ಅದೃಷ್ಟ, ಹಣ, ಪ್ರೀತಿ ಯಶಸ್ಸಿನೊಂದಿಗೆ ಆರೋಗ್ಯ ತರಬಲ್ಲ ಗಿಡಗಳು..!

ಭಾರತದ ಭೂಮಿಯಲ್ಲಿ ವೈವಿಧ್ಯತೆ ಇದೆ. ನೆಲದ ಬಗ್ಗೆ ಗಮನ ಕೊಡುವ ಉದಾತ್ತವಾದ ನೆಲಮುಖೀ ಸಂಸ್ಕೃತಿಯ ಸಮೃದ್ಧಿ ಆಗರವಾಗಿದೆ. ಭಾರತೀಯರಲ್ಲಿರುವ ನಂಬಿಕೆಗಳು, ಪಾರಂಪರಿಕ ಆಚರಣೆಗಳು ಮುಂದುವರೆಯುತ್ತಲೇ ಹೋಗುತ್ತಿದೆ. ವಿಜ್ಞಾನ ತಂತ್ರಜ್ಞಾನಗಳು ದೇಶದಲ್ಲಿ ಎಷ್ಟೇ ಮುಂದುವರೆಯುತ್ತಿದ್ದರು...
ಅದೃಷ್ಟ, ಯಶಸ್ಸಿನೊಂದಿಗೆ ಆರೋಗ್ಯ ತರಬಲ್ಲ ಗಿಡಗಳು
ಅದೃಷ್ಟ, ಯಶಸ್ಸಿನೊಂದಿಗೆ ಆರೋಗ್ಯ ತರಬಲ್ಲ ಗಿಡಗಳು

ಭಾರತದ ಭೂಮಿಯಲ್ಲಿವೈವಿಧ್ಯತೆ ಇದೆ. ನೆಲದ ಬಗ್ಗೆ ಗಮನ ಕೊಡುವ ಉದಾತ್ತವಾದ ನೆಲಮುಖೀ ಸಂಸ್ಕೃತಿಯ ಸಮೃದ್ಧಿಆಗರವಾಗಿದೆ. ಭಾರತೀಯರಲ್ಲಿರುವ ನಂಬಿಕೆಗಳು, ಪಾರಂಪರಿಕ ಆಚರಣೆಗಳು ಮುಂದುವರೆಯುತ್ತಲೇಹೋಗುತ್ತಿದೆ. ವಿಜ್ಞಾನ ತಂತ್ರಜ್ಞಾನಗಳು ದೇಶದಲ್ಲಿ ಎಷ್ಟೇ ಮುಂದುವರೆಯುತ್ತಿದ್ದರು. ಅವುಗಳಜೊತೆಜೊತೆಗೆ ಮೂಢನಂಬಿಕೆಗಳು ಸಾಗುತ್ತಲೇ ಹೋಗುತ್ತಿದೆ. ಭಾರತದಲ್ಲಿ ವಾಸಿಸುವ ಹಲವು ಭಾರತೀಯರುಜ್ಯೋತಿಷ್ಯ, ವಾಸ್ತು, ಭವಿಷ್ಯ, ಹಸ್ತ ಮುದ್ರಿಕೆ ಇತ್ಯಾದಿಗಳ ಬೆನ್ನು ಬೀಳುತ್ತಲೇ ಇರುತ್ತಾರೆ.

