ಬಿಸಿಲಿನ ತಾಪ ಎದುರಿಸಲು ಸಜ್ಜಾಗಿ: ಹವಾಮಾನ ಇಲಾಖೆ ಮುನ್ಸೂಚನೆ

1980ರಲ್ಲಿ ದಾಖಲೆಗಳನ್ನು ಸಂಗ್ರಹಿಸಲು ಆರಂಭವಾದಲ್ಲಿಂದ 2016 ಅತ್ಯಂತ ತಾಪಮಾನದ ವರ್ಷ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: 1980ರಲ್ಲಿ ದಾಖಲೆಗಳನ್ನು ಸಂಗ್ರಹಿಸಲು ಆರಂಭವಾದಲ್ಲಿಂದ 2016 ಅತ್ಯಂತ ತಾಪಮಾನದ ವರ್ಷ ಎಂದು ವಿಶ್ವ ಪವನಶಾಸ್ತ್ರ ಸಂಸ್ಥೆ ಕಳೆದ ಜನವರಿಯಲ್ಲಿ ಬಹಿರಂಗಪಡಿಸಿತ್ತು.
ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಆಡಳಿತ(ಎನ್ಒಎಎ) ಮತ್ತು ನಾಸಾ ವಿಜ್ಞಾನಿಗಳ ಪ್ರಕಾರ, 2016ರ ನಂತರ ಸತತ ಮೂರು ವರ್ಷಗಳ ಕಾಲ ದಾಖಲೆಯ ತಾಪಮಾನ ವಾತಾವರಣದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಈ ವರ್ಷದ ಬೇಸಿಗೆಯಲ್ಲಿ ಅಧಿಕ ತಾಪಮಾನ ಇರಲಿದೆ ಎಂದು ಹೇಳಿದ್ದಾರೆ.
ಮಾರ್ಚ್ ನಿಂದ ಮೇ ತಿಂಗಳವರೆಗೆ ಬೇಸಿಗೆ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದೇಶಾದ್ಯಂತ ಇರಲಿದೆ. ಅದು ಜೂನ್ ವರೆಗೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ವರ್ಷ ಜನವರಿಯ ಬಿಸಿಲು ಕಳೆದ 116 ವರ್ಷಗಳಲ್ಲಿ ಅಧಿಕವಾಗಿತ್ತಂತೆ. 
ಹಲವು ರಾಜ್ಯಗಳಲ್ಲಿ ಈ ವರ್ಷ ಅಧಿಕ ತಾಪಮಾನ ಇರಲಿದ್ದು, ದೇಶದ ವಾಯವ್ಯ ಭಾಗದಲ್ಲಿ ಸಾಮಾನ್ಯಕ್ಕಿಂತ ಗರಿಷ್ಠ ಪ್ರಮಾಣದಲ್ಲಿ ಬಿಸಿಲು ಸಾಮಾನ್ಯಕ್ಕಿಂತ ಒಂದು ಡಿಗ್ರಿ ಸೆಲ್ಸಿಯಸ್ ಗಿಂತ ಅಧಿಕ ಪ್ರಮಾಣದಲ್ಲಿ ಇರಲಿದೆ. ದೇಶದ ಇತರ ಭಾಗಗಳಲ್ಲಿ ಅದು ಸಾಮಾನ್ಯಕ್ಕಿಂತ 1 ಡಿಗ್ರಿ ಅಧಿಕವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಪ್ರಮುಖ ತಾಪಮಾನದ ರಾಜ್ಯಗಳಾದ ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ, ದೆಹಲಿ, ಹರ್ಯಾಣ, ರಾಜಸ್ತಾನ, ಉತ್ತರ ಪ್ರದೇಶ, ಗುಜರಾತ್, ಮಧ್ಯ ಪ್ರದೇಶ, ಛತ್ತೀಸ್ ಗಢ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಮತ್ತು ತೆಲಂಗಾಣ, ಮಾರಠವಾಡ, ಕೇಂದ್ರ ಮಹಾರಾಷ್ಟ್ರ ಮತ್ತ ವಿದರ್ಭ, ಕರಾವಳಿ ಆಂಧ್ರಪ್ರದೇಶಗಳಲ್ಲಿ ಉಷ್ಣಾಂಶ ಈ ವರ್ಷ ಭಾರೀ ಏರಿಕೆಯಾಗಲಿದೆ.
1901ರ ನಂತರ ಅತ್ಯಂತ ತಾಪಮಾನ ವರ್ಷ ಎಂದು 2016ನ್ನು ಬಣ್ಣಿಸಲಾಗಿದ್ದು, ರಾಜಸ್ತಾನದ ಪಲೊಡಿಯಲ್ಲಿ ಅತ್ಯಂತ ಗರಿಷ್ಠ 51 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.
ಅಧಿಕ ತಾಪಮಾನವನ್ನು ತಾಳಲಾರದೆ ಭಾರತದಲ್ಲಿ ಕಳೆದ ವರ್ಷ 1,600ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಅವರಲ್ಲಿ 700 ಮಂದಿ ಅಧಿಕ ಉಷ್ಣತೆಯಿಂದ ಮೃತಪಟ್ಟರೆ 400ಕ್ಕೂ ಅಧಿಕ ಮಂದಿ ಆಂಧ್ರ ಪ್ರದೇಶ ಮತ್ತು ತೆಲಂಗಾಣದವರು ಕೊನೆಯುಸಿರೆಳಿದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com