ರಾಶಿಗನುಗುಣವಾಗಿ ಬಟ್ಟೆ ಧರಿಸಿದ್ರೆ ಆತ್ಮವಿಶ್ವಾಸ ವೃದ್ಧಿ!

ನಿಮ್ಮ ಜನ್ಮದಿನ, ಜನಿಸಿದ ತಿಂಗಳು ಹಾಗೂ ರಾಶಿಗೆ ಯಾವ ಬಣ್ಣ ಹೊಂದುತ್ತದೆ ಎನ್ನುವುದರ ಅರಿವು ನಿಮಗಿದ್ದರೆ ಮತ್ತು ಜೀವನದಲ್ಲಿ ಅಳವಡಿಸಿಕೊಂಡರೆ ಅತ್ಯದ್ಭುತ ಬದಲಾವಣೆ ಕಾಣಬಲ್ಲಿರಿ...
ಬಟ್ಟೆಗಳು
ಬಟ್ಟೆಗಳು
Updated on

ಚಂದವಾದ ಹಾಗೂ ಆಕರ್ಷಕವಾದ ವಸ್ತುಗಳನ್ನು ಕಣ್ಣು ಬೇಗನೆ ಗ್ರಹಿಸುತ್ತದೆ ಅಷ್ಟೇ ಅಲ್ಲದೆ ಅಂತಹ ವಸ್ತುಗಳನ್ನು ಬಳಸುವಂತೆ, ಧರಿಸುವಂತೆ ಪ್ರೋತ್ಸಾಹಿಸುತ್ತದೆ. ಕಣ್ಣಿಗೆ ಅಂದವಾಗಿ ಕಾಣಿಸಿದ ಬಟ್ಟೆಗಳನ್ನು ಧರಿಸುವುದು ನಮ್ಮಲ್ಲಿನ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ ಎಂಬುದು ಪ್ರಶ್ನೆ. ನಿಮ್ಮ ಜನ್ಮದಿನ, ಜನಿಸಿದ ತಿಂಗಳು ಹಾಗೂ ರಾಶಿಗೆ ಯಾವ ಬಣ್ಣ ಹೊಂದುತ್ತದೆ ಎನ್ನುವುದರ ಅರಿವು ನಿಮಗಿದ್ದರೆ ಮತ್ತು ಜೀವನದಲ್ಲಿ ಅಳವಡಿಸಿಕೊಂಡರೆ ಅತ್ಯದ್ಭುತ ಬದಲಾವಣೆ ಕಾಣಬಲ್ಲಿರಿ.

ಬಟ್ಟೆಗಳಿಗೂ ರಾಶಿಗೂ ಸಂಬಂಧವಿದೆಯಾ? ಎಂದು ಯೋಚಿಸಬೇಡಿ, ಕಣ್ಣಿಗೆ ಚೆನ್ನಾಗಿ ಕಂಡಿದ್ದನ್ನು ನೀವು ಧರಿಸಬಹುದು. ಆದರೆ ಅದು ನಿಮ್ಮ ವ್ಯಕ್ತಿತ್ವಕ್ಕೆ ಹೊಂದಿಕೊಳ್ಳುತ್ತೆ ಎಂಬುದು ನಿಮಗೆ ಗೊತ್ತಾ? ಹೌದು. ನೀವು ಧರಿಸುವ ಬಟ್ಟೆಗೂ ಹಾಕಿಕೊಳ್ಳುವ ವಸ್ತುವಿಗೂ ನಿಮ್ಮ ರಾಶಿಗೂ ಸಂಬಂಧವಿದೆ.

ನಾವು ಯಾವ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಚೆಂದ ಕಾಣುತ್ತದೆ ಎಂಬುದು ಮುಖ್ಯವಲ್ಲ. ಯಾವ ಮಾದರಿಯ ಬಟ್ಟೆಗಳನ್ನು ಧರಿಸಿದರೆ ನಮ್ಮಲ್ಲಿನ ಆತ್ಮವಿಶ್ವಾಸ ಹೆಚ್ಚುತ್ತದೆ ಎಂಬುದು ಮುಖ್ಯ. ಎಲ್ಲ ರಾಶಿಗಳೂ ಅಗ್ನಿ ವಾಯು, ನೆಲ, ಜಲ ಹಾಗೂ ಆಕಾಶ ಈ ತತ್ವಗಳನ್ನು ಆಧರಿಸಿ ಇರುವುದರಿಂದ ಈ ಎಲ್ಲ ತತ್ವಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಶಕ್ತಿಯನ್ನು ನೀಡುತ್ತವೆ. ಆದರೆ ನಮ್ಮಲ್ಲಿನ ಬಹುತೇಕರು ತಮ್ಮ ರಾಶಿಗೆ ಹೊಂದುವ ಬಟ್ಟೆಯನ್ನು ತೋಡುವ ಗೋಜಿಗೆ ಹೋಗುವುದಿಲ್ಲ.  ಉದಾಹರಣೆಗೆ ಸಿಂಹ ರಾಶಿಯವರ ಸ್ವಭಾವ ಮೃಗೀಯವಾಗಿದ್ದು, ಅವರ ಗುಣಕ್ಕೂ ಚರ್ಮದ ವಸ್ತುಗಳಿಗೂ ಸರಿ ಹೊಂದುವುದಿಲ್ಲ.