ನಂಬಿಕೆಗಳು ಜನರಮಾನಸಿಕ ಹಾಗೂ ಧಾರ್ಮಿಕ ಆಚರಣೆಗಳಿಗೆ ಬಿಟ್ಟ ವಿಚಾರ. ನಂಬಿಕೆ ಎಂಬುದು ವ್ಯಕ್ತಿಯ ಧನಾತ್ಮಕ ಹಾಗೂಋಣಾತ್ಮಕ ಚಿಂತನೆಗಳನ್ನು ಬದಲಾಯಿಸಬಲ್ಲದು. ಆ ನಂಬಿಕೆಯಿಂದ ಭಾರತೀಯರು ಇಂದಿಗೂ ಹಲವು ಹಿರಿಯರುನಡೆಸಿಕೊಂಡು ಬಂದಿರುವ ಆಚರಣೆಗಳು ಹಾಗೂ ನಂಬಿಕೆಗಳನ್ನು ಪಾರಂಪರಿಕವಾಗಿ ಮುಂದುವರೆಸಿಕೊಂಡುಬರುತ್ತಲಿರುವುದು. ಭಾರತೀಯರಲ್ಲಿ ಮನೆ, ವಾಸ್ತು, ಭವಿಷ್ಯ, ಭೂಮಿ,ಸಂಸ್ಕೃತಿ, ಆಚಾರ ವಿಚಾರಗಳೆಂಬ ನಾನಾ ರೀತಿಯನಂಬಿಕೆಗಳಿದ್ದು, ಈ ನಂಬಿಕೆಗಳಲ್ಲಿ ಗಿಡಗಳೂ ಕೂಡ ಪ್ರಮುಖಪಾತ್ರಹೊಂದಿವೆ. ಗಿಡಗಳಲ್ಲಿ ಕೆಲವು ಸಸ್ಯಗಳು ಮನೆಯಲ್ಲಿ ಉತ್ತಮ ವಾತಾವರಣ ಆರೋಗ್ಯ. ಸಂಪತ್ತುನೀಡುತ್ತದೆ ಎಂಬ ನಂಬಿಕೆಗಳು ಹಿರಿಯರಲ್ಲಿತ್ತು. ಈ ನಂಬಿಕೆಯು ಇಂದಿನ ಆಧುನಿಕ ಜಗತ್ತಿನಲ್ಲಿಯೂಮುಂದುವರೆದುಕೊಂಡು ಬಂದಿದೆ. ವೈಜ್ಞಾನಿಕವೋ ಮೂಢನಂಬಿಕೆಯೋ ಭಾರತೀಯರ ಮನೆಯಲ್ಲಿ ಪ್ರತಿಯೊಂದುಮನೆಯಲ್ಲಿಯೂ ಕನಿಷ್ಟ ಎಂದರೂ ಒಂದು ಗಿಡವನ್ನಾದರೂ ನಾವು ಕಾಣಬಹುದು.

ಭಾರತೀಯನಂಬಿಕೆಗಳಲ್ಲಿರುವ ಕೆಲವು ಅದೃಷ್ಟ ತರಬಲ್ಲ ಗಿಡಗಳು ಹಾಗೂ ಅದರ ವೈಜ್ಞಾನಿಕ ಗುಣಗಳು ಈಕೆಳಕಂಡಂತೆ ನೋಡಬಹುದು.

ನಿಂಬೆ ಗಿ (Lemon)

ಗಾಜಿನ ಲೋಟದಲ್ಲಿನೀರು ಹಾಕಿ ಅದರಲ್ಲಿ ನಿಂಬೆಹಣ್ಣನ್ನು ಹಾಕಿ ಮನೆಯಲ್ಲಿಡುವುದನ್ನು ನಾವು ಪ್ರತಿನಿತ್ಯ ಕಾಣತ್ತಲೇಇರುತ್ತೇವೆ. ಬಹುತೇಕ ವ್ಯಾಪಾರಸ್ಥ ಅಂಗಡಿಗಳಲ್ಲಿ ಇದುಸಾಮಾನ್ಯವಾಗಿರುತ್ತದೆ. ಇದಕ್ಕೆ ಕಾರಣ ನಿಂಬೆಹಣ್ಣು ದೃಷ್ಟಿಯಾಗದಂತೆರಕ್ಷಣೆ ಮಾಡುತ್ತದೆ ಎಂದು ಬಹುತೇಕ ಜನರು ಇದನ್ನು ಬಳಸುತ್ತಾರೆ. ವೈಜ್ಞಾನಿಕವಾಗಿ ನಿಂಬೆ ಅನೇಕ ರೀತಿಯ ಔಷಧೀಯಗುಣಗಳನ್ನು ಹೊಂದಿದ್ದು, ಇದರಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ.

