ಶಬರಿಮಲೆಯಲ್ಲಿ ಕೋಮು ಸೌಹಾರ್ದತೆ ಸಾರುವ ವಾವರ್ ಮಸೀದಿ

ಪವಿತ್ರ 18 ಮೆಟ್ಟಿಲುಗಳನ್ನೇರಿ ಅಯ್ಯಪ್ಪನ ದರ್ಶನ ಪಡೆವ ಮುನ್ನ ವಾವರ್ ಸ್ವಾಮಿಗೆ ಮೊದಲ ನಮನ ಇಲ್ಲಿ ಸಲ್ಲುತ್ತದೆ. ಹೀಗೆ ಹಿಂದೂ...
ಎರುಮೇಲಿಯಲ್ಲಿರುವ ವಾವರ್ ಮಸೀದಿ
ಎರುಮೇಲಿಯಲ್ಲಿರುವ ವಾವರ್ ಮಸೀದಿ
ಅಯ್ಯಪ್ಪ ವೃತಾಧಾರಿಗಳು ಶಬರಿಮಲೆ ಯಾತ್ರೆ ಕೈಗೊಂಡು ಅಯ್ಯಪ್ಪನ ದರ್ಶನ ಮಾಡುವ ಮುನ್ನ ವಾವರ್ ಮಸೀದಿಗೆ ಭೇಟಿ ನೀಡಿ ಅಲ್ಲಿ ದರ್ಶನ ಪಡೆಯುತ್ತಾರೆ. ಪವಿತ್ರ 18 ಮೆಟ್ಟಿಲುಗಳನ್ನೇರಿ ಅಯ್ಯಪ್ಪನ ದರ್ಶನ ಪಡೆವ ಮುನ್ನ ವಾವರ್ ಸ್ವಾಮಿಗೆ ಮೊದಲ ನಮನ ಇಲ್ಲಿ ಸಲ್ಲುತ್ತದೆ. ಹೀಗೆ ಹಿಂದೂ ಮತ್ತು ಮುಸ್ಲಿಂ ಕೋಮುಗಳ ನಡುವೆ ಸೌಹಾರ್ದತೆ ಸಾರುವ ಪುಣ್ಯ ಕ್ಷೇತ್ರ ಶಬರಿಮಲೆ.
ಈ ವಾವರ್ ಯಾರು? ಹುಲಿ ಹಾಲು ತರಲೆಂದು ಕಾಡಿಗೆ ಹೋದ ಅಯ್ಯಪ್ಪನೊಂದಿಗೆ ಜಗಳವಾಡಿದ ವಾವರ್ ತದನಂತರ ಅಯ್ಯಪ್ಪನ ಗೆಳೆಯನಾದ ಎಂದು ಪುರಾಣ ಕತೆಗಳು ಹೇಳುತ್ತವೆ.
ಮುಕ್ಕಾಂಪುರದ ಇಸ್ಮಾಯಿಲ್ ಗೋತ್ರದಲ್ಲಿ ಪಾತುಮ್ಮ ಎಂಬಾಕೆಯ ಪುತ್ರ ವಾವರ್ ಎಂದು  ವಾವರ್ ಮಹಾತ್ಮ್ಯಂ ಎಂಬ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ.  
ಶಾಸ್ತಾರಾ ಎಂದೇ ಕರೆಯಲ್ಪಡುವ ಅಯ್ಯಪ್ಪನಿಗೆ ಪಂದಳ ರಾಜನೇ ದೇಗುಲ ನಿರ್ಮಿಸಿಕೊಟ್ಟಿದ್ದನು ಎಂಬ ಐತಿಹ್ಯವೂ ಇದೆ.
ಅಯ್ಯಪ್ಪನ ದರ್ಶನಕ್ಕಾಗಿ ಕಾಡಿನಲ್ಲಿ ನಡೆಯುತ್ತಾ ಬರುವ ಭಕ್ತಾದಿಗಳನ್ನು ದುಷ್ಟ ಮೃಗಗಳ 
ಕಾಟದಿಂದ ಪಾರು ಮಾಡುವಂತೆ, ಭಕ್ತಾದಿಗಳಿಗೆ ರಕ್ಷಣೆಯನ್ನೊದಗಿಸುವಂತೆ ಅಯ್ಯಪ್ಪ ವಾವರನಿಗೆ ಜವಾಬ್ದಾರಿ ವಹಿಸಿದ್ದನು ಎನ್ನವಾಗುತ್ತಿದೆ.
ಎರುಮೇಲಿಯಲ್ಲಿರುವವಾವರ್ ಪಳ್ಳಿ ಅಥವಾ ವಾವರ್ ಮಸೀದಿಯಲ್ಲಿ ಕರಿಮೆಣಸು ನೈವೇದ್ಯ. ಕಾಣಿಕೆ, ಭತ್ತ, ಶ್ರೀಗಂಧ, ಸಾಂಬ್ರಾಣಿ, ತುಪ್ಪ, ಪನ್ನೀರು, ಎಳನೀರು ಮೊದಲಾದವುಗಳನ್ನು ವಾವರ್ ಗೆ ಭಕ್ತಿಯಿಂದ ಸಲ್ಲಿಸಲಾಗುತ್ತದೆ.
ಅಯ್ಯಪ್ಪ ಸ್ವಾಮಿಯೇ ಎಂದು ಅಯ್ಯಪ್ಪ ಭಕ್ತರು ಕೂಗುವಾಗ ಅಲ್ಲಿ ಸ್ವಾಮಿಯೇ ಅನ್ನುವದು ವಾವರ್‌ನನ್ನು ಎಂದೇ ಹೇಳಲಾಗುತ್ತದೆ. ಅಯ್ಯಪ್ಪನನ್ನೂ ವಾವರ್ ನನ್ನೂ ಪೂಜಿಸುವ ಶಬರಿಮಲೆ ಎರಡು ಧರ್ಮಗಳ ಅನ್ಯೋನ್ಯತೆಯನ್ನು ಸಾರಿ ಹೇಳುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com