ಮಹಾಲಕ್ಷ್ಮಿ ಈ ಗೊರವನಹಳ್ಳಿಯಲ್ಲಿ ಬಂದು ನೆಲೆಸಿದ್ದರ ಹಿಂದೆ ಒಂದು ರೋಚಕ ಕಥೆ ಇದೆ. ತುಮಕೂರಿನ ಕೊರಟಗೆರೆ ತಾಲೂಕಿನ ಗೊರವನಹಳ್ಳಿಯಲ್ಲಿ ಅಬ್ಬಯ ಅನ್ನೋರಿಗೆ ಒಂದು ಹೆಣ್ಣಿನ ಅಶರೀರವಾಣಿಯೊಂದು ಕೇಳಿಸಿತ್ತು. ನಾನು ನಿಮ್ಮ ಮನೆಗೆ ಬರುತ್ತೀನಿ. ಕರ್ಕೊಂಡು ಹೋಗು ಅಂತ, ಆ ಅಶರೀರವಾಣಿ ಹೇಳಿತ್ತು. ಆ ಆಸರೀರವಾಣಿ ಪದೇ ಪದೇ ಕೇಳಿಸ್ತಾ ಇತ್ತು. ಇದರಿಂದ ವಿಚಲಿತನಾದ ಅಬ್ಬಯ್ಯ, ತನಗಾದ ಅನುವವನ್ನು ತನ್ನ ತಾಯಿಗೆ ಹೇಳಿದರು. ಇನ್ನೊಮ್ಮೆ ಆ ಅಶರೀರವಾಣಿ ಕೇಳಿಸಿದರೆ, ನೀನು ದೆವ್ವವಾದ್ರೆ, ಅಲ್ಲೇ ಇರು. ದೇವರಾದ್ರೆ ಬಾ ಅಂತ ಹೇಳು ಅಂತ, ಅಬ್ಬಯ್ಯನ ತಾಯಿ ಹೇಳಿದರು. ತಾಯಿಯ ಮಾತಿಗೆ ಒಪ್ಪಿಕೊಂಡ ಅಬ್ಬಯ್ಯ ತನ್ನ ಕೆಲಸವನ್ನು ಮುಂದುವರೆಸಿದ. ಮತ್ತೆ ಅದೇ ಆಶರೀರವಾಣಿ ಕೇಳಿಸ್ತು ಅನ್ನಯ್ಯನಿಗೆ. ತಾಯಿ ಹೇಳಿದಂತೆ, ದೆವ್ವವಾದ್ರೆ ಬರಬೇಡ. ದೇವರಾದ್ರೆ ಬಾ ಅಂತ ಹೇಳಿದ. ಮಹಾಲಕ್ಷ್ಮಿ ಕೊಳದಿಂದ ಎದ್ದು ಬಂದು ಅಬ್ಬಯ್ಯನ ಮನೆ ಸೇರಿದಳು. ಅಂದಿನಿಂದ ಗೊರವನಹಳ್ಳಿ ಪವಿತ್ರ ಪುಣ್ಯ ಕ್ಷೇತ್ರವಾಗಿ ಪರಿವರ್ತನೆಯಾಯಿತು.