 ಬಿಲ್ವಪತ್ರೆ (Bilvapatre)


ಬಿಲ್ವಪತ್ರೆಯದರ್ಶನದಿಂದ ಪುಣ್ಯ ಲಭಿಸುತ್ತದೆ. ಸ್ಪರ್ಶಿಸುವುದರಿಂದ ಸಕಲ ಪಾಪಗಳೂ ನಾಶವಾಗುತ್ತದೆ. ಒಂದುಬಿಲ್ವಪತ್ರೆಯನ್ನು ಶಿವನಿಗೆ ಭಕ್ತಿ ಶ್ರದ್ಧೆಯಿಂದ ಪೂಜಿಸಿದರೆ ಘೋರವಾದ ಪಾಪಗಳು ನಾಶವಾಗುತ್ತದೆ.ಶುಕ್ರವಾರದಂದು ಈ ಬಿಲ್ವ ಫಲವನ್ನು ಪೂಜಿಸಿ ಮನೆಯಲ್ಲಿ ಇಟ್ಟರೆ ಆರ್ಥಿಕ ಪರಿಸ್ಥಿತಿಯಲ್ಲಿಸುಧಾರಣೆಯಾಗುತ್ತದೆ. ವ್ಯಾಪಾರ ವ್ಯವಹಾರಗಳು ಅಭಿವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.ಆಯುರ್ವೇದದಲ್ಲಿ ಈ ಮರದ ಪ್ರತಿಯೊಂದು ಭಾಗವು ಔಷಧಿಯ ಗುಣದಿಂದ ಕೂಡಿದೆ ಎಂಬ ನಂಬಿಕೆಯಲ್ಲಿ ಈಗಿಡವನ್ನು ಬಳಸುತ್ತಾರೆ. ವೈಜ್ಞಾನಿಕವಾಗಿ ಬಿಲ್ವಪತ್ರೆಯನ್ನು ಪ್ರತಿದಿನ ನೀರಿಗೆ ಹಾಕಿ ಮೂರುಗಂಟೆಗಳ ನಂತರ ಆ ನೀರನ್ನು ಸೇವಿಸಿದರೆ ಆರೋಗ್ಯವೂ ಉತ್ತಮವಾಗಿ ಇರುತ್ತದೆ. ಬಿಲ್ವಪತ್ರೆಯನ್ನುಕ್ರಮವಾಗಿ ಸೇವಿಸಿದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಕಾರಣ ಬಿಲ್ವಪತ್ರೆಯ ಔಷಧಿ ಗುಣದಿಂದಕೂಡಿದೆ. ಎಷ್ಟೋ ಕಾಯಿಲೆಗಳು ಈ ಬಿಲ್ವಪತ್ರೆ ಸೇವನೆಯಿಂದ ವಾಸಿಯಾಗಿದೆ. ಬಿಲ್ವಪತ್ರೆಯ ಹಣ್ಣಿನಸೇವನೆ ಮಾಡಿದರೆ ಅಜೀರ್ಣ, ಅತಿಸಾರ, ರಕ್ತದಿಂದಾಗುವ ತೊಂದರೆಗಳು ಪಿತ್ತ, ವಾತ, ಕಫ, ಕಡಿಮೆಯಾಗುತ್ತದೆ.

ತುಳಸಿ ಗಿಡ (tulsi)

