ಎಲ್ಲಾ ಮಂತ್ರ, ಪೂಜೆ, ಪುರಸ್ಕಾರಗಳಿಗೂ ಅತೀ ಎತ್ತರದಲ್ಲಿ ರಾರಾಜಿಸುವುದು ಗಾಯತ್ರಿ ಮಹಾಮಂತ್ರ. ಗಾಯತ್ರಿ ಮಹಾಮಂತ್ರ ಎನಿಸಿಕೊಂಡಿದೆ. ಅಥರ್ವವೇದದಲ್ಲಿ ಗಾಯತ್ರಿ ಮಂತ್ರವನ್ನು ಶಕ್ತಿ, ಧನ ಸಂಪತ್ತು ಮತ್ತು ಬ್ರಹ್ಮತೇಜಸ್ಸನ್ನು ನೀಡುವ ಮಹಾಮಾತೆ ಎಂದು ಉಲ್ಲೇಖಿಸಿದ್ದಾರೆ. ಇನ್ನು ಮಹಾಭಾರತವನ್ನು ರಚಿಸಿದ ವ್ಯಾಸ ಮಹರ್ಷಿಗಳೂ ಸಹ ಗಾಯತ್ರಿ ಮಂತ್ರವನ್ನು ಕೊಂಡಾಡಿದ್ದು, ಗಾಯತ್ರಿವನ್ನು ಪಕ್ವಾನ್ನ( ಮೃಷ್ಟಾನ್ನ)ಕ್ಕೆ ಹೋಲಿಕೆ ಮಾಡಿದ್ದಾರೆ. ಗಾಯತ್ರಿಯು ಲೋಕಕ್ಕೆ ತಾಯಿ. ಪರಬ್ರಹ್ಮನ ಸ್ವರೂಪವುಳ್ಳವಳು, ಶ್ರೇಷ್ಠ ಸಂಪತ್ತನ್ನು ಕೊಡುವವಳು, ಜಪಿಸಲು ಯೋಗ್ಯಳು, ಬ್ರಹ್ಮತೇಜಸ್ಸನ್ನು ಹೆಚ್ಚಿಸುವವಳು ಆಗಿದ್ದಾಳೆ. ಗಾಯತ್ರಿ ಮಂತ್ರವನ್ನು (ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್॥) ಜಪಿಸುವುದರಿಂದ ಏಕಾಗ್ರತೆ ಹೆಚ್ಚಲಿದ್ದು, ಮನಸ್ಸನ್ನು ನಿಯಂತ್ರಿಸಿ ಇಷ್ಟಾರ್ಥಗಳನ್ನು ಸಿದ್ಧಿಸುವ ಮನೋಬಲ ಸಿದ್ಧಿಸುತ್ತದೆ. ಈ ಮೂಲಕ ಸಂಪತ್ತು ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂಬ ನಂಬಿಕೆ ಇದೆ.