ಶ್ರೀರಾಮನ ಪಾದುಕೆಗಳ ಹೆಸರಿನಲ್ಲಿ ಆಡಳಿತ ನಡೆಸುವ ಮಲೇಷ್ಯಾ ಸುಲ್ತಾನರು!

ರಾಮಾಯಣದಲ್ಲಿ ಭಾರತ ಶ್ರೀರಾಮನ ಪಾದುಕೆಗಳನ್ನಿಟ್ಟು ಆಡಳಿತ ನಡೆಸಿದಂತೆ ಮಲೇಷ್ಯಾದ ಸುಲ್ತಾನರು ಸಹ ಶ್ರೀ ಪಾದುಕಾ
ಶ್ರೀರಾಮನ ಪಾದುಕೆಗಳ ಹೆಸರಿನಲ್ಲಿ ಆಡಳಿತ ನಡೆಸುವ ಮಲೇಷ್ಯಾ ಸುಲ್ತಾನರು!
ಶ್ರೀರಾಮನ ಪಾದುಕೆಗಳ ಹೆಸರಿನಲ್ಲಿ ಆಡಳಿತ ನಡೆಸುವ ಮಲೇಷ್ಯಾ ಸುಲ್ತಾನರು!

ರಾಮಾಯಣ ಭಾರತದ ಪವಿತ್ರ ಗ್ರಂಥಗಳಲ್ಲಿ ಒಂದು, ರಾಮ ಹಾಗೂ ರಾಮಾಯಣದ ತತ್ವಗಳು ಭಾರತಕ್ಕಷ್ಟೇ ಅಲ್ಲದೇ ವಿದೇಶಗಳಲ್ಲೂ ಪೂಜನೀಯ ಸ್ಥಾನ ಪಡೆದಿದೆ. ಶ್ರೀಲಂಕಾ, ಇಂಡೋನೇಷ್ಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಭಾರತದಂತೆಯೇ ರಾಮಾಯನವನ್ನು ಪೂಜನೀಯ ಸ್ಥಾನದಲ್ಲಿಟ್ಟು ಗೌರವಿಸಲಾಗುತ್ತಿದೆ.

ಮಲೇಷ್ಯಾದಲ್ಲೂ ರಾಮ ಹಾಗೂ ರಾಮಾಯಣದ ಪ್ರಭಾವವಿದ್ದು, ಅಲ್ಲಿನ ಸುಲ್ತಾನರು( ಪ್ರಧಾನಮಂತ್ರಿ) ಗಳು ಪ್ರಮಾಣವಚನ ಸ್ವೀಕರಿಸುವುದು ಹಾಗೂ ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದ ಆದೇಶಗಳನ್ನು ಹೊರಡಿಸುವುದು ಶ್ರೀ ಪಾದುಕಾ ಹೆಸರಿನಲ್ಲಿ ಅರ್ಥಾತ್ ಶ್ರೀರಾಮನ ಪಾದುಕೆಗಳ ಹೆಸರಿನಲ್ಲಿ ಎಂಬ ನಂಬಿಕೆ ಇದೆ.

ರಾಮಾಯಣದಲ್ಲಿ ಭಾರತ ಶ್ರೀರಾಮನ ಪಾದುಕೆಗಳನ್ನಿಟ್ಟು ಆಡಳಿತ ನಡೆಸಿದಂತೆ ಮಲೇಷ್ಯಾದ ಸುಲ್ತಾನರು ಸಹ  ಶ್ರೀ ಪಾದುಕಾ ಎಂದೇ ಪ್ರಸಿದ್ಧವಾಗಿರುವ ಉರುಸಾನ್ ಶ್ರೀ ಪಾದುಕಾ ಬೆಗಿಂದ ಹೆಸರಿನಲ್ಲಿ ಆಡಳಿತ ನಡೆಸುತ್ತಿದ್ದಾರೆ.

ಮಲೇಷ್ಯಾದಲ್ಲಿ ಒಟ್ಟು 9 ಸುಲ್ತಾನರಿದ್ದು, ಪ್ರತಿ 5 ವರ್ಷಕ್ಕೊಮ್ಮೆ  ಸರದಿಯ ಪ್ರಕಾರವಾಗಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಾರೆ. ಹೀಗೆ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಸುಲ್ತಾನರು ಶ್ರೀ ಪಾದುಕಾ ಹೆಸರಿನಲ್ಲೇ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಅಷ್ಟೇ ಅಲ್ಲದೇ ಅವರ ಮಂತ್ರಿ ಮಂಡಲದ ಸಚಿವರೂ ಸಹ ಶ್ರೀ ಪಾದುಕಾ ಹೆಸರಿನಲ್ಲೇ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಹಾಗೆಯೇ ಸರ್ಕಾರದ ಎಲ್ಲಾ ಆಡಳಿತಾತ್ಮಕ ಆದೇಶಗಳು ಶ್ರೀ ಪಾದುಕಾ ಹೆಸರಿನಲ್ಲೇ ಜಾರಿಯಾಗುವುದು ಮತ್ತೊಂದು ವಿಶೇಷ.

ಮಲೇಷ್ಯಾದ ಮತ್ತೊಂದು ವಿಶೇಷವೆಂದರೆ ಅಲ್ಲಿನ ಪೆನಾಂಗ್ ನಲ್ಲಿರುವ ಮಸೀದಿಯನ್ನೂ ಸಹ ಶ್ರೀ ಪಾದುಕಾ ಹೆಸರಿನಲ್ಲೇ ನಿರ್ಮಿಸಲಾಗಿದೆಯಂತೆ. ಮಸೀದಿಯಲ್ಲಿರುವ ಹೆಸರಿನ ಫಲಕದಲ್ಲಿ, " ಈ ಮಸೀದಿಯನ್ನು 1974 ರಲ್ಲಿ ಶ್ರೀ ಪಾದುಕಾ ಆದೇಶದಂತೆ ನಿರ್ಮಿಸಲಾಗಿದೆ ಎಂದು ಬರೆಯಲಾಗಿದೆ.
   
ಮಲೇಷ್ಯಾದ ಆವೃತ್ತಿಯ ರಾಮಾಯಣ "ಹಿಕಾಯತ್ ಶ್ರೀ ರಾಮ" 13 ನೇ ಶತಮಾನದಲ್ಲಿ ರಚನೆಯಾಗಿದ್ದು, ಮಲೇಷ್ಯಾದ ಭಾಷೆಯಲ್ಲಿ ರಚಿತವಾದ ಆರಂಭಿಕ ಸಾಹಿತ್ಯವಾಗಿದ್ದು, ಇದನ್ನು ಅಲ್ಲಿನ ವಿಶ್ವವಿದ್ಯಾನಿಲಯಗಳಲ್ಲಿಯೂ ಬೋಧಿಸಲಾಗುತ್ತಿದೆ. ಮಲೇಷ್ಯಾದ ಉತ್ತರ ಹಾಗೂ ಈಶಾನ್ಯ ಪ್ರದೇಶಗಳಲ್ಲಿ ನಾಟಕ, ನೃತ್ಯ ಪ್ರಕಾರದ ಮೂಲಕ ರಾಮಾಯಣವನ್ನು ತಿಳಿಸಲಾಲಾಗುತ್ತಿರುವುದು ಮತ್ತೊಂದು ವಿಶೇಷ.  ಮಲೇಷ್ಯಾದ ಸುಲ್ತಾನರಿಗೆ ರಾಜಾ ಪರಮೇಶ್ವರ ಹಾಗೂ ರಾಣಿಗೆ ರಾಜಾ ಪರಮೇಶ್ವರಿ ಎಂಬ ಬಿರುದುಗಳಿವೆ, ಮಲೇಷ್ಯಾದ ಸುಲ್ತಾನರ ಸಂಸ್ಕೃತಿ ಹಾಗೂ ರಾಮ, ರಾಮಾಯಣಕ್ಕೆ ನೀಡುವ ಭಕ್ತಿ ಭಾರತದ ಸಂಸ್ಕೃತಿಯನ್ನೇ ನೆನಪಿಸುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com