ಯುನಿಕಾರ್ನ ಪ್ರಾಣಿ ಪುರಾಣ

ಯುನಿಕಾರ್ನ ಪ್ರಾಣಿ ಪುರಾಣ
Updated on: 

ಪೌರಾಣಿಕ ಪ್ರಾಣಿ ಪ್ರಪಂಚದಲ್ಲೇ ಯುನಿಕಾರ್ನ ಜನಮನಸೂರೆಗೊಂಡ ಪ್ರಸಿದ್ಧ ಪ್ರಾಣಿ. ಸುಮಾರು 5,000 ವರ್ಷಗಳಿಂದ ಜಗತ್ತಿನ ಹಲವಾರು ಸಂಸ್ಕೃತಿ, ಪುರಾಣ, ಜಾನಪದಗಳಲ್ಲಿ ಇದರ ಉಲ್ಲೇಖ ಹೇರಳವಾಗಿದೆ. ಮೂಲತಃ ಪೇಗಸ್ ಸಂಸ್ಕೃತಿಯಿಂದ ಉದ್ಭವಗೊಂಡ ಇದು ನಂತರ ಮಧ್ಯಕಾಲೀನ ಯುರೋಪ್‌ನಲ್ಲಿ ಪ್ರಚಲಿತಗೊಂಡು ಏಸುಕ್ರಿಸ್ತನ ಪ್ರತೀಕವೂ ಆಯಿತು.
ಜ್ಯೂಸ್ ದೇವರನ್ನು ಸಾಕಿದ ಅಮೆಲ್ತಿಯಾ ಎಂಬ ಹೆಣ್ಣು ಆಡು ನಂತರ ಅವನ ವರದಿಂದ ಕ್ಯಾಪೆಲ್ಲಾ ಎಂಬ ತಾರೆಯಾಯಿತು. ಕೆಲವು ನಂಬುಗೆಯಂತೆ ಜ್ಯೂಸ್ ದೇವರು ಈ ಆಡಿನ ಒಂದು ಕೊಂಬನ್ನು ಮುರಿದನಂತೆ ಅದು ಅಕ್ಷಯ ಆಹಾರವನ್ನು ಚೆಲ್ಲಿತಂತೆ. ಅಂದಿನಿಂದ ಆ ಕೊಂಬು ಸಮೃದ್ಧಿಯ ಕೊಂಬು ಎಂದೇ ಪ್ರಸಿದ್ಧವಾಯಿತು.
ಈ ಯುನಿಕಾರ್ನ ಕೊಂಬು ಔಷಧೀಯ ಗುಣ ಹೊಂದಿದ್ದು, ವಿಷಹಾರಿಯಾಗಿಯೂ ವರ್ಣಿತವಾಗಿದೆ. ಈ ದಂತಕಥೆಗೆ ಮೂಲ ಬಹುಶಃ ಒಂಟಿಕೊಂಬಿನ ಸಮುದ್ರ ಜೀವಿ ನಾರ್ವೇಲ್ ಎಂಬ ಪ್ರಾಣಿಯ ಪ್ರಭಾವವಿರಬೇಕು. ಆಗಿನ ಕಾಲದಲ್ಲಿ ಈ ನಾರ್ವೇಲಿನ ಕೊಂಬು ಔಷಧವಾಗಿಯೂ ಬಳಕೆಯಲ್ಲಿತು. ಒಂದು ವಿವರಣೆಯಂತೆ, ಇದು ಶುಭ್ರಬಿಳುಪಿನ ಕುದುರೆ. ಇದರ ಕಾಲುಗಳು ಚಿಗರೆಯವು ಮತ್ತು ಸುರಳಿಯಾಕಾರದಲ್ಲಿ ತಿರುಗಿದ ಹಣೆಯ ಮೇಲಿನ ಬಿಳಿಬಣ್ಣದ ಒಂಟಿಕೊಂಬು.
ಕೆಲವು ಸಂಸ್ಕೃತಿಗಳಲ್ಲಿ ಇದಕ್ಕೆ ರೆಕ್ಕೆಗಳೂ ಇವೆ. ಯುನಿಕಾರ್ನ ಬಗೆಗಿನ ಅತಿ ಪ್ರಾಚೀನ ದಾಖಲೆ ಕ್ರಿ.ಪೂ. 400ರಲ್ಲಿದ್ದ ಗ್ರೀಕ್ ಇತಿಹಾಸಜ್ಞ ಕ್ಟಿಸಿಯಸ್ ಎಂಬವನ ಬರಹಗಳಲ್ಲಿ ಸಿಗುತ್ತದೆ. ಬಹುಶಃ ಭಾರತದ ಘೇಂಡಾಮೃಗ, ಕುದುರೆ ಹಾಗೂ ಚಿಗರೆಗಳನ್ನು ಕಂಡು ವಿಸ್ಮಿತರಾಗಿದ್ದ ಪ್ರಾಚೀನ ಗ್ರೀಕ್ ಪ್ರವಾಸಿಗರು ಯುನಿಕಾರ್ನ ಜನ್ಮಕ್ಕೆ ಕಾರಣರಾಗಿರಬಹುದು.


-ಎಚ್.ಜಿ. ಮಳಗಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com