

ಸೃಷ್ಟಿಯಲ್ಲಿ ಸಮತೋಲನ ಅತ್ಯಗತ್ಯ. ಕೇವಲ ಭೂಮಂಡಲದ ಮೇಲಷ್ಟೇ ಅಲ್ಲ, ಇಡೀ ಬ್ರಹ್ಮಾಂಡದಲ್ಲಿ ಇರುವ ಎಲ್ಲ ವಸ್ತು ಮತ್ತು ಜೀವರಾಶಿಗಳು ಸಮತೋಲನದಲ್ಲಿ ಇದ್ದಾಗ ಮಾತ್ರ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತವೆ. ಇಲ್ಲವಾದರೆ ಇದೇ ಬ್ರಹ್ಮಾಂಡವೇ ಅಸಮತೋಲನದಿಂದ ದುರ್ಬಲಗೊಂಡು ವಿನಾಶದಂಚಿಗೆ ನಡೆಯುತ್ತದೆ. ಒಂದೇ ಒಂದು ವಸ್ತುವಿನಿಂದ ಈ ಬ್ಯಾಲೆನ್ಸ್ ತಪ್ಪಿದರೂ ಭಾರಿ ಪ್ರಳಯ ಸದೃಶ್ಯ ಘಟನೆಗಳು ಜರುಗುತ್ತವೆ.
ಮನುಷ್ಯನಲ್ಲೂ ಅಷ್ಟೇ. ಕೊಂಚವೇ ಸಮತೋಲನ ತಪ್ಪಿದರೂ ಆರೋಗ್ಯದ ಮೇಲೆ ಹಾಗೂ ಆಯುಸ್ಸಿನ ಮೇಲೆ ಪರಿಣಾಮ ಉಂಟಾಗುತ್ತದೆ. ಬೊಕ್ಕತಲೆ, ಅಕಾಲ ವೃದ್ಧಾಪ್ಯ, ಪುರುಷತ್ವ ನಾಶ, ದೃಷ್ಟಿದೋಷದ ಮಗುವಿನ ಜನನ, ಕ್ಯಾನ್ಸರ್, ಹೃದ್ರೋಗ ಮುಂತಾದ ಕಾಯಿಲೆಗಳು ಮನುಷ್ಯನಲ್ಲಿ ಉಂಟಾಗುವುದು ಇದೇ ಕಾರಣಕ್ಕೆ. ನಾವು ನಮ್ಮ ಲಾಭಕಾರಣಕ್ಕಾಗಿ ಸ್ವಾರ್ಥಿಗಳಾಗುತ್ತಿದ್ದೇವೆ. ಜೊತೆಗೆ ಹಿಂಸಾವಿನೋದಿಗಳಾಗುತ್ತಿದ್ದೇವೆ. ನಾವು ಸೃಷ್ಟಿಯ ಒಂದು ಭಾಗವಷ್ಟೇ. ನಾವೇ ಒಂದು ಸೃಷ್ಟಿಯಲ್ಲ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಾವು ತೃಣಮಾತ್ರರು. ನಮ್ಮಿಂದ ಇಲ್ಲಿ ಯಾವುದೂ ನಡೆಯುತ್ತಿಲ್ಲ. ನಾವು ಅನಿವಾರ್ಯವೂ ಅಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಆಗ ಸ್ವಾರ್ಥಭಾವ ಕೂಡ ಮರೆಯಾಗುತ್ತದೆ.
ಇತ್ತೀಚೆಗೆ ಶ್ರೀ ಕೃಷ್ಣ ಮತ್ತು ಪರಶುರಾಮರ ನಾಡಾದ ಗೋವಾ ಪ್ರದೇಶ ಸುದ್ದಿಯಲ್ಲಿತ್ತು. ಕಾರಣ ನಿಮಗೂ ಗೊತ್ತು. ಅಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಿ ಕೋರ್ಟ್ ಆದೇಶ ಹೊರಡಿಸಿತ್ತು. ಇದೊಂದು ಪ್ರಾಯಶ್ಚಿತ್ತಯೋಗ್ಯ ಕ್ರಮ. ವಿದೇಶಿ ತತ್ವಜ್ಞಾನಿಗಳೂ ಶ್ರೀಕೃಷ್ಣನ ಗೀತಾಸಾರವನ್ನೇ ಪುನರುಚ್ಚರಿಸಿದ್ದಾರೆ. ನಿಮ್ಮ ಕರ್ಮಗಳು ನಿಮ್ಮನ್ನು ಹಿಂಬಾಲಿಸುತ್ತವೆ. ನಿಮ್ಮ ಒಳ್ಳೆ ಕಾರ್ಯಗಳು ಕೈ ಹಿಡಿಯುತ್ತವೆ. ಕೆಟ್ಟ ಕರ್ಮಗಳು ಹೆಗಲೇರಿ ಕಾಡುತ್ತವೆ. ಪ್ರಾಣಿಯನ್ನು ಕೊಲ್ಲುವುದೂ ಒಂದು ದುಷ್ಕರ್ಮವೇ. ಸೃಷ್ಟಿಕರ್ತನ ಅಣತಿ ಇಲ್ಲದೆಯೇ ಮಾಡುವ ಎಲ್ಲ ಕಾರ್ಯಗಳೂ ಪಾಪವೇ. ಗೋಹತ್ಯೆಯಂಥ ಪಾಪ ಇನ್ನೊಂದಿಲ್ಲ. ಗೋವನ್ನು ಹಿಂಸಿಸಿ ಸಾಯಿಸುವುದು ಮತ್ತು ಭಕ್ಷಿಸುವುದು, ನಿಮ್ಮ ಪಾಪದ ಕೊಡ ಭರ್ತಿ ಮಾಡೋದರ ಜೊತೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಒಂದು ಸೃಷ್ಟಿಯನ್ನು ನೀವು ನಾಶ ಮಾಡಿದರೆ, ನಿಮ್ಮಲ್ಲಿ ಸೃಷ್ಟಿಸುವ ಶಕ್ತಿಯೂ ಕುಂಠಿತಗೊಳ್ಳುತ್ತದೆ. ಇದನ್ನೇ ಸಮತೋಲನ ಅನ್ನುವುದು. ಸಸ್ಯಾಹಾರಕ್ಕಿಂತ ಸಾತ್ವಿಕ ಇನ್ನೊಂದಿಲ್ಲ. ಇದು ಸೃಷ್ಟಿಯ ಸಮತೋಲನ ನಿಯಮ ಕೂಡ.
9448335830 /7406175228.
www.dhyanfoundation.com
-ಯೋಗಿ ಅಶ್ವಿನಿ