
ಶ್ರಾವಣದ ಜುಲೈ 27ರಿಂದ ಆಗಸ್ಟ್ 24 ರವರೆಗೆ ಸೂರ್ಯ ಸಂಪೂರ್ಣ ಸಿಂಹರಾಶಿಯಲ್ಲೇ ಸಂಚಾರ. ಪೃಥ್ವಿಯ ಸಕಲ ಜೀವರಾಶಿಗಳ ಭೌತಿಕ ಗುಣಗಳ ಮೇಲೆ ಶನಿಯ ನಭೋ ಪ್ರಭಾವ ಅಧಿಕವಾಗಿರುತ್ತದೆ. ಹೀಗಾಗಿ, ಶ್ರಾವಣದಲ್ಲಿ ಶನಿದೇವರಿಗೆ ವಿಶೇಷ ಪೂಜೆ.
ಅರಿಸ್ಟಾಟಲ್ ಸೌರಸಿದ್ಧಾಂತವನ್ನು ಪರಾಮರ್ಶಿಸಿದಾಗ ದೇವಗ್ರಹದಿಂದ ಎರಕ ಹೊಯ್ದ ಆತ್ಮ ಪ್ರಥಮವಾಗಿ ತಾರಾಮಂಡಲದಿಂದ ಪ್ರವೇಶಿಸುತ್ತದೆ. ಸೌರಮಂಡಲ ಸೇರಬೇಕಾದರೆ ಪ್ರಥಮವಾಗಿ ಶನಿ ಗ್ರಹದ ನಭೋ ಪ್ರಭಾವಗಳನ್ನು ಸ್ಪಂದಿಸಲೇಬೇಕು. ನಂತರ ಎಲ್ಲ ಗ್ರಹಗಳ ಮೂಲಕ ಪೃಥ್ವಿಯನ್ನು ಸೇರುತ್ತದೆ. ಇದರಿಂದ ಪೃಥ್ವಿಯ ಮೇಲೆ ಆತ್ಮದ ಭೌತಿಕ ಗುಣಗಳಿಗೂ ಶನಿಗ್ರಹದ ನಭೋ ಪ್ರಭಾವಕ್ಕೂ ನಿಕಟ ಸಂಬಂಧವಿರುತ್ತದೆ.
ಆ.29ರಿಂದ ಮೇಷ, ವೃಷಭ, ಕನ್ಯಾ ಮತ್ತು ಸಿಂಹರಾಶಿಯವರಿಗೆ, ಸೆ.23ರಿಂದ ತುಲಾ, ಮಿಥುನ, ಕುಂಭ, ಮೀನಾರಾಶಿಯವರಿಗೆ, ಡಿ.24ರಿಂದ ಕಟಕ, ಧನಸ್ಸು, ವೃಶ್ಚಿಕ, ಮಕರ ರಾಶಿಯವರಿಗೆ ಮುಂದಿನ 11 ತಿಂಗಳವರೆಗೂ ಶನಿಮಹಾದೆಸೆ ಪ್ರಾಪ್ತವಾಗುತ್ತದೆ. ಈ ಕಾಲಮಾನದಲ್ಲಿ ತಮ್ಮ ಇಷ್ಟಾರ್ಥಗಳು ಸಿದ್ಧಿ ಆಗುವುದು. ಆರೋಗ್ಯ ಐಶ್ವರ್ಯ, ಬಲ, ಶೌರ್ಯ, ಪರಾಕ್ರಮ ಮತ್ತು ವೀರ್ಯ ವೃದ್ಧಿಸುತ್ತದೆ. ಶ್ರಾವಣದಲ್ಲಿ ಶನಿ ಮತ್ತು ನವಗ್ರಹಗಳನ್ನು ಶನಿವಾರಗಳಂದು ಪೂಜಿಸಿದರೆ ಶನಿ ಮತ್ತು ಗುರುಗ್ರಹಗಳನ್ನು ಪೂಜಿಸಿದಷ್ಟು ಫಲ ದೊರೆಯುವುದು.
ಈ ಕಾಲಮಾನದಲ್ಲಿ ಸಾಗರ, ಸಮುದ್ರ, ಹರಿಯುವ ನದಿ, ಇಲ್ಲವೇ ಶುದ್ಧ ಕೆರೆ ನೀರನ್ನು ಶೇಖರಿಸಿ ಸಾಯಂಕಾಲದಲ್ಲಿ ಬೇವಿನ ಸೊಪ್ಪಿನಿಂದ ನಿವಾಸದ ಒಳಗೂ ಹೊರಗೂ ಪ್ರೋಕ್ಷಣೆ ಮಾಡಬೇಕು. ಕೆಂಪು ಅಥವಾ ನೀಲಿ ಹೂವುಗಳಿಂದ ನಿವಾಸದ ಬಾಗಿಲನ್ನು ಪ್ರಾತಃಕಾಲದಲ್ಲಿ ಪೂಜಿಸುವುದು, ಪ್ರತಿ ಪೌರ್ಣಮಿ ಮತ್ತು ಅಮವಾಸ್ಯೆಗಳಂದು ಸೂರ್ಯನನ್ನು ತದೇಕಚಿತ್ತದಿಂದ ದೃಷ್ಟಿಸಿ ಶನಿದೇವರನ್ನು ಕೆಂಪು ಮತ್ತು ನೀಲಿ ಹೂವುಗಳಿಂದ ಪೂಜಿಸುವುದು. ಮಾಂಸಾಹಾರ ಮದ್ಯಪಾನ ಸಂಪೂರ್ಣ ಬಿಡುವುದು. ಮಾಹಿತಿಗಾಗಿ ಮೊ. 9945605618 ಸಂಪರ್ಕಿಸಬಹುದು.
-ನಾರಾಯಣ ಶೆಟ್ಟಿ ಪದ್ಮಸಾಲಿ
Advertisement