ಕುರ್ಚಿ ಇರಲಿ ವಾಸ್ತು ಪ್ರಕಾರ.. ಎಡ್ವಟ್ಟಾದ್ರೆ ಬಂತು ಗ್ರಹಚಾರ!

ರಾಜಕಾರಣಿಗಳು ಮತ್ತು ಮೂಢನಂಬಿಕೆಗಳಿಗೆ ಎಲ್ಲಿಲ್ಲದ ನಂಟು. ಅದಕ್ಕೆ ಯಾರೂ ಹೊರತಲ್ಲ. ಕರ್ನಾಟಕದ ಪ್ರಮುಖ ನಾಯಕರು...
ವಾಸ್ತು
ವಾಸ್ತು

ರಾಜಕಾರಣಿಗಳು ಮತ್ತು ಮೂಢನಂಬಿಕೆಗಳಿಗೆ ಎಲ್ಲಿಲ್ಲದ ನಂಟು. ಅದಕ್ಕೆ ಯಾರೂ ಹೊರತಲ್ಲ.  ಕರ್ನಾಟಕದ ಪ್ರಮುಖ ನಾಯಕರು ಸೇರಿದಂತೆ ಹಲವು ರಾಜ್ಯಗಳ ವಿವಿಧ ಪಕ್ಷಗಳ ನಾಯಕರು ಹೊಂದಿರುವ ನಂಬಿಕೆಗಳ ಸುತ್ತು ನೋಟ ಇಲ್ಲಿದೆ.

ಸದಾನಂದ ಗೌಡರಿಗೆ ಸದಾ ಕಾಟ!
ಸದಾನಂದ ಗೌಡರು ಸಿಎಂ ಆಗಿದ್ದಾಗ, ಅವರನ್ನು ಕುರ್ಚಿಯಿಂದ ಕೆಳಗಿಳಿಸಬೇಕೆಂದು ಮೂರು ಬಾರಿ ಪ್ರಯತ್ನ ನಡೆದಿತ್ತಂತೆ! ಅ„ಕಾರದಲ್ಲಿ ಸ್ಥಿರತೆಯಿ ರಲೆಂದು ತಮ್ಮ ಹುಟ್ಟೂರಾದಸುಳ್ಯದಲ್ಲಿ ಭೂತಾರಾಧನೆ ನಡೆಸಿದ್ದರು. ಇಷ್ಟಾದರೂ ಕೆಲವೇ ದಿನಗಳಲ್ಲಿ ಗೌಡರು ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಡಬೇಕಾಗಿ ಬಂತು. ಹಾಗಾದರೆ ಸದಾನಂದಗೌಡರಿಗೆ ಸದಾ ಮಾಟದಕಾಟವಿತ್ತಾ? ಗೊತ್ತಿಲ್ಲ!

ಭಕ್ತ ಯಡಿಯೂರಪ್ಪ!
ದೇವರ ಮೇಲೆ ಅಪಾರ ನಂಬಿಕೆಯಿಟ್ಟುಕೊಂಡಿರುವ ಮಾಜಿ ಸಿಎಂ ಯಡಿಯೂರಪ್ಪ ಸಿಎಂ ಆಗುತ್ತಿದ್ದಂತೆ ತಾವು ಕಚೇರಿಯಲ್ಲಿ ಕೂರುವ ಕುರ್ಚಿಗೆ ಹೂವು, ಗಂಧ ಇಟ್ಟು ಪೂಜೆ ಮಾಡಿ ಹೊರಗೆ ಕಾಯಿ ಒಡೆದು ನಂತರ ಕುಳಿತಿದ್ದರು. ಇನ್ನು ಅವರ ಮನೆಯಲ್ಲಿ ಘೋರಾಸ್ತ್ರ  ಹೋಮ, ಆದಿತ್ಯ ಹೃದಯ, ನರಸಿಂಹ ಕವಚಸೇರಿದಂತೆ ಹಲವಾರು ಹೋಮಗಳನ್ನು ಮನೆಯಲ್ಲಿ ಮಾ ಡಿಸಿದ್ದಾರೆಂದು ನೋಡಿದವರು ಹೇಳುತ್ತಾರೆ. ತಮ್ಮ ಕುಟುಂಬದ ಕ್ಷೇಮೋಭಿವೃದ್ಧಿಗೆ ಹಾಗೂ ಶತ್ರು ನಾಶಕ್ಕಾಗಿ ಯಡಿಯೂರಪ್ಪನವರು ಅವರ ಮನೆಯಲ್ಲಿ ಆಗಾಗ ಹೋಮ ಮಾಡುತ್ತಾರೆ ಎಂದು ಯಡಿಯೂರಪ್ಪನವರಆಪ್ತ ಅರ್ಚಕರೇ ಹೇಳಿದ್ದಾರೆ.


ದೇವೆಗೌಡರ ನಿಂಬೆಹಣ್ಣು ರಾಜಕೀಯ!

ಕೆಲ ದಶಕಗಳಿಂದಲೂ ದೇವೆಗೌಡ್ರೇ ಮಾಟ ಮಾಡಿಸಿದ್ದರು ಎನ್ನುವ ಆಪಾದನೆ ಕೇಳುತ್ತಲೇ ಬಂದಿದ್ದೇವೆ. ಇದಕ್ಕೆ ನಮಗೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ನನ್ನ ವಿರುದ್ಧ  ಗೌಡರು ಮಾಟ ಮಾಡಿಸಿದ್ದಾರೆಂದು ಮಾಜಿ ಸಚಿವ ದಿ.ಕೆ.ಎನ್.ನಾಗೇಗೌಡರು 2000ನೇ ಇಸವಿಯಲ್ಲಿ ಹೇಳಿದ್ದರು. ಇನ್ನು ಬಿಜೆಪಿ ಮತ್ತು ಕಾಂಗ್ರೆಸ್‍ನವರು ಪ್ರತಿ ಅಮಾವಾಸ್ಯೆಗೊಮ್ಮೆ
ಗೌಡ್ರು ಮಾಟ ಮಾಡಿಸಿದ್ರು ಎಂದು ಮಾಧ್ಯಮಗಳಿಗೆ ಹೇಳುತ್ತಲೇ ಇರುತ್ತಾರೆ.


ಕಸ್ತೂರಿ ಆಡಳಿತ ಬಿಟ್ಟ ಕುಮಾರಣ್ಣ!
ಅಪಾರ ನಷ್ಟದಿಂದಾಗಿ ಕಸ್ತೂರಿ ವಾಹಿನಿ ಆಡಳಿತವನ್ನು ಇತರರಿಗೆ ಬಿಟ್ಟುಕೊಟ್ಟಿದ್ದಾರೆ. ಸದ್ಯ ಮನರಂಜನಾ ವಾಹಿನಿ ಅವರ ಕುಟುಂಬದ ವತಿಯಲ್ಲಿಲ್ಲ. ಪತಿಯ ಆರೋಗ್ಯ ಹಾಗೂ ಮಗನ ಭವಿಷ್ಯದ ಕಡೆ ಗಮನ ಕೊಡುವುದಕ್ಕಾಗಿ ಆಡಳಿತಬಿಟ್ಟುಕೊಟ್ಟೆವು ಎನ್ನುತ್ತಾರೆ ಅನಿತಾ ಕುಮಾರಸ್ವಾಮಿ.


ಸಿದ್ದರಾಮಯ್ಯನವರ ಆಚರಣೆ ಮತ್ತು ನಂಬಿಕೆಗಳು!!
ಮೂಢನಂಬಿಕೆಗಳನ್ನು ನಂಬಬಾರದು ಎಂದು ಸದಾ ಇನ್ನೊಬ್ಬರಿಗೆ ಬುದ್ಧಿ  ಹೇಳುವ ಮುಖ್ಯ ಮಂತ್ರಿ ಸಿದ್ದರಾಮಯ್ಯನವರೇನು ಆಚರಣೆಗಳ
ಮತ್ತು ನಂಬಿಕೆಗೆಳ ಹೊರತಾಗಿಲ್ಲ! ಇತ್ತೀಚೆಗೆ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಹಾರಾಟದ ವೇಳೆ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ತಕ್ಷಣವೇ ಹೆಲಿಕಾಪ್ಟರ್
ಕೆಳಗಿಳಿಸಿ ಸಿದ್ದರಾಮಯ್ಯನವರನ್ನು ಕಾರಿನಲ್ಲಿ ಕಳುಹಿಸಲಾಗಿತ್ತು. ಆದರೆ ಮಾರನೆಯ ದಿನಸಿದ್ದರಾಮಯ್ಯನವರು ಕುಟುಂಬ ಸಮೇತ ದೇವಸ್ಥಾನಕ್ಕೆ ತೆರಳಿ ನಡೆದ ಘಟನೆಗೆ ಶಾಂತಿ ಹೋಮ ಮಾಡಿಸಿಕೊಂದು ಬಂದಿದ್ದರು.

ಚಾಮರಾಜನಗರಕ್ಕೆ ಕಾಲಿಟ್ಟರೆ ಅಧಿ ಕಾರಕ್ಕೆ ಆಪತ್ತು ಇವತ್ತಿಗೂ ಚಾಮರಾಜನಗರಕ್ಕೆ ಅಧಿಕಾರದಲ್ಲಿರುವ ರಾಜಕಾರಣಿಗಳು ಹೋಗಲು ಹೆದರುತ್ತಾರೆ. ಮೂಢನಂಬಿಕೆ ಏನಪ್ಪಾ ಎಂದರೆ, ಚಾಮರಾಜನಗರಕ್ಕೆ ಹೋದರೆ 30 ದಿನಗಳಲ್ಲೇ ಅಧಿಕಾರದಿಂದ ಕೆಳಗಿಳಿಯ
ಬೇಕಾಗು ತ್ತದೆಯಂತೆ. ಇದೇ ನಂಬಿಕೆಯ ಹಿನ್ನೆಲೆ ಯಲ್ಲಿ ಉತ್ತರಪ್ರದೇಶದ ನೋಯ್ಡಾಗೂ ಸಹ ಯಾವ ರಾಜಕಾರಣಿ ಯಾಗಲೀ, ಅಧಿಕಾರಿಯಾ ಗಲೀ ಹೋಗುವುದಿಲ್ಲ.


ಹೊರ ರಾಜ್ಯಗಳ ರಾಜಕಾರಣಿಗಳದ್ದೂ ಇದೇ ಕಥೆ!

ಮೂಢನಂಬಿಕೆಗಳನ್ನು ನಂಬುವ ರಾಜಕಾರಣಿಗಳು ಹೊರ ರಾಜ್ಯಗಳಲ್ಲೂ ಇದ್ದಾರೆ. ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಮೂಢನಂಬಿಕೆಗಳನ್ನು ನಂಬುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಬಿಜೆಪಿ ಕಾರ್ಯಕರ್ತ ರೇನಾದರೂ ಅವರ ಕಚೇರಿಗೆ ಕಪ್ಪು ಅಂಗಿ ಧರಿಸಿ ಬಂದರಂತೂ ಒಳಗೇ ಸೇರಿಸುವುದಿಲ್ಲ. ಹಿಮಾಚಲ
ಪ್ರದೇಶದ ಮುಖ್ಯಮಂತ್ರಿ ವೀರಭದ್ರ ಸಿಂಗ್ ಮತ್ತು ಮಾಜಿ ಸಿಎಂ ಪಿ.ಕೆ.ಧುಮಾಲ್‍ಗೆ ಒಂದು ಸಾಮ್ಯತೆಯಿದೆ. ಅದೇನೆಂದರೆ ಇಬ್ಬರೂ ದೈವಭಕ್ತರು. ಸೋಜಿಗವೆಂಬಂತೆ ಇಬ್ಬರ ಅದೃಷ್ಟದ ಸಂಖ್ಯೆಯೂ 5 ಮತ್ತು 9. ಇವರುಗಳ ಎಲ್ಲ ಮುಖ್ಯ ಸಭೆಗಳು, ಭೇಟಿಗಳು, ಅಷ್ಟೇ ಅಲ್ಲ ಇವರ ಕಾರು ನಂಬರ್ ಪ್ಲೇಟಿನಲ್ಲೂ ಸಹ 5 ಮತ್ತು 9 ಇದ್ದೇ ಇರುತ್ತವೆ.

ಮಹಾರಾಷ್ಟ್ರದಲ್ಲಿ ಶಿವಸೇನೆಯ ಹಿರಿಯ ಮುಖಂಡರು ಮತ್ತು 5 ಬಾರಿ ಮುಂಬೈನಲ್ಲಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದ  ಮೋಹನ್ ರವಾಲೆ ಮನೆಯಿಂದ  ಹೊರಗೆ ಹೊರಟರೆ ಹಾಕುವುದೇ ಹಳದಿ ಬಣ್ಣದ ಅಂಗಿ . ಜ್ಯೋತಿಷಿಯೊಬ್ಬರ ಈ ಮಾತನ್ನು ಅದೆಷ್ಟು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದರೆಂದರೆ, ಒಮ್ಮೆ ಕಾರ್ಯಕರ್ತರು ಇವರ ನಂಬಿಕೆಗಳನ್ನು ಅರಿಯದೆ ಚುಣಾವಣಾ ಪ್ರಚಾರಕ್ಕೆಂದು ಸುಮಾರು 1.5ಲಕ್ಷ  ಪೋಸ್ಟರ್‍ಗಳಲ್ಲಿ ಮೋಹನ್ ಇನ್ಯಾವುದೋ ಅಂಗಿ ತೊಟ್ಟಿದ್ದನ್ನು ಮುದ್ರಿಸಿ ಇನ್ನೇನು ಎಲ್ಲ ಕಡೆ ಹಂಚಬೇಕು ಎಂದಿದ್ದಾಗ ಅಷ್ಟೂ ಪೋಸ್ಟರ್‍ಗಳನ್ನ ವಾಪಸ್ ತರಿಸಿಕೊಂಡು ಹಳದಿ ಅಂಗಿ ತೊಟ್ಟಿರುವ ಫೋಟೊ ತೆಗೆಸಿಕೊಂಡು
ಅದನ್ನೇ ಅಧಿಕೃತ  ಪೋಸ್ಟರ್‍ಗಳನ್ನಾಗಿಸಿ ಪ್ರಚಾರಕ್ಕೆ ಕಳುಹಿಸಿಕೊಟ್ಟರು. ರಾಜಕಾರಣಿಗಳು ಇಂಥ ಮೂಢನಂಬಿಕೆಗಳನ್ನುಅದೆಷ್ಟು ನಂಬುತ್ತಾರೆಂದರೆ ಕಡೆಗೆ 100 ಜನರ ಮತಗಳನ್ನಾದರೂ ಬಿಟ್ಟಾರು ಜ್ಯೋತಿಷಿಗಳ ಮತ್ತು ಮಂತ್ರವಾದಿಗಳ ಮಾ ತನ್ನು ಮಾತ್ರ ತೆಗೆದು ಹಾಕುವುದಿಲ್ಲ. ಇನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚೌಹಾಣ್ಜ್ಯೋತಿಷಿಯ ಆದೇಶದ ಮೇರೆಗೆ ಅಶೋಕ್ ರಾವ್ ಚೌಹಾಣ್ ಎಂದು ಬದಲಾಯಿಸಿಕೊಂಡಿದ್ದರು. ಬಿಹಾರದಲ್ಲಿ ಆರ್ ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯÁದವ್ ವಾಸ್ತುತಜ್ಞ ರ ಮಾತಿಗೆ ಅದೆಷ್ಟರ ಮಟ್ಟಿಗೆ ಬೆಲೆ ಕೊಟ್ಟಿದ್ದರೆಂದರೆ ತಮ್ಮ ಮನೆಯಲ್ಲಿದ್ದ ಈಜು ಕೊಳವನ್ನೇಬದಲಾಯಿಸಿದ್ದರು ಎಂದರೆ ನೀವು ನಂಬಲೇ ಬೇಕು.

ಕೊಳ್ಳೇಗಾಲವೇ ಹಾಟ್‍ಸ್ಪಾಟ್!
ಬೆಂಗಳೂರಿನ ಇನ್ಸ್‍ಸ್ಟಿಟ್ಯೂಟ್ ಆಫ್  ಮ್ಯಾನೇಜ್‍ಮೆಂಟ್‍ನಲ್ಲಿ ಎಂಬಿಎ ಮಾಡಿದರೆ ಹೇಗೆ ಗೌರವ ಕೊಡುತ್ತಾರೋ ಹಾಗೆಯೇ ಕೊಳ್ಳೇಗಾಲದಲ್ಲಿ ಮಾಟ ಮಂತ್ರ ಕಲಿತು ಬಂದರೆ ಆ ಮಂತ್ರವಾದಿಗೆ ಸಿಗುವ ಬೆಲೆಯೇ ಬೇರೆ! ಕೊಳ್ಳೇಗಾಲಕ್ಕೆ ಅದು ಹೇಗೆ, ಎಲ್ಲಿಂದ ಇಂಥ ಹೆಸರು ಬಂತೋ ಗೊತ್ತಿಲ್ಲ. ಆದರೆ ಮಾಟ ಮಂತ್ರಕ್ಕೆ ಮಾತ್ರ ಹೆಸರುವಾಸಿ. ಒಬ್ಬ ರಾಜಕಾರಣಿ ಚುನಾಯಿತನಾಗಬೇಕಿದ್ದರೆಜನರ ಓಟು ಗಳಿಸಬೇಕೆಂಬುದು ಈಗ ಹಳೆಯ ಮಾತು. ಆದರೆ ಓಟಿನ ಜೊತೆಗೆ ದೆವ್ವ ದೇವರುಗಳ ಆರ್ಶೀವಾದವೂ ಬೇಕು ಎನ್ನುವುದು ಹೊಸ ವಿಷಯ. ಹಾಲಿ ರಾಜ ಕಾರಣದಲ್ಲಿ ಮಾಟ ಮಂತ್ರಗಳ ಪಾತ್ರ ಪ್ರಮುಖವಾಗಿದೆಂಬುದಕ್ಕೆ ನಮಗೆ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿದೆ. ಸುಮಾರು ಮೂರು ದಶಕಗಳಿಂದ ಇದ್ದ ಜನತಾ ದಳದ ಮುಖ್ಯ ಕಚೇರಿ ತೆರವು ಗೊಳಿಸಲಾಯಿತು. ಮಾರನೆಯ ದಿನ ಕಾಂಗ್ರೆಸ್ ಕಾರ್ಯಕರ್ತರು ತೆರವುಗೊಳಿ ಸಲಾದ ಆ ಕಚೇರಿಗೆ ಹೋದಾಗ ಅಲ್ಲೊಂದು ಆಶ್ಚರ್ಯ ಕಾದಿತ್ತು. ಕೆಂಪು ಬಟ್ಟೆಯಲ್ಲಿ ಸುತ್ತಲಾಗಿದ್ದ ನಿಂಬೆಹಣ್ಣು ಮತ್ತು ಉಂಡೆ ಗಳನ್ನು ನೋಡಿ ಕಾರ್ಯಕರ್ತರು ಬೆಚ್ಚಿಬಿದ್ದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com