ತುಳಸಿ ಗಿಡವುಒಂದು ಅದ್ಭುತ ಔಷಧಿ ಸಸ್ಯ ಎಂದೇ ಹೆಸರಾಗಿದೆ. ಇದರ ಉಪಯೋಗ ಮತ್ತು ಮಹತ್ವವನ್ನು ಆಯುರ್ವೇದಶಾಸ್ತ್ರದಲ್ಲಿ ಸಾರಿ ಸಾರಿ ಹೇಳಲಾಗಿದೆ. ಯಾರ ಮನೆಯಲ್ಲಿ ಈ ಪವಿತ್ರ ತುಳಸಿ ಬೃಂದಾವನವಿರುತ್ತದೋ, ಆ ಮನೆಗೆ ಯಾವ ದುಷ್ಟ ಶಕ್ತಿಗಳ ಕಾಟಇರುವುದಿಲ್ಲ ಎಂಬ ನಂಬಿಕೆ ಹಿಂದೂ ಸಂಸ್ಕೃತಿಯಲ್ಲಿದೆ. ಜತೆಗೆ ಮನೆಯವರೆಲ್ಲರಿಗೂ ಆರೋಗ್ಯ. ಮನೆಯಸ್ತ್ರೀಗೆ ಸೌಭಾಗ್ಯ ಬರುತ್ತದೆ. ಇದು ಬೆಳೆದ ಸುತ್ತಮುತ್ತಲ ಪ್ರದೇಶವು ಪವಿತ್ರವಾಗುತ್ತದೆ. ಇದರಮೇಲೆ ಬೀಸುವ ಗಾಳಿಯನ್ನು ಸೇವಿಸಿದರೆ ಆರೋಗ್ಯವಂತರಾಗಿ ಮತ್ತು ಜನ್ಮ ಜನ್ಮಾಂತರದ ಪಾಪಗಳಪರಿಹಾರವಾಗುತ್ತದೆ ಎಂಬ ನಂಬಿಕೆಗಳು ಜನರಲ್ಲಿದೆ. ವೈಜ್ಞಾನಿಕವಾಗಿ ಈ ತುಳಸಿ ಗಿಡಮೂಲಕೆಯು ಶೀತ, ತಲೆನೋವು, ಅಜೀರ್ಣ, ಮಲೇರಿಯಾ ಮತ್ತುಹೃದಯ ಸಂಬಂಧದ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ಅಲ್ಲದೆ ಶರೀರದಲ್ಲಿರುವ ಹಲವುವಿಷಕ್ರಿಮಿಗಳನ್ನು ಇವು ನಾಶ ಮಾಡುತ್ತದೆ ಎಂದು ಹೇಳಲಾಗುತ್ತದೆ.

ನೇರಳೆ ಗಿಡ (Lavender)
ನೇರಳೆ ಗಿಡಸುವಾಸನಾ ದ್ರವ್ಯಕ್ಕಾಗಿ ಬೆಳೆಯುವ ಗಿಡವಾಗಿದ್ದು
,
ಸುಗಂಧ ಭರಿತ ಹೂಗಳನ್ನು ಬಿಡುತ್ತದೆ
.
ಸಾಮಾನ್ಯವಾಗಿ ಈ ಗಿಡವು ದೆವ್ವ
,
ಭೂತಗಳ ಋಣಾತ್ಮಕ ಚಿಂತನೆಗಳನ್ನುದೂರಾಗಿಸುತ್ತದೆ
ಎಂದು ಹೇಳುತ್ತಾರೆ
.
ಆದರೆ ವೈಜ್ಞಾನಿಕವಾಗಿ ನೇರಳೆ ಗಿಡದ ಸುವಾಸನೆಮನೆಯಲ್ಲಿ ಸ್ನೇಹಮಯ ವಾತಾವರಣ ಮನಸ್ಸಿಗೆ ಶಾಂತಿ
,
ನೆಮ್ಮದಿ ನೀಡುವುದರೊಂದಿಗೆ
,
ಪುರುಷರನ್ನು ಹೆಚ್ಚು ಆಕರ್ಷಿಸುತ್ತದೆ.

ಚೈನೀಸ್ ಎವರ್ಗ್ರೀನ್(Chinese Evergreen)

ಚೈನೀಸ್ ಎವರ್ಗ್ರೀನ್ ಗಿಡವು ಗಾಳಿಯನ್ನು ಶುದ್ಧೀಕರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದಲೇ ಏನೋ ಫೆಂಗ್ ಶುಯಿ ವಾಸ್ತುಶಾಸ್ತ್ರದಲ್ಲಿ ಈ ಗಿಡಕ್ಕೂ ಮಹತ್ವ ನೀಡಲಾಗಿದೆ.

ಚಿಕಣಿ ಗುಲಾಬಿಗಿಡ (Miniature roses)

ಚಿಕಣಿ ಗುಲಾಬಿಗಿಡ ಸಿಗುವುದು ಅತಿ ವಿರಳ. ಈ ಗುಲಾಬಿಯು ಅದೃಷ್ಟ, ಪ್ರೀತಿ ಸಹನೆ, ಶಾಂತಿಯನ್ನು ವೃದ್ಧಿಸುತ್ತದೆ ಎಂದುಹೇಳುತ್ತಾರೆ. ಈ ಚಿಕಣಿ ಗುಲಾಬಿಯಲ್ಲೂ ವಿವಿಧ ರೀತಿಯಬಣ್ಣಗಳಿದ್ದು, ಪ್ರತಿಯೊಂದು ಬಣ್ಣದ ಗುಲಾಬಿಯೂ ವಿಶಿಷ್ಟಶಕ್ತಿಯನ್ನು ಹೊಂದಿರುತ್ತದೆ. ಆವುಗಳಲ್ಲಿ. ಬಿಳಿಬಣ್ಣದ ಗುಲಾಬಿಯು ಧನಾತ್ಮಕ ಚಿಂತನೆ ಹಾಗೂ ಮಾನಸಿಕ ಶಕ್ತಿಯನ್ನುವೃದ್ಧಿಸುತ್ತದೆ.

  • ಬಿಳಿಯೊಂದಿಗಿರುವಕೆಂಪು ಗುಲಾಬಿ- ಭಕ್ತಿ ಮತ್ತು ಭಾವೋದ್ರೇಕ ಹೆಚ್ಚಿಸುತ್ತದೆ. ಕೆಂಪು ಮಿಶ್ರಿತ ಹಳದಿ ಗುಲಾಬಿ- ಶಾಂತಿ, ಆಧ್ಯಾತ್ಮಿಕ, ಭಕ್ತಿ ಮತ್ತು ಸ್ನೇಹಮಯ ವಾತಾವರಣವನ್ನು ವೃದ್ಧಿಸುತ್ತದೆ. ನಸುಗೆಂಪು- ಪ್ರೀತಿ, ಮಾಧುರ್ಯ, ವಿನೋದವನ್ನುಹೆಚ್ಚುಸುತ್ತದೆ. ಪ್ರಕಾಶಮಾನ ಕೆಂಪುಕೆನ್ನೇರಳೆ ಮಿಶ್ರಿತ ಗುಲಾಬಿಯು ಜೀವನ, ಸ್ವಪ್ರೀತಿ, ಆಳವಾದ ಪ್ರೀತಿಯನ್ನು ಹೆಚ್ಚಿಸುತ್ತದೆ.
  • ನಸು ಕೆನ್ನೀಲಿ- ಆಧ್ಯಾತ್ಮಿಕ ಭಾವವನ್ನು ಹೆಚ್ಚಿಸುತ್ತದೆ. ಕೆಂಪು ಗುಲಾಬಿ- ನಿಜವಾದ ಪ್ರೀತಿ, ಭಾವೋದ್ರೇಕವನ್ನು ಹೆಚ್ಚಿಸುತ್ತದೆ ಎಂದುಹೇಳುತ್ತಾರೆ.
  • ವೈಜ್ಞಾನಿಕವಾಗಿಗುಲಾಬಿಯು ಅಲಂಕಾರಕ್ಕೆ, ಸೌಂದರ್ಯವರ್ಧನೆಗೆ ಮಹತ್ವದ್ದಾಗಿರುವಂತೆ ಔಷಧೀಯಗುಣಗಳಿಂದಾಗಿಯೂ ಮಹತ್ವದ್ದಾಗಿದೆ. ಮಲಬದ್ಧತೆ, ರಕ್ತಭೇದಿ, ಬಾಯಿಯ ದುರ್ಗಂಧ, ನಿದ್ರಾಹೀನತೆಯಂತಹ ಚಿಕಿತ್ಸೆಗಳಿಗೆ ಗುಲಾಬಿಯನ್ನು ಬಳಲಾಗುತ್ತದೆ.
ಸ್ನೇಕ್ ಪ್ಲಾಂಟ್( snake plant)
ನೋಡಲುಆಕರ್ಷಕವಾಗಿರುವ
,
ಸುಲಭವಾಗಿ ಬೆಳಸಬಹುದಾದ ಈ ಗಿಡ ಕೂಡ ಮನೆಯೊಳಗೆಇದ್ದರೆ ಶುದ್ಧ ಗಾಳಿಯನ್ನು ಸೇವಿಸಬಹುದು
.

ಸೀತೆ ಹೂವಿನ ಗಿಡ (Orchid)

ಪ್ರೀತಿಸುವವ್ಯಕ್ತಿ ನಮ್ಮೊಡನೆ ಆಕರ್ಷಿತರಾಗುವಂತೆ ಈ ಗಿಡ ಮಾಡುತ್ತದೆ ಮತ್ತು ಧೀರ್ಘಕಾಲಿಕ ಸ್ನೇಹಉಳಿಯುವಂತೆ ಮಾಡುತ್ತದೆ ಎಂದು ಹೇಳುತ್ತಾರೆ. ವೈಜ್ಞಾನಿಕವಾಗಿ ಈ ಗಿಡದ ಹೂವಿನ ದಳಗಳು ಪುರುಷರ ಪುರುಷತ್ವವನ್ನುವೃದ್ಧಿಸುತ್ತದೆ. ಮತ್ತು ಮಣ್ಣಿನ ಫಲವತ್ತೆಯನ್ನು ಹೆಚ್ಚಿಸುತ್ತದೆ.

ಮಾರ್ಗ್ನೇಟ (marginata)
ಮಾರ್ಗ್ನೇಟ ಗಿಡಮನೆಯಲ್ಲಿದ್ದರೆ ಸಾಕು ಪ್ರಾಣಿಗಳು ಸಾವನ್ನಪ್ಪುತ್ತವೆ
.
ಈ ಗಿಡದ ಗಾಳಿ ಸೋಕಿದರೆ ಪ್ರಾಣಿಗಳ ಆರೋಗ್ಯ ಹಾಳಾಗುತ್ತದೆ ಎಂದುಹೇಳುತ್ತಾರೆ
.
ಆದರೆ ವೈಜ್ಞಾನಿಕವಾಗಿ ಈ ಗಿಡಗಳುಗಾಳಿಯಲ್ಲಿರುವ ಕಲ್ಮಶಗಳನ್ನು ಹೊರ ಹಾಕಿ
,
ನಮ್ಮ ಆರೊಗ್ಯ ವೃದ್ಧಿಸುತ್ತದೆ
.

ರೋಸ್ಮೆರಿ (Rosemary)

ಆಸ್ತಿ ಹಣವನ್ನು ಕಾಪಾಡುತ್ತದೆ. ಅಲ್ಲದೆ, ಭೂತಚೇಷ್ಟೆಗಳನ್ನು ದೂರ ಮಾಡುತ್ತದೆ ಎಂದು ಹೇಳುತ್ತಾರೆ. ವೈಜ್ಞಾನಿಕವಾಗಿ ಈ ಗಿಡ ಮಿದುಳಿನ ಶಕ್ತಿವೃದ್ಧಿಸುತ್ತದೆ. ರಾತ್ರಿ ವಿಶ್ರಾಮಕ್ಕೆ ಹಾಗೂ ಧೀರ್ಘಕಾಲಿಕಯುವಕರಂತೆ ಕಾಣುವಂತೆ ಮಾಡಲು ಸಹಾಯವಾಗಿದೆ.

ಪೀಸ್ ಲಿಲ್ಲಿ (peace lilly)
ನೋಡಲುಮನಮೋಹಕವಾಗಿರುವ ಈ ಗಿಡ ಕಲ್ಮಶವಾದ ಗಾಳಿಯನ್ನು ಶುದ್ಧೀಕರಿಸುತ್ತದೆ
.

ಸೇಜ್ (Sage)

ಈ ಗಿಡವನ್ನುಬೆಳೆಸುವುದರಿಂದ ಅಮರತ್ವ, ಧೀರ್ಘಾಯುಷ್ಯ. ಬುದ್ಧಿವಂತಿಕೆ ಮತ್ತು ಇಚ್ಛಿಸಿದನ್ನುನೀಡುತ್ತದೆ ಎಂದು ಹೇಳುತ್ತಾರೆ. ಆದರೆ ವೈಜ್ಞಾನಿಕವಾಗಿ  ಈ ಗಿಡದಿಂದ ಬುದ್ಧಿಶಕ್ತಿವೃದ್ಧಿಸುವುದರೊಂದಿಗೆ ಧನಾತ್ಮಕ ಚಿಂತನೆ ಹಾಗೂ ಉತ್ತಮ ಆಲೋಚನೆಗಳಿಗೆ ದಾರಿ ಮಾಡುಕೊಡುತ್ತದೆ.

- ಮಂಜುಳ.ವಿ.ಎನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com