ಮಕ್ಕಳಿರಲವ್ವ ಮನೆ ತುಂಬ

ಮಕ್ಕಳಿರಲವ್ವ ಮನೆ ತುಂಬ
Updated on: 

ಮಕ್ಕಳಿಲ್ಲದವರಿಗೆ ಮುಕ್ತಿ ಇಲ್ಲ (ಅಪುತ್ರಸ್ಯ ಗತಿರ್ನಾಸ್ತಿ) ಎಂಬ ಮಾತನ್ನು ಅನೇಕರು ಕೇಳಿರಬಹುದು. ಭೀಷ್ಮರೇ ಮೊದಲಾದವರು ಅಪುತ್ರರಾದರೂ ಉತ್ತಮ ಗತಿ ಪಡೆದ ಉದಾಹರಣೆ ಸಿಗುತ್ತದಾದರೂ ಅವರೆಲ್ಲ ಕಾರಣ ಜನ್ಮರು. ಸಾಮಾನ್ಯವಾಗಿ ಪಿಪೀಲಕಾದಿ ಬ್ರಹ್ಮಪರ್ಯಂತ ಎಲ್ಲರೂ ತಮ್ಮ ವಂಶ ಆಚಂದ್ರಾರ್ಕವಾಗಿ ಮುಂದುವರಿಯಬೇಕೆಂದೇ ಬಯಸಿದ್ದರು.
ಗಂಡು ಹೆಣ್ಣುಗಳ ಶಾರೀರಿಕ ಮಿಲನವೇ ಸಂತಾನಕ್ಕೆ ಕಾರಕವಾಗಿದ್ದರೆ ಪ್ರಪಂಚದಲ್ಲಿ ಇಷ್ಟೊಂದು ಮಂದಿ ಸಂತಾನ ಹೀನರು ಇರಲಿಕ್ಕೆ ಅಸಾಧ್ಯ. ಜ್ಯೋತಿಷ್ಯ ಶಾಸ್ತ್ರ ಸಂತಾನ ಹೀನತೆಗೆ ಅನೇಕ ಕಾರಣಗಳನ್ನು ಹೇಳುತ್ತದೆ.
ದಂಪತಿಯ ಜಾತಕ ಸರಿಯಾಗಿದ್ದು, ಅದರಲ್ಲಿ ಲಗ್ನಾಧಿಪತಿಯೂ ಪಂಚಮಾಧಿಪತಿಯೂ ಪರಸ್ಪರ ಶತ್ರುಗಳಾಗಿದ್ದು, ಪಂಚಮಾಧಿಪತಿ ನಪುಂಸಕ ಗ್ರಹ ಆದರೆ ಸಂತಾನ ಭಾಗ್ಯ ಬಹಳ ಕಷ್ಟ. ಇದಕ್ಕೆ ತಕ್ಕ ಪರಿಹಾರ ಶಾಂತಿ ಮಾಡಿಸಿಕೊಳ್ಳಬೇಕು.
ಜಾತಕನ ಪಂಚಮ ಸ್ಥಾನಕ್ಕೆ ನಪುಂಸಕ ಗ್ರಹದ ಸಪ್ತಮ / ವಿಶೇಷ ದೃಷ್ಟಿ ಇದ್ದಾಗ ಕೂಡಾ ಸಂತಾನ ಪ್ರಾಪ್ತಿ ಕಷ್ಟ. ಜನ್ಮಾಧಿಪತಿ, ಲಗ್ನಾಧಿಪತಿ ಹಾಗೂ ಪಂಚಮಾಧಿಪತಿ ಮೂವರೂ ಪರಸ್ಪರ ವೈರಿಗಳಾಗಿದ್ದು ಪಂಚಮಕ್ಕೆ ಸಂತಾನ ಕಾರಕನ ಸಪ್ತಮ ದೃಷ್ಟಿಯೂ ಇಲ್ಲದಿದ್ದರೆ ಸಂತಾನ ಬಹಳ ಕಷ್ಟ.
ಪತಿ / ಪತ್ನಿಯ ಜಾತಕದಲ್ಲಿಯ ಪಂಚಮಾಧಿಪತಿಗಳೂ ನಪುಂಸಕ ನಕ್ಷತ್ರದಲ್ಲಿದ್ದಾಗ ವಿವಾಹ ಅಥವಾ ಗರ್ಭದಾನ ನಡೆಸಿದ್ದರೆ ಕೂಡಾ ಸಂತಾನ ಪ್ರಾಪ್ತಿ ಕಷ್ಟ. ಇವುಗಳಲ್ಲದೇ ಸಂತಾನ ಹೀನತ್ವಕ್ಕೆ ಇನ್ನೂ ಅನೇಕ ಕಾರಣಗಳನ್ನು ಜಾತಕ ರೀತಿಯಲ್ಲೇ ಹೇಳಿದೆ.
ಇದಲ್ಲದೇ ಕುಟುಂಬದಲ್ಲಿ ಯಾರಾದರೂ (12 ತಲೆ ಮಾರುಗಳ ಒಳಗೆ) ನಾಗರಹಾವನ್ನು ಸಾಯಿಸಿದ್ದರೆ (ನಾಗದೋಷ), ಕುಟುಂಬಕ್ಕೆ ಪ್ರೇತ ಶಾಪ ಇದ್ದರೆ, ಸಂತಾನ ಕಾರಕ  ನೀಚನಾಗಿದ್ದು, ಪಂಚಮಾಧಿಪತಿ ಶುಭಗ್ರಹನಾಗಿ ಪಂಚಮದಲ್ಲಿ ಕುಜ ಅಥವಾ ಶನಿ ಇದ್ದರೆ ಸಮಾಜ ವಿರೋಧಿಯಾದವನು ಜನಿಸುತ್ತಾನೆ.
ಒಮ್ಮೊಮ್ಮೆ ಸಂತಾನ ಕಾರಕನು ಪಂಚಮದಲ್ಲಿ ಇದ್ದಾಗ ದಂಪತಿಗಳಲ್ಲಿ ಸಂತಾನ ಹೀನತ್ವ ಕಾಣುತ್ತದೆ. ಇಂತಹ ಕಾಲದಲ್ಲಿ ಕೆಲವರು "ಕಾರಕೋಭವನಾಶಾಯ" ಎಂಬ ವಾಕ್ಯವನ್ನು ಉದಾಹರಿಸುತ್ತಾರೆ. ಆದರೆ ಈ ವಾಕ್ಯ ಗ್ರಂಥೋಕ್ತವಲ್ಲ. ಆಗ ಸಮಸ್ಯೆಗೆ ಬೇರೆ ಕಾರಣಗಳಿರುತ್ತವೆ.
ಹುಡುಗಿಯ ಪ್ರಥಮ ರಜೋದರ್ಶನ ನಪುಂಸಕ ನಕ್ಷತ್ರದಲ್ಲಾಗಿ ಪತಿಯ ಪಂಚಮಾಧಿಪತಿಯು (ಜನನ ಕಾಲಕ್ಕೆ) ನಪುಂಸಕ ನಕ್ಷತ್ರದಲ್ಲಿದ್ದಾಗ ಹೀಗೆ ನಡೆಯಲಿಕ್ಕೆ ಸಾಧ್ಯ. ಇಂತಹವರಿಗೆ ಸರ್ಪದೋಷ ಇದ್ದರೆ ಹಲವು ಸಲ ಗರ್ಭಹಾನಿ (ಅಬಾರ್ಷನ್) ಆಗುತ್ತದೆ.
ಹೀಗೆ ಸಂತಾನ ಹೀನತ್ವಕ್ಕೆ ಅನೇಕ ಕಾರಣಗಳು ಕಾಣುತ್ತವೆ. ಎಲ್ಲ ಪರಿಹಾರಗಳೂ 'ಶ್ರೀ ಸಂತಾನ ಗೋಪಾಲ ಹವನ' ದಲ್ಲಿ ಅಂತ್ಯಗೊಳ್ಳಬೇಕು. ಮಾಹಿತಿಗಾಗಿ ಮೊ. 9480517706.


-ಪಂ. ರಾಮಚಂದ್ರ ಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com