತ್ತದೆ. ಇಂತಹ ಒಂದು ಘಟನೆಯಲ್ಲಿ ಗುಜರಾತಿನ ಜುನಾಗಢ ಜಿಲ್ಲೆಯಲ್ಲಿ 20 ಅಡಿ ಹೆಬ್ಬಾವು ದೊಡ್ಡ ನೀಲ್ಗಾಯ್ ಒಂದನ್ನು ಹಿಡಿದು ಗುಳುಂ ಮಾಡಿದ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. 
ಜುನಾಗಢದ ಗಿರ್ನಾರ್ ವನ್ಯಜೀವಿ ಅಭಯಾರಣ್ಯದ ಸಿಬ್ಬಂದಿಗೆ ರೈತರೊಬ್ಬರು ಮಾಹಿತಿ ನೀಡಿದ ನಂತರ ಅವರು ಸ್ಥಳಕ್ಕೆ ಆಗಮಿಸಿದ್ದರು. "ಹೆಬ್ಬಾವು ಅಭಯಾರಣ್ಯದ ಸುತ್ತಮುತ್ತ ಸುಳಿದಾಡುತ್ತಿರುತ್ತದೆ, ಆದರೆ ಅದು ಕಣ್ಣಿಗೆ ಬೀಳುವುದು ಕಡಿಮೆ. ದೊಡ್ಡ ಪ್ರಾಣಿಯೊಂದನ್ನು ನುಂಗಿರುವ ವಿಷಯ ನಮಗೆ ದೂರವಾಣಿಯಲ್ಲಿ ತಿಳಿಯಿತು. ನಾವು ಕೂಡಲೇ ರಕ್ಷಣಾ ತಂಡವನ್ನು ಕಳುಹಿಸಿದೆವು, ಆಗ ಹೆಬ್ಬಾವು ನೀಲ್ಗಾಯ್ ಹಿಡಿದು ತಿಂದಿರುವುದಾಗಿ ತಿಳಿಯಿತು" ಎಂದು ಸಹ ವನ್ಯ ಸಂರಕ್ಷಕ ಎಸ್ ಡಿ ತಿಲಾಲ ಹೇಳಿದ್ದಾರೆ. 
ಸದ್ಯಕ್ಕೆ ಹೆಬ್ಬಾವನ್ನು ಸೆರೆ ಹಿಡಿದಿರುವ ವನ್ಯ ಜೀವಿ ಸಂರಕ್ಷಕ ತಂಡ, ಅದು ನೀಲ್ಗಾಯ್ ಅನ್ನು ಜೀರ್ಣಿಸಿಕೊಂಡ ನಂತರ ಕಾಡಿಗೆ ಬಿಡುವುದಾಗಿ ತಿಲಾಲ ಹೇಳಿದ್ದಾರೆ. 
"ಅದು 18-20 ಅಡಿ ಉದ್ದದ ಹೆಬ್ಬಾವು. ನಾವು ಅದನ್ನು ಪರಿವೀಕ್ಷಣೆಯಲ್ಲಿಟ್ಟು, ಗ್ರಾಮಸ್ಥರಿಗೆ ತೊಂದರೆಯಾಗದಂತೆ ದೂರದ ಕಾಡಿನಲ್ಲಿ ಬಿಡುತ್ತೇವೆ" ಎಂದು ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com