ಯಾವ ದಿನಕ್ಕೆ ಯಾವ ಬಣ್ಣ ಉತ್ತಮ?

ಆಕಾಶದಲ್ಲಿ ಕಾಮನಬಿಲ್ಲು ಗೋಚರಿಸುವುದು ಬೆಳಕಿನ ವಕ್ರೀಭವನ (Refraction) ಕ್ರಿಯೆಯಿಂದ ಎಂಬುದು ಹೆಚ್ಚಿನವರಿಗೆ...
ಯಾವ ದಿನಕ್ಕೆ ಯಾವ ಬಣ್ಣ ಉತ್ತಮ?

ಆಕಾಶದಲ್ಲಿ ಕಾಮನಬಿಲ್ಲು ಗೋಚರಿಸುವುದು ಬೆಳಕಿನ ವಕ್ರೀಭವನ (Refraction) ಕ್ರಿಯೆಯಿಂದ ಎಂಬುದು ಹೆಚ್ಚಿನವರಿಗೆ ಗೊತ್ತಿರುವ ವಿಚಾರವಾಗಿದೆ. ತುಂತುರು ಮಳೆ ಬರುತ್ತಾ ಜೊತೆಗೆ ಬಿಸಿಲು ಬಂದರೆ ಒಂದೊಂದು ಬಾರಿ ಕಾಮನ ಬಿಲ್ಲು ಸಾಮಾನ್ಯವಾಗಿ ಗೋಚರಿಸುತ್ತದೆ. ಅದರಲ್ಲಿ ಏಳು ಬಣ್ಣ ಕಾಣುತ್ತದೆ.

ಏಳು ಬಣ್ಣಗಳ ಕಾಮನ ಬಿಲ್ಲಿಗೆ ಸುರಚಾಪ, ಇಂದ್ರಚಾಪ, ಮಳೆಬಿಲ್ಲು, ಕಾಮನಬಿಲ್ಲು ಮುಂತಾದ ಹೆಸರುಗಳಿವೆ.  ಇದರಲ್ಲಿರುವ ಪ್ರಮುಖ ಬಣ್ಣಗಳೆಂದರೆ-ಕೆಂಪು, ಹಸಿರು, ಹಳದಿ, ಕಿತ್ತಳೆ, ನೀಲಿ, ನೇರಳೆ, ಆಕಾಶನೀಲಿ ಬಣ್ಣಗಳಿವೆ. ಕೆಂಪು ಅಭಿವೃದ್ದಿ, ಅಪಾಯದ ಸೂಚಕ, ಹಸಿರು ಸಮೃದ್ದಿಯ ಸಂಕೇತ, ಹಳದಿ ಭೂರಮೆಯ ಮೈಬಣ್ಣ, ಕಿತ್ತಳೆ ತ್ಯಾಗದ ಪ್ರತೀಕ, ನೀಲಿ ಭಾವೈಕ್ಯತೆಯ ಸಂಕೇತ, ನೇರಳೆ ಆತ್ಮೀಯ ಬಾಂಧವ್ಯಕ್ಕೆ ಕಾರಣವಾಗುವಂತಹದು. ಆಕಾಶನೀಲಿ ಪ್ರಶಾಂತತೆಯನ್ನು ತರುವಂತಹುದಾಗಿದೆ. ಮಳೆಗಾಲದ ಸಂದರ್ಭದಲ್ಲಿ ಆಗಸದಲ್ಲಿ ಗೋಚರಿಸುವ ನಯಮನೋಹರ ದೃಶ್ಯವೇ ಕಾಮನಬಿಲ್ಲಾಗಿದೆ. ಗ್ರಹಗಳ ಬಣ್ಣಗಳ ಬಳಕೆಯನ್ನು ಬಣ್ಣದ ಥೆರಪಿ ಎಂದು ಕರೆಯಲಾಗುತ್ತದೆ.

