ವಾಹನಗಳ ಮೇಲೆ ಕಾಗೆ ಕೂತ್ರೆ ಅದು ಅಪಶಕುನಾನಾ?

ಭಾರತದಲ್ಲಿ ಶಕುನಗಳಿಗೆ ಅತಿ ಹೆಚ್ಚು ಪ್ರಾಶಸ್ತ್ಯವಿದೆ
ವಾಹನಗಳ ಮೇಲೆ ಕಾಗೆ ಕೂತ್ರೆ ಅದು ಅಪಶಕುನಾನಾ?
Updated on

ಭಾರತದಲ್ಲಿ ಶಕುನಗಳಿಗೆ ಅತಿ ಹೆಚ್ಚು ಪ್ರಾಶಸ್ತ್ಯವಿದೆ. ಪ್ರಕೃತಿಯ ಚಲನವಲನಗಳನ್ನು ಮನುಷ್ಯನ ದಿನನಿತ್ಯದ ಬದುಕಿಗೆ ಅನ್ವಯಿಸಿಕೊಂಡು ಆ ಮೂಲಕ ಒಳಿತು ಕೆಡುಕುಗಳನ್ನು ಅಂದಾಜಿಸುವುದಕ್ಕಾಗಿ ಶಕುನ ಶಾಸ್ತ್ರ ಎಂಬುದನ್ನು ಆಧರಿಸಿ ಪುರಾತನ ಕಾಲದಿಂದಲೂ ಶಕುನಗಳ ಬಗ್ಗೆ ಅನೇಕರು ನಂಬಿಕೆ ಇರಿಸಿಕೊಂಡಿದ್ದಾರೆ.

ಶಕುನ ಶಾಸ್ತ್ರಗಳಂತೆಯೇ ಸ್ವಪ್ನ(ಕನಸು)ಗಳಿಗೆ ಸಂಬಂಧಿಸಿದ ಒಳಿತು-ಕೆಡುಕುಗಳನ್ನು ಅಂದಾಜಿಸುವುದಕ್ಕೂ ಸ್ವಪ್ನ ಶಾಸ್ತ್ರ ಎಂಬ ವಿಷಯವನ್ನು ಪುರಾತನ ಕಾಲದ ಭಾರತದಲ್ಲಿ ಉಲ್ಲೇಖಿಸಲಾಗಿದೆ.  ನಂಬಿಕೆಗಳ ಪ್ರಕಾರ ವಾಹನಗಳ ಮೇಲೆ ಅಥವಾ ಮನೆಯೊಳಗೆ, ನೆತ್ತಿಗೆ ಕುಕ್ಕಿದರೆ ಅದು ಅಪಶಕುನ ಎಂದು ಭಾವಿಸಲಾಗಿದೆ.  ಕಾಗೆಗಳನ್ನು ಪಿತೃದೇವತೆಯೆಂದು ಭಾವಿಸಲಾಗಿದೆಯಾದರೂ ಕಾಗೆ ಸ್ಪರ್ಷವಾದರೆ ಅದನ್ನು ಅಪಶಕುನ ಎಂದು ಭಾವಿಸಲಾಗಿದೆ. ಇನ್ನು ಕೆಲವರು ಪ್ರಯಾಣ ಮಾಡುವ ಸಂದರ್ಭದಲ್ಲಿ ಕಾಗೆಯ ಶಕುನ ನೋಡುತ್ತಾರೆ. ಕಾಗೆ ಎಡಭಾಗದಲ್ಲಿ ಕೂಗುತ್ತಾ ಹಿಂದಿನಿಂದ ಬರುತ್ತಿದ್ದರೆ ಇದರಿಂದ ಲಾಭ ಇದೆ ಎಂದು ತಿಳಿಯುತ್ತಾರೆ.


ಕಾಗೆ ಮನೆಯ ಎದುರು ಬಂದು ಕೂಗುವ ಧ್ವನಿಯಿಂದ ನೆಂಟರು ಬರುವ ಸೂಚನೆ ಎಂದು ನಂಬಿಕೆ. ಕಾಗೆಗಳ ಬೇರೆ ಬೇರೆ ಚೇಷ್ಟೆಯಿಂದ ಬೇರೆ ಬೇರೆ ಘಟನೆ ನಡೆಯುವ ನಂಬಿಕೆಯನ್ನು ಇಂದಿಗೂ ಇಟ್ಟುಕೊಂಡಿದ್ದಾರೆ. ಕೆಲವರು ಪ್ರಯಾಣ ಮಾಡುವ ಸಂದರ್ಭದಲ್ಲಿ ಕಾಗೆಯ ಶಕುನ ನೋಡುತ್ತಾರೆ. ಕಾಗೆ ಎಡಭಾಗದಲ್ಲಿ ಕೂಗುತ್ತಾ ಹಿಂದಿನಿಂದ ಬರುತ್ತಿದ್ದರೆ ಇದರಿಂದ ಲಾಭ ಇದೆ ಎಂದು ತಿಳಿಯುತ್ತಾರೆ.

ಎಡ ಭಾಗದಲ್ಲಿ ಕೂಗಿ ಎದುರಾಗಿ ಬರುತ್ತಿದ್ದರೆ ಏನಾದರೂ ತೊಂದರೆ ಇದೆ ಎಂದು ತಿಳಿಯುತ್ತಾರೆ.  ಕೂಗಿಕೊಂಡು ಎದುರಿಗೆ ಬಂದರೆ ಕೈಗೊಂಡ ಕೆಲಸ ಕಾರ್ಯಗತವಾಗುವುದಿಲ್ಲ. ಕಾಗೆ ಮನೆಯ ಒಳಗೆ ಬರಬಾರದು.  ಕಾಗೆಗಳು ಕೊಕ್ಕಿನಿಂದ ಅಥವಾ ರೆಕ್ಕೆಯಿಂದ ಮನುಷ್ಯನ ಮೇಲೆ ದಾಳಿ ಮಾಡಿದರೆ ಶತ್ರುಗಳು ಜಾಸ್ತಿಯಾಗುತ್ತಾರೆ ಎಂಬ ನಂಬಿಕೆ ಇದೆ. ಹಿಂದಿನ ಕಾಲದಲ್ಲಿ ರಾಜರ ರಥಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತಿತ್ತು. ಆದ್ದರಿಂದ ರಥದ ಮೇಲೆ ಕಾಗೆ ಕೂತರೆ ರಾಜರಿಗೆ ರಾಜ್ಯ ನಷ್ಟ ಅಥವಾ ಬೇರೆ ರೀತಿಯ ಸಮಸ್ಯೆ ಉಂಟಾಗಲಿದೆ ಎಂದೂ ಹೇಳಲಾಗಿದೆ. ಆದರೆ ಈಗಿನ ಕಾಲದಲ್ಲಿ ರಾಜರು ಹಾಗೂ ರಥ ಎರಡಕ್ಕೂ ಹೆಚ್ಚಿನ ಮಹತ್ವವಿಲ್ಲದ ಕಾರಣ ವಾಹನಗಳ ಮೇಲೆ ಕಾಗೆ ಕೂತರೂ ಅದನ್ನು ಅಪಶಕುನವಾಗುವುದಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com