2000 ರಿಂದ ಹಿಮಾಲಯದಲ್ಲಿ ಗಮನಾರ್ಹ ಹವಾಮಾನ ಬದಲಾವಣೆ: ಸಂಶೋಧನೆ

ಕಳೆದ 25 ವರ್ಷಗಳಲ್ಲಿ ಹಿಮಾಲಯದಲ್ಲಿ ಗಮನಾರ್ಹ ಪ್ರಮಾಣದಲ್ಲಿ ತಾಪಮಾನ ಹೆಚ್ಚುತ್ತಿದ್ದು, 2000 ನೇ ಇಸ್ವಿಯಿಂದ ಹವಾಮಾನ ಬದಲಾವಣೆ ಕಂಡುಬರುತ್ತಿದೆ ಎಂದು ಡಿಆರ್ ಡಿಒದ ಎಸ್ಎಎಸ್ಇ ಅಧ್ಯಯನ...
ಹಿಮಾಲಯ
ಹಿಮಾಲಯ
ನವದೆಹಲಿ: ಜಾಗತಿಕ ತಾಪಮಾನ ವಾಯುವ್ಯ ಹಿಮಾಲಯದ ಮೇಲೆ ಹೆಚ್ಚು ಪರಿಣಾಮ ಹೊಂದಿದ್ದು, ಗ್ರೇಟರ್ ಹಿಮಾಲಯದಲ್ಲಿ 0.87 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಿದೆ ಎಂದು ತಿಳಿದುಬಂದಿದೆ. 
ಚಂಡೀಗಢ ಮೂಲದ ಎಸ್ಎಎಸ್ಇ ಯ ಸಂಶೋಧಕರು ಹಿಮಾಲಯದಲ್ಲಿನ ತಾಪಮಾನ ಹೆಚ್ಚುತ್ತಿರುವುದರ ಬಗ್ಗೆ ಅಧ್ಯಯನ ನಡೆಸಿದ್ದು, ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿರುವಾಗಲೇ ಹಿಮಾಲಯದಲ್ಲಿ ತಾಪಮಾನ ಏರಿಕೆಯಾಗುತ್ತಿರುವುದು ಸ್ಪಷ್ಟವಾಗಿದೆ. 
ವಾಯುವ್ಯ ಹಿಮಾಲಯದ ಎಲ್ಲಾ ಜೋನ್ ಗಳಲ್ಲಿಯೂ ತಾಪಮಾನ ಸ್ಥಿರವಾಗಿಲ್ಲ ಎಂದು ಅಧ್ಯಯನ ನಡೆಸಿರುವ ಎಸ್ಎಎಸ್ಇ ವಿಜ್ಞಾನಿಗಳಾದ ಹೆಚ್ಎಸ್ ನೇಗಿ, ನೇಹಾ ಕಂಡಾ, ಎಂಎಸ್ ಶೇಖರ್ ಹಾಗೂ ಗಂಜು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com