ಬಣ್ಣಗಳು ನಮ್ಮ ಭಾವನೆ ಹಾಗೂ ಆಲೋಚನೆಗಳನ್ನು ವ್ಯಕ್ತಪಡಿಸುತ್ತದೆ. ಹಲವರಲ್ಲಿ ನಾನು ಇಂದು ಈ ಬಣ್ಣ ಹಾಕಿದರೆ ಖಂಡಿತವಾಗಿ ಕೆಲಸ ಆಗುತ್ತದೆ. ಅಯ್ಯೋ ಇವತ್ತು ಈ ಬಣ್ಣದ ಬಟ್ಟೆ ಹಾಕಿದ್ದೀನಾ, ಹೋಗಿದ ಕೆಲಸ ಆದಾಗೆ ಎಂಬ ರೀತಿಯ ಆಲೋಚನೆಗಳಿರುತ್ತವೆ. ಈ ರೀತಿಯಾಗಿ ಎಷ್ಟೋ ಜನ ಬಣ್ಣದ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದನ್ನು ಪ್ರತೀ ನಿತ್ಯ ನಮ್ಮ ಜೀವನದಲ್ಲಿ ಕಾಣುತ್ತಲೇ ಇರುತ್ತೇವೆ.

ಪ್ರತೀ ನಿತ್ಯ ನಾವು ಕಾಣುವ ಹಾಗೂ ಬಳಸುವ ಬಣ್ಣಗಳ ಲಕ್ಷಣಗಳು.

1.ನೀಲಿ:  ಪ್ರಶಾಂತತೆಯ ಪ್ರತೀಕವಾಗಿದ್ದು,  ಆನಂದ ಮತ್ತು ಮನಸ್ಸಿಗೆ ಉಲ್ಲಾಸ ನೀಡುತ್ತದೆ.

2. ಹಸಿರು:
ಇದರ ಪ್ರಭಾವ ನಿಧಾನವಾದರೂ ಈ ಬಣ್ಣದಿಂದ ಶಾಂತಿ, ನೆಮ್ಮದಿ, ವಿಶ್ರಾಂತಿ ಲಭ್ಯ.

3. ನೇರಳೆ: ಇದು ಮನಸ್ಸಿಗೆ ಪ್ರಶಾಂತತೆಯ ಅನುಭವ ನೀಡುತ್ತದೆ.

4.ಹಳದಿ: ಇದು ಶಕ್ತಿಶಾಲಿಯ ಸಂಕೇತ ಮತ್ತು ವ್ಯಾಮೋಹ ವರ್ಧನೆಯಾಗಿದ್ದು,  ಮನಸ್ಥಿತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

5. ಕೆಂಪು: ಈ ಬಣ್ಣ ಭಾವೋದ್ವೇಗ ಹೆಚ್ಚಿಸುತ್ತದೆ.

6. ಕಿತ್ತಳೆ: ಸಾಮಾನ್ಯವಾಗಿ ಕಿತ್ತಳೆ ಬಣ್ಣ ಮನಸ್ಸಿನ ಭಾವನೆ, ವರ್ತನೆಗಳ ಮೇಲೆ ನೇರವಾಗಿ ಪರಿಣಾಮ ಬೀರುವುದಲ್ಲದೆ ಈ ಬಣ್ಣವು ತೀಕ್ಷ್ಣ ಸ್ವಭಾವ ಹಾಗೂ ಸೌಹಾರ್ದ ರೂಪವನ್ನು ಪಡೆದಿದೆ. ಇದರಿಂದ ವ್ಯಾಮೋಹ ಕೂಡ ಹೆಚ್ಚಾಗುತ್ತದೆ.

ಬಣ್ಣಗಳು ನಮ್ಮ ಭಾವನೆಗಳು ಹಾಗೂ ಆಲೋಚನೆಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ತಜ್ಞರು ಸಹ ಅಭಿಪ್ರಾಯ ಪಟ್ಟಿದ್ದು, ಬಣ್ಣದ ಮೂಲಕ ನಮ್ಮ ದಿನನಿತ್ಯದ ಜೀವದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಸ್ವತಃ ನಾವೇ ಚಿಕಿತ್ಸೆಗಳನ್ನು ಪಡೆದುಕೊಳ್ಳಬಹುದು ಎಂದಿದ್ದಾರೆ.

ತಜ್ಞರ ಪ್ರಕಾರ ವಾರದ 7 ದಿನಗಳಲ್ಲಿ ಧನಾತ್ಮಕ ಪರಿಣಾಮ ಬೀರುವ ಬಣ್ಣಗಳು ಈ ಕೆಳಕಂಡಂತಿವೆ.
 

ವಾರ
ಬಣ್ಣ
ಸಂಕೇತ
ಸೋಮವಾರ
ಬಿಳಿ
ಶುದ್ಧತೆ, ವಿವೇಕ, ಪವಿತ್ರ ಧಾರ್ಮಿಕ
ಮಂಗಳವಾರ
ಕೆಂಪು
ಕಂದುಬಣ್ಣ
ತ್ಯಾಗ, ಲೈಂಗಿಕತೆ.
ಭೂಮಿ
ಬುಧವಾರ
ಹಸಿರು

ಫಲವತ್ತತೆ, ನವೀಕರಣ, ಆಸ್ತಿ
ಗುರುವಾರ
ಹಳದಿ
ನೇರಳೆ
ಜ್ಞಾನೋದಯ.
ಕ್ರೀಯಾಶೀಲತೆ, ಸಂಕೋಚ.
ಶುಕ್ರವಾರ
ಬಿಳಿ
ನೀಲಿ
ವಿವೇಕ, ಪವಿತ್ರ ಧಾರ್ಮಿಕ.
ರಹಸ್ಯ, ಐಂದ್ರಜಾಲಿಕ ಶಕ್ತಿ, ಕಲಾತ್ಮಕ ಪ್ರತಿಭೆ
ಶನಿವಾರಕಪ್ಪು,ಕಡುನೀಲಿ
ನೇರಳೆ
ನೀಲಿ
ಶಕ್ತಿ.
ಕ್ರಿಯಾಶೀಲತೆ, ಸಂಕೋಚ.
ರಹಸ್ಯ, ಐಂದ್ರಜಾಲಿಕ ಶಕ್ತಿ, ಕಲಾತ್ಮಕ ಪ್ರತಿಭೆ
ಭಾನುವಾರ
ಕಿತ್ತಳೆ
ನಸುಗೆಂಪು
ಸಾಹಸ, ಬದಲಾವಣೆ.
ಪ್ರೀತಿ
ದಿನದ ಬಣ್ಣಗಳ ಪ್ರಕಾರ ನೀವೂ ನಿಮ್ಮ ಉಡುಗೆಗಳ ಬಣ್ಣಗಳನ್ನು ಬದಲಾಯಿಸಿಕೊಳ್ಳಬೇಕೆಂದಿದ್ದರೆ ಇಲ್ಲಿದೆ ಉತ್ತಮ ರೀತಿಯ ಉಪಯೋಗ ನೀಡುವ 7 ದಿನಗಳ ಬಣ್ಣದ ಪಟ್ಟಿ.   
ಭಾನುವಾರ:
ಸೋಮವಾರ:
ಮಂಗಳವಾರ:
ಬುಧವಾರ:
ಗುರುವಾರ:
ಶುಕ್ರವಾರ:
ಶನಿವಾರ:
ಈ ಬಣ್ಣದ ಜಪದ ಮಣಿಗಳ ಸಂಕೇತಗಳನ್ನು ಈ ಕೆಳಕಂಡಂತೆ ನಾವು ನೋಡಬಹುದು.

1. ಬಿಳಿ ಬಣ್ಣ:
2. ಕಿತ್ತಳೆ ಬಣ್ಣ:
3. ಹಸಿರು ಬಣ್ಣ:
4. ಸ್ಪಟಿಕ:
5. ಕಂದು ಬಣ್ಣ:
6. ಬೂದು ಬಣ್ಣ:
-ಮಂಜುಳ.ವಿ.ಎನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com