ಭಾರತೀಯ ರೈತರ ಬೆಳೆ ಇಳುವರಿ ಹೆಚ್ಚಿಸಲು ಮೈಕ್ರೋಸಾಫ್ಟ್ ಕೃತಕ ಬುದ್ಧಿಮತ್ತೆ ನೆರವು
ಭಾರತೀಯ ರೈತರ ಬೆಳೆ ಇಳುವರಿ ಹೆಚ್ಚಿಸಲು ಮೈಕ್ರೋಸಾಫ್ಟ್ ಕೃತಕ ಬುದ್ಧಿಮತ್ತೆ ನೆರವು

ಭಾರತೀಯ ರೈತರ ಬೆಳೆ ಇಳುವರಿ ಹೆಚ್ಚಿಸಲು ಮೈಕ್ರೋಸಾಫ್ಟ್ ಕೃತಕ ಬುದ್ಧಿಮತ್ತೆ ನೆರವು

ಹೊಸ ತಂತ್ರಜ್ಞಾನಗಳು ಭಾರತೀಯ ರೈತರ ಬೆಳೆ ಇಳುವರಿ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬೆಳೆ ಇಳುವರಿಯನ್ನು ಹೆಚ್ಚಿಸಲು ಮೈಕ್ರೋಸಾಫ್ಟ್ ಕೃತಕ ಬುದ್ಧಿಮತ್ತೆಯ ನೆರವು ನೀಡಲಿದೆ.
ನವದೆಹಲಿ: ಹೊಸ ತಂತ್ರಜ್ಞಾನಗಳು ಭಾರತೀಯ ರೈತರ ಬೆಳೆ ಇಳುವರಿ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬೆಳೆ ಇಳುವರಿಯನ್ನು ಹೆಚ್ಚಿಸಲು ಮೈಕ್ರೋಸಾಫ್ಟ್ ಕೃತಕ ಬುದ್ಧಿಮತ್ತೆಯ ನೆರವು ನೀಡಲಿದೆ. 
ಕೃತಕ ಬುದ್ಧಿಮತ್ತೆ (ಎಐ), ಕ್ಲೌಡ್ ಮಷಿನ್, ಸ್ಯಾಟಲೈಟ್ ಚಿತ್ರಣ ಹಾಗೂ ಅಡ್ವಾನ್ಸ್ಡ್ ಅನಾಲಿಸಿಸ್ ಮೂಲಕ ಸಣ್ಣ ಪ್ರಮಾಣದ ರೈತರ ಆದಾಯವನ್ನು ಹೆಚ್ಚಿಸಬಹುದಾಗಿದೆ ಎಂದು ಮೈಕ್ರೋ ಸಾಫ್ಟ್ ತಿಳಿಸಿದೆ. ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶಗಳಲ್ಲಿ ರೈತರಿಗೆ ತಾವು ಬೆಳೆದಿರುವ ಹತ್ತಿಯ ಬೆಳೆ ಕೀಟಗಳ ದಾಳಿಗೆ ಒಳಗಾಗಿದೆಯೇ ಅಥವಾ ಸಮಸ್ಯೆಗೆ ಸಿಲುಕಿದೆಯೇ, ಬೆಳೆಯ ಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಆಟೋಮೆಟೆಡ್ ವಾಯ್ಸ್ ಕರೆ ಬರುತ್ತದೆ. ಕರ್ನಾಟಕದಲ್ಲಿ ಸರ್ಕಾರಕ್ಕೆ ಅಗತ್ಯ ಸಾಮಗ್ರಿಗಳ ಬೆಲೆಯ ಕುರಿತು ಮುನ್ನೋಟವನ್ನು ಮೂರು ತಿಂಗಳ ಮುನ್ನವೇ ಪಡೆಯಬಹುದಾಗಿದ್ದು, ಗರಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಲು ಸಾಧ್ಯವಾಗಲಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ. 
ಉತ್ತಮ ಇಳುವರಿ ಪಡೆಯಬೇಕಾದರೆ ಬಿತ್ತನೆ ಸಮಯವನ್ನು ಕರಾರುವಕ್ಕಾಗಿ ತಿಳಿದುಕೊಳ್ಳುವುದಕ್ಕೆ ಕೃತಕ ಬುದ್ಧಿಮತ್ತೆ ಸಹಕಾರಿಯಾಗಲಿದೆ ಎಂದು (ಐಸಿಆರ್ಐಎಸ್ಎಟಿ) ಯ ಏಷ್ಯಾ ವಿಭಾಗದ ನಿರ್ದೇಶಕ ಸುಹಾಸ್ ಪಿ ವಾನಿ ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com