ಆನೆಗಳ ಸಂಖ್ಯೆಯಲ್ಲಿ ಹೆಚ್ಚಳ ದಾಖಲಿಸಿದ ಒರಿಸ್ಸಾ

ಕಳೆದ ಎರಡು ವರ್ಷಗಳಲ್ಲಿ ೧೫೬ ಆನೆಗಳು ಮೃತಪಟ್ಟಿರುವುದರ ಹೊರತಾಗಿಯೂ, ಬೇರೆ ಕಾರಣಗಳಿಂದ ಒರಿಸ್ಸಾದಲ್ಲಿ ೨೦೧೫ ರಲ್ಲಿದ್ದ ಆನೆಗಳ ಸಂಖ್ಯೆ ೧೯೫೪ ರಿಂದ ೨೦೧೭ಕ್ಕೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಭುವನೇಶ್ವರ: ಕಳೆದ ಎರಡು ವರ್ಷಗಳಲ್ಲಿ ೧೫೬ ಆನೆಗಳು ಮೃತಪಟ್ಟಿರುವುದರ ಹೊರತಾಗಿಯೂ, ಬೇರೆ ಕಾರಣಗಳಿಂದ ಒರಿಸ್ಸಾದಲ್ಲಿ ೨೦೧೫ ರಲ್ಲಿದ್ದ ಆನೆಗಳ ಸಂಖ್ಯೆ ೧೯೫೪ ರಿಂದ ೨೦೧೭ಕ್ಕೆ ೧೯೭೬ಕ್ಕೆ ಏರಿದೆ. 
ಸೋಮವಾರ ೨೦೧೭ ರ ಆನೆಗಳ ಗಣತಿ ವರದಿ ಬಿಡುಗಡೆ ಮಾಡಿದ ಪರಿಸರ ಖಾತೆ ಸಚಿವ ವಿಜಯಶ್ರೀ ರೌಟರಿ, ೨೦೧೫ ರ ಗಣತಿಯಿಂದ ಈ ಗಣತಿಗೆ ೨೨ ಆನೆಗಳು ಹೆಚ್ಚಾಗಿರುವ ಮಾಹಿತಿ ತಿಳಿಸಿದ್ದಾರೆ. 
೨೦೧೨ರಲ್ಲಿ ಆನೆಗಳ ಸಂಖ್ಯೆ ೧೯೩೦ ಇತ್ತು. 
ಈ ಗಣತಿಯ ಪ್ರಕಾರ ೩೪೪ ಸಲಗಗಳು ಮತ್ತು ೧೦೯೨ ಹೆಣ್ಣಾನೆಗಳು ಮತ್ತು ೫೦೨ ಮರಿ ಆನೆಗಳು ರಾಜ್ಯದಲ್ಲಿವೆ. ೩೮ ಆನೆಗಳ ಲಿಂಗವನ್ನು ಅರಣ್ಯ ಇಲಾಖೆಗೆ ಪತ್ತೆ ಮಾಡಲಾಗಿಲ್ಲ. 
ರಾಜ್ಯದ ಮೂರು ಆನೆ ಸಂರಕ್ಷಣಾ ವಲಯಗಳಾದ ಮಯೂರ್ ಭಂಜ್, ಮಹಾನದಿ ಮತ್ತು ಸಂಭಾಲ್ಪುರ್ ದಲ್ಲಿಯೇ ೧೫೩೬ ಆನೆಗಳನ್ನು ಗಣತಿ ಮಾಡಲಾಗಿದ್ದು, ಇದು ಒಟ್ಟು ಆನೆಗಳ ೭೭.೩೩% ಸಂಖ್ಯೆ. ಈ ಪ್ರದೇಶದಲ್ಲಿ ಒಟ್ಟು ಏಳು ಅಭಯಾರಣ್ಯಗಳಿವೆ. 
ಈ ಗಣತಿಗಾಗಿ ೫,೮೪೭ ವ್ಯಕ್ತಿಗಳನ್ನು ಅರಣ್ಯ ಇಲಾಖೆ ನೇಮಿಸಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com