ರಜ್ಜುಕೂಟ

ರಜ್ಜುಕೂಟ
Updated on

ವಧುವರರ ಜನನ ಕುಂಡಲಿಗಳು ಪರಸ್ಪರ ಹೊಂದಾಣಿಕೆಯಾದರೂ, ದಾಂಪತ್ಯ ಜೀವನದಲ್ಲಿ ವಿರಸ ಉಂಟಾಗಿ ವಿಚ್ಛೇದನ ಪಡೆದ ಹಲವು ಉದಾಹರಣೆಗಳು ಇವೆ. ಇದಕ್ಕೆ ಕಾರಣ 'ರಜ್ಜುಕೂಟ'. ಇದಕ್ಕೆ ಗುಣಕಗಳು ಇಲ್ಲದಿದ್ದರೂ ವಧುವರರ ದಾಂಪತ್ಯ ಜೀವನ ಉತ್ತಮಗೊಳ್ಳಲು ರಜ್ಜುಕೂಟ ಕೂಡಿ ಬಂದಿದೆಯೇ ಎಂಬುದನ್ನು ನೋಡಬೇಕು.

ಏನಿದು ರಜ್ಜುಕೂಟ?
ಕಾಲಪುರುಷನ ಅಂಗಾಂಗಳನ್ನೇ ದೃಷ್ಟಿಯಲ್ಲಿಟ್ಟು ಎಲ್ಲಾ 27 ನಕ್ಷತ್ರಗಳನ್ನು 5 ವಿಭಾಗಗಳಾಗಿ ವಿಂಗಡಿಸಲಾಗಿವೆ. ಆ ಅಂಗಾಂಗಗಳೇ ಪಾದ, ಕಟಿ, ಉದರ, ಕಂಠ ಮತ್ತು ಶಿರ ಭಾಗಗಳಾಗಿವೆ. ಪಾದ (ಅಶ್ವಿನಿ, ಆಶ್ಲೇಷ, ಮಖ, ಜ್ಯೇಷ್ಠ, ಮೂಲ ಮತ್ತು ರೇವತಿ), ಕಟಿ (ಭರಣಿ, ಪುಷ್ಯ, ಹುಬ್ಬ, ಅನುರಾಧ, ಪೂರ್ವಾಷಾಢ ಮತ್ತು ಉತ್ತರಭಾದ್ರ), ಉದರ (ಕೃತಿಕ, ಪುನರ್ವಸು, ಉತ್ತರೆ, ವಿಶಾಖ, ಉತ್ತರಾಷಾಢ ಮತ್ತು ಪೂವಾಭಾದ್ರ), ಕಂಠ (ರೋಹಿಣಿ, ಆರಿದ್ರಾ, ಹಸ್ತ, ಸ್ವಾತಿ, ಶ್ರವಣ ಮತ್ತು ಶತಭಿಷ), ಶಿರ (ಮೃಗಶಿರ, ಚಿತ್ರ ಮತ್ತು ಧನಿಷ್ಠ).
ವಧುವರರ ರಜ್ಜುಕೂಟಗಳು ಒಂದೇ ಬರಬಾರದು. ಹೀಗೆ ಬಂದರೆ ನಾನಾ ವಿಧದ ಕಷ್ಟ ಅನುಭವಿಸುವರು. ಶಿರರಜ್ಜು ಇದ್ದರೆ ಗಂಡನಿಗೆ ಆಪತ್ತು. ಕಂಠ ರಜ್ಜು ಇದ್ದರೆ ಪತ್ನಿಗೆ ಕೆಡಕು. ಉದರ ರಜ್ಜುವಿದ್ದರೆ ಸಂತಾನ ನಾಶ. ಕಟಿ ರಜ್ಜು ಇದ್ದರೆ ದಾರಿದ್ರ್ಯ ಮತ್ತು ಪಾದ ರಜ್ಜುವಿದ್ದು ಸತಿಪತಿಯರು ಉದ್ಯೋಗದಲ್ಲಿದ್ದರೆ ಬೇರೆ ಬೇರೆ ಊರುಗಳಲ್ಲಿ ವಾಸ. ಪರಸ್ಪರ ಜಗಳ ಉಂಟಾಗುವುದು.
ಆದರೆ ವಧುವರರ ನಕ್ಷತ್ರ ಒಂದೇ ಆಗಿದ್ದರೆ, ದಾಳಿ ಒಂದೇ, ಆದರೆ ದಶಾಧಿಪತಿಗಳು ಸಮಸಪ್ತಾದಲ್ಲಿದ್ದರೆ ಗ್ರಹ ಮಿತ್ರತ್ವ, ಇದ್ದರೆ ಒಂದೇ ರಜ್ಜುಕೂಟ ಆದರೂ ದೋಷವಿಲ್ಲ.
ಹಾಗೆಯೇ ರಾಶಿ, ಗ್ರಹಮಿತ್ರತ್ವ, ದಿನ ಮತ್ತು ಮಹೇಂದ್ರ ಕೂಟಗಳು ಸೇರಿದರೂ ರಜ್ಜುಕೂಟ ದೋಷವಿಲ್ಲ ಎಂದು ಮುಹೂರ್ತ ದರ್ಪಣದಲ್ಲಿ ಕೊಡಲಾಗಿದೆ.
ರಜ್ಜುಕೂಟ ಕೇವಲ ವಿವಾಹ ಸಂಬಂಧ ವಿಷಯದಲ್ಲಿ ಮಾತ್ರವಲ್ಲ. ವಿಜ್ಞಾನ ಆಧಾರದ ಫಲದಂತೆ ಆಯಾಮ ದೆಶೆಗಳ ಕಾಲದಲ್ಲೂ ಅಂಗಾಂಗಗಳ ಅನಾರೋಗ್ಯ ಉಂಟಾಗುತ್ತವೆ ಎಂಬ ಅಂಶ ಬೆಳಕಿದೆ ಬಂದಿದೆ.

ಪಾದರಜ್ಜು
ಬುಧ ಮತ್ತು ಕೇತು ದೆಶೆಗಳ ನಕ್ಷತ್ರಗಳು ಸೇರಿ ಇದಾಗುತ್ತದೆ. ಈ ದೆಶೆಗಳ ಕಾಲದಲ್ಲಿ ಇವರಿಗೆ ಪಾದ, ಕಾಲುಗಳಲ್ಲಿ ನೋವು ಉಂಟಾಗುತ್ತದೆ. ಉದ್ಯೋಗಿಗಳಾದರೆ ಆಗಾಗ್ಗೆ ವರ್ಗಾವಣೆ ಪಡೆಯುವಿರಿ.

ಕಟಿ (ಸೊಂಟ) ರಜ್ಜು
ಶುಕ್ರ ಮತ್ತು ಶನಿಗ್ರಹಗಳ ನಕ್ಷತ್ರಗಳ ಒಗ್ಗೂಡುವಿಕೆಯಿಂದ ಇದಾಗುತ್ತದೆ. ಇವರಿಗೆ ಶನಿ ದೆಶೆ, ಸಾಡೆ ಸಾತ್ ಶನಿ ಕಾಲದಲ್ಲಿ ಸೊಂಟ ನೋವು, ಬೆನ್ನು ನೋವು ಉಂಟಾಗಲಿದೆ.

ಉದರ (ಹೊಟ್ಟೆ) ರಜ್ಜು
ರವಿ ಮತ್ತು ಗುರು ಗ್ರಹಗಳ ನಕ್ಷತ್ರಗಳು ಸೇರಿ ಆಗಿವೆ. ಹಾಗಾಗಿ ಇವರಿಗೆ ರವಿ ತುಲಾ ರಾಶಿಯಲ್ಲಿದ್ದಾಗ, ಗುರುಬಲ ಇಲ್ಲದಿದ್ದ ಕಾಲದಲ್ಲಿ ಉದರ (ಹೊಟ್ಟೆ) ಸಂಬಂಧ ರೋಗ ಬರಲಿದೆ. ಆ್ಯಸಿಡಿಟಿ ಸಂಬಂಧ ಅನಾರೋಗ್ಯ ಬರಲಿದೆ.

ಕಂಠ ರಜ್ಜು
ಚಂದ್ರ ಮತ್ತು ರಾಹುಗ್ರಹಗಳ ನಕ್ಷತ್ರ ಸೇರಿ ಈ ರಜ್ಜು ಆಗುತ್ತದೆ. ಈ ದೆಶೆ ಕಾಲದಲ್ಲಿ ಇವರಿಗೆ ಕುತ್ತಿಗೆ ನೋವು, ಥೈರಾಯ್ಡ್ ಸಂಬಂಧ ಅನಾರೋಗ್ಯ ಚರ್ಮವ್ಯಾಧಿ ಉಂಟಾಗಲಿದೆ.

ಶಿರ ರಜ್ಜು
ಮಂಗಳ ಗ್ರಹದ ನಕ್ಷತ್ರಗಳ ಒಕ್ಕೂಟ. ಈ ದೆಶೆ ಕಾಲದಲ್ಲಿ ಮೇಲಿನಿಂದ ಕೆಳಗೆ ಬೀಳುವುದು. ವಾಹನ ಅಪಘಾತ ಭಯ, ರಕ್ತ ದೋಷ, ಹೃದಯ ವೇದನೆಗಳು ಬರಲಿವೆ.

ಪರಿಹಾರ ಏನು?
ಪಾದರಜ್ಜು ದೋಷವಿದ್ದವರು ವಿಷ್ಣು ಸಹಸ್ರನಾಮ ಪಠಿಸಬೇಕು. ಕಟಿರಜ್ಜು ದೋಷದವರು ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಬೇಕು. ಉದರರಜ್ಜು ದೋಷದವರು ರಾಘವೇಂದ್ರಸ್ವಾಮಿ ಮಂತ್ರ ಪಠಿಸಬೇಕು. ಕಂಠ ರಜ್ಜು ದೋಷದವರು ದುರ್ಗಾಪರಮೇಶ್ವರಿ ಮಂತ್ರ ಪಠಿಸಬೇಕು. ಶಿರರಜ್ಜು ದೋಷವಿದ್ದವರು ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಬೇಕು. ಜೈನರಾದರೆ ಪ್ರತಿದಿನ ಭಕ್ತಾಮರ ಮಂತ್ರ ಪಠಿಸಿದರೆ ಉತ್ತಮ ಫಲ ಸಿಗಲಿದೆ. ಶಿವನ ಭಕ್ತರು ನಕ್ಷತ್ರ ಆಧಾರಿತ ಮಂತ್ರ ಪಠಿಸಬೇಕು. ಇತರರು ಮಧ್ಯ ಬೆರಳಲ್ಲಿ ನವರತ್ನ ಉಂಗುರವನ್ನು ಧರಿಸಬೇಕು. ಪುರುಷರಾದರೆ ಬಲಗೈಯಲ್ಲೂ, ಸ್ತ್ರೀಯರಾದರೆ ಎಡಗೈಯಲ್ಲಿ ಧರಿಸುವುದು, ನವರತ್ನದ ಉಂಗುರದಲ್ಲಿ ನೀಲ ರತ್ನ ಮೇಲ್ಮುಖ ಇರತಕ್ಕದ್ದು. ಮಾಹಿತಿಗೆ ಮೊ. 9945350586.

- ಯಂ. ರತ್ನರಾಜ ಜೈನ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com