ಯಾವ ರಾಶಿಯವರು ಯಾವ ರೀತಿಯ ಬಟ್ಟೆ ಧರಿಸಬೇಕು

ಮೇಷ: ಮೇಷ ರಾಶಿಯವರಿಗೆ ಲೆದರ್, ಬೆಳ್ಳಿ, ಕಬ್ಬಿಣದ ವಸ್ತುಗಳು ಸರಿ ಹೊಂದುವುದಿಲ್ಲ. ನೀಲಿ, ಕೆಂಪು, ಕೇಸರಿ ಬಣ್ಣದ ಬಟ್ಟೆಗಳು ಇವರಿಗೆ ಉತ್ತಮ.

ವೃಷಭ: ಹಸಿರು, ಬಿಳಿ, ಕಂದು ಮತ್ತಿತರ ದಟ್ಟ ಬಣ್ಣದ ಸಿಲ್ಕ್ ಬಟ್ಟೆಗಳು ಇವರಿಗೆ ಸರಿಯಾಗಿ ಹೊಂದುತ್ತವೆ. ಈ ಬಣ್ಣದ ಬಟ್ಟೆಗಳು ಸಾದಾ ಅರ್ಥಾತ್ ಡಿಸೈನ್ ರಹಿತ ಹಾಗೂ ಬಹುಬಣ್ಣದ ಲೇಯರ್‌ಗಳುಳ್ಳ ಈಗಿದ್ದರೆ ಇನ್ನೂ ಉತ್ತಮ.

ಮಿಥುನ: ಪರಿಶುದ್ಧ ಕಾಟನ್, ಹಾಗೂ ಲಿನೆನ್ ಬಟ್ಟೆಗಳು ಇವರಿಗೆ ಹೊಂದುತ್ತವೆ. ಹಸಿರು, ಬಿಳಿ ಇವರಿಗೆ ಅತ್ಯುತ್ತಮ.

ಕರ್ಕ: ಕರ್ಕ ರಾಶಿಯ ಮಂದಿಗೆ ಸಿಲ್ಕ್, ಕಾಟನ್ ಹಾಗೂ ಲೆನಿನ್ ಬಟ್ಟೆಗಳು ಅತ್ಯುತ್ತಮ. ಬಿಳಿ ಬಣ್ಣದ ಬಟ್ಟೆಗಳು ಅಥವಾ ತುಂಬ ಸರಳವಾದ ಡಿಸೈನ್ ಹೊಂದಿದ ಬಟ್ಟೆಗಳು ಇವರಿಗೆ ಒಳ್ಳೆಯದು.

ಸಿಂಹ: ಸಿಂಹ ರಾಶಿಯ ಮಂದಿಗೆ ಕೆಂಪು, ಹಳದಿ ಹಾಗೂ ಕೇಸರಿ ಬಣ್ಣದ ಕಾಟನ್ ಬಟ್ಟೆಗಳು ಉತ್ತಮ.

ಕನ್ಯಾ: ಕಾಟನ್ ಹಾಗೂ ಲಿನೆನ್ ಬಟ್ಟೆ ಇವರಿಗೆ ಒಳ್ಳೆಯದು. ಅಗಲವಾದ ಕಟ್‌ಗಳು ಅಥವಾ ಶೇಡ್‌ಗಳಿರುವ ಬಟ್ಟೆ ಅಷ್ಟು ಒಳ್ಳೆಯದಲ್ಲ.

ತುಲಾ: ತುಲಾ ರಾಶಿಯ ಮಂದಿಗೆ ಸಿಂಥೆಟಿಕ್ ಸಿಲ್ಕ್ ಬಟ್ಟೆಗಳು ಒಳ್ಳೆಯದು. ಕೆಂಪು, ಕೇಸರಿ ಬಣ್ಣದ ಬಟ್ಟೆಗಳು ಹೊಂದಿಕೆಯಾಗುವುದಿಲ್ಲ.

ವೃಶ್ಚಿಕ: ಕೆಂಪು, ಹಳದಿ ಹಾಗೂ ಕೇಸರಿ ಬಣ್ಣದ ಬಟ್ಟೆಗಳು ಉತ್ತಮ.

ಧನು: ಈ ರಾಶಿಯ ಮಂದಿಗೆ ಹಳದಿ, ತೆಳು ಕೇಸರಿ, ಕಿತ್ತಳೆ ಬಣ್ಣಗಳು ಹೊಂದುತ್ತವೆ.

ಮಕರ: ಈ ರಾಶಿಯ ಮಂದಿಗೆ ಕಾಟನ್, ಸಿಲ್ಕ್, ಲಿನೆನ್ ಮಾದರಿಗಳ ಬಟ್ಟೆ ಉತ್ತಮ. ಕಪ್ಪು, ನೀಲಿ, ಕಂದು ಉತ್ತಮ.

ಕುಂಭ: ಈ ರಾಶಿಯ ಮಂದಿಗೆ ದಟ್ಟ ಬಣ್ಣದ ಬಟ್ಟೆಗಳು ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತದೆ.

ಮೀನ: ಈ ರಾಶಿಯವರು ಹಳದಿ, ಕಿತ್ತಳೆ, ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು. ಇವರಿಗೆ ಸಾಮಾನ್ಯವಾಗಿ ಎಲ್ಲಾ ಮಾದರಿಯ ಬಟ್ಟೆ ಹೊಂದುತ್ತವೆ.

- ವಿಶ್ವನಾಥ್. ಎಸ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com