ಶ್ರಾವಣ ಮಾಸವನ್ನು ಶಿವನಿಗೆ ಸಮರ್ಪಿಸಿ, ಆರಾಧಿಸುವುದರ ಹಿನ್ನೆಲೆ, ಮಹತ್ವ!

ಶ್ರಾವಣ ಮಾಸದಲ್ಲಿ ಹೆಚ್ಚು ಶಿವನ ಆರಾಧನೆ ನಡೆಯುವುದಕ್ಕೆ ಹಿನ್ನೆಲೆ ಇದ್ದು, ಸುರ-ಅಸುರರು ಸೇರಿ ನಡೆಸಿದ ಸಮುದ್ರ ಮಂಥನದ ಕಥೆಯೊಂದಿಗೆ ಬೆಸೆದುಕೊಂಡಿದೆ.
ಶಿವ
ಶಿವ
Updated on
ಹಿಂದೂ ಪಂಚಾಂಗದಲ್ಲಿ ಶ್ರಾವಣ ಮಾಸ ಶ್ರೇಷ್ಠ ಮಾಸಗಳಲ್ಲಿ ಒಂದಾಗಿದೆ. ಹಬ್ಬಗಳ ಸಾಲು ಪ್ರಾರಂಭವಾಗುವ ಮಾಸವೂ ಇದಾಗಿದ್ದು, ಸನಾತನ ಪಂಚಾಂಗದ 5 ನೇ ತಿಂಗಳನ್ನು ಶಿವನಿಗೆ ಅರ್ಪಿಸಲಾಗಿದೆ. ಅಂದರೆ ಈ ಮಾಸದಲ್ಲಿ ಪರಮೇಶ್ವರನನ್ನು ಹೆಚ್ಚು ಆರಾಧಿಸಲಾಗುತ್ತದೆ. ವಿಶೇಷವಾಗಿ ಸೋಮವಾರಗಳಂದು ಈಶ್ವರನಿಗೆ ವಿಶೇಷ ಪೂಜೆ ನಡೆಯಲಿದ್ದು, ಶ್ರಾವಣ ಸೋಮವಾರದಂದು ನಡೆಯುವ ಶಿವ ಪೂಜೆಗೆ ವಿಶೇಷ ಮಹತ್ವವಿದೆ. 
ದಕ್ಷಿಣ ಭಾರತದಲ್ಲಿ ಶ್ರಾವಣ ಸೋಮವಾರ ಪೂಜೆಯಾದರೆ, ಇದು ಉತ್ತರ ಭಾರತದಲ್ಲಿ ಸಾವನ್ ಸೋಮವಾರ್ ವ್ರತ್ ಎಂದೇ ಪ್ರಸಿದ್ಧಿ ಪಡೆದಿದೆ. ಉತ್ತರ ಭಾರತದಲ್ಲಿ ಶ್ರಾವಣ ಸೋಮವಾರಂದು ಭಕ್ತಾದಿಗಳು ಉಪವಾಸವಿದ್ದು, ಸಾವನ್ ಶಿವರಾತ್ರಿ ಸಹ ನಡೆಯಲಿದೆ. ಶ್ರವಣಾ ನಕ್ಷತ್ರದಂದು ಈ ಮಾಸ ಪ್ರಾರಂಭವಾಗುವುದರಿಂದ ಇದಕ್ಕೆ ಶ್ರಾವಣ ಮಾಸ ಎಂದು ಹೇಳುತ್ತಾರೆ. ಶ್ರಾವಣ ಮಾಸದಲ್ಲಿ ಕೇವಲ ಹಬ್ಬಗಳಷ್ಟೇ ಅಲ್ಲದೇ, ಶುಭ ಕಾರ್ಯಗಳಿಗೆ ಮುಹೂರ್ತವೂ ಇರಲಿದ್ದು, ಶುಭಾರಂಭಕ್ಕೆ ಪ್ರಶಸ್ತವಾದ ಮಾಸ ಎಂಬ ನಂಬಿಕೆ ಇದೆ. 
ತಿಂಗಳಲ್ಲಿ ಬರುವ 16 ಸೋಮವಾರಗಳೂ ಸಹ ಉಪವಾಸವಿದ್ದು, ಶ್ರಾವಣ ಮಾಸವನ್ನು ಆಚರಿಸುವ ಪದ್ಧತಿ ಹಲವೆಡೆ ಇದ್ದು, ಈ ರೀತಿ ಮಾಡುವುದರಿಂದ ಮನಸ್ಸಿನ ಸಂಕಲ್ಪಗಳು ಈಡೇರುತ್ತದೆ ಎಂದು ಹೇಳಲಾಗುತ್ತೆ. ಶ್ರಾವಣ ಮಾಸದ ಸೋಮವಾರದಂದು ಶಿವನನ್ನು ಪೂಜಿಸುವುದಷ್ಟೇ ಅಲ್ಲದೇ ಮಂಗಳವಾರದಂದು ಪಾರ್ವತಿ ದೇವಿಯನ್ನು ಆರಾಧಿಸುವ ಮಂಗಳ ಗೌರಿ ವ್ರತಾಚರಣೆಯಿರುವುದು ಶ್ರಾವಣ ಮಾಸದ ಮತ್ತೊಂದು ವಿಶೇಷವಾಗಿದೆ. 
ಶ್ರಾವಣ ಮಾಸದಲ್ಲೇಕೆ ಶಿವನ ಆರಾಧನೆ?
ಶ್ರಾವಣ ಮಾಸದಲ್ಲಿ ಹೆಚ್ಚು ಶಿವನ ಆರಾಧನೆ ನಡೆಯುವುದಕ್ಕೆ ಹಿನ್ನೆಲೆ ಇದ್ದು, ಸುರ-ಅಸುರರು ಸೇರಿ ನಡೆಸಿದ ಸಮುದ್ರ ಮಂಥನದ ಕಥೆಯೊಂದಿಗೆ ಬೆಸೆದುಕೊಂಡಿದೆ. ಸಮುದ್ರ ಮಂಥದ ವೇಳೆ ವಿಷ ಹೊರ ಬಂದಾಗ ