ಚಂದ್ರ ಗ್ರಹಣ: ಗ್ರಹಣ ಸಂಭವಿಸುವ ನಕ್ಷತ್ರ, ರಾಶಿಯವರು ಏನು ಮಾಡಬೇಕು ತಿಳಿಯೋಣ

ವರ್ಷದ ಮೊದಲ ಚಂದ್ರ ಗ್ರಹಣ ಆ.07 ಕ್ಕೆ ನಡೆಯಲಿದ್ದು, ಹೇವಿಳಂಬಿ ಸಂವತ್ಸರದ ಶ್ರಾವಣ ಮಾಸದ ಶುಕ್ಲ ಪಕ್ಷ ಹುಣ್ಣಿಮೆಯ ದಿನದಂದು ಕೇತ್ರುಗ್ರಸ್ತ ಚಂದ್ರ ಗ್ರಹಣ ಇದಾಗಿದೆ.

ಸೋಮವಾರ ಶ್ರವಣ ನಕ್ಷತ್ರ, ಮಕರ ರಾಶಿಯಲ್ಲಿ ಚಂದ್ರ ಗ್ರಹಣವಿದ್ದು, ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರಲಿದೆ. 
ಯಾವುದೇ ಗ್ರಹಣವಾದರೂ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರಲಿದ್ದು, ಯಾವ ನಕ್ಷತ್ರ, ರಾಶಿಗಳಲ್ಲಿ ಗ್ರಹಣ ಸಂಭವಿಸುವುದೋ ಆ ರಾಶಿಯ, ನಕ್ಷತ್ರದವರಿಗೆ ಉಳಿದ ರಾಶಿಗಳಿಗಿಂತ ತುಸು ಹೆಚ್ಚಿನ ಪರಿಣಾಮ ಉಂಟಾಗಲಿದೆ. ಅಂತೆಯೇ ಈ ಬಾರಿ ಶ್ರವಣ ನಕ್ಷತ್ರದಲ್ಲಿ ಚಂದ್ರ ಗ್ರಹಣ ನಡೆಯಲಿದ್ದು, ಶ್ರವಣ ನಕ್ಷತ್ರದವರ ಮೇಲೆ ಉಳಿದ ರಾಶಿಗಳಿಗಿಂತ ಹೆಚ್ಚಿನ ಪರಿಣಾಮ ಉಂಟಾಗಲಿದೆ. ಇದಕ್ಕೆ ಅನೇಕ ಸರಳ ಪರಿಹಾರಗಳನ್ನೂ ಸೂಚಿಸಲಾಗಿದ್ದು, ಸರಳ ಶ್ಲೋಕಗಳನ್ನು ಹೇಳಿಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ.  
ಗ್ರಹಣ ಕಾಲದಲ್ಲಿ ಪಾಲಿಸಬೇಕಾದ ನಿಯಮಗಳು 
  • ರಾತ್ರಿ ಸುಮಾರು 10:52 ಕ್ಕೆ ಗ್ರಹಣ ಸ್ಪರ್ಶವಾಗಲಿದ್ದು, ಆ.7 ರ ಮಧ್ಯ ರಾತ್ರಿ 1:49 ಅವರೆಗೆ ಇರಲಿದೆ. 
  • ಗ್ರಹಣ ಸ್ಪರ್ಶಕ್ಕೂ ಮುನ್ನ ಆಹಾರ ಪದಾರ್ಥಗಳಲ್ಲಿ ದರ್ಭೆ(ಒಣ ಹುಲ್ಲಿನ ಕಡ್ಡಿ) ತುಳಸಿ ಎಲೆಗಳನ್ನು ಹಾಕುವುದು ಸೂಕ್ತ 
  • ಸಂಜೆ 7 ರ ನಂತರ ಆಹಾರ ಸ್ವೀಕರಿಸದೇ ಇರುವುದು ಒಳ್ಳೆಯದು 
  • ಗ್ರಹಣ ಸ್ಪರ್ಶವಾದ ವೇಳೆ ಹಾಗೂ ಗ್ರಹಣದ ನಂತರ ಎರಡೂ ಬಾರಿ ಸ್ನಾನ ಮಾಡಿದರೆ ಒಳಿತು 
  • ಗ್ರಹಣ ಸ್ಪರ್ಶವಾದ ನಂತರ ಸ್ನಾನ ಮಾಡಿ ಈ ಕೆಳಗಿನ ಶ್ಲೋಕನ್ನು ಪಠಿಸುವುದರಿಂದ ಗ್ರಹಣದ ಪರಿಣಾಮ ಸ್ವಲ್ಪ ಕಡಿಮೆಯಾಗುತ್ತದೆ. 
ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ|
ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋದತು||೧||
ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ|
ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋದತು||೧||
ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ
ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋದತು||೧||
ಈ ಬಾರಿ ಶ್ರವಣ ನಕ್ಷತ್ರದಲ್ಲಿ ಚಂದ್ರ ಗ್ರಹಣ ನಡೆಯಲಿರುವುದರಿಂದ ವಿಶೇಷವಾಗಿ  ಶ್ರವಣ ನಕ್ಷತ್ರದವರು ಹಾಗೂ ಮಕರ ರಾಶಿಯವರು ಈ ಶ್ಲೋಕವನ್ನು ಪಠಿಸಿದರೆ ಒಳಿತಾಗಲಿದೆ ಎಂಬ ನಂಬಿಕೆ ಇದೆ.    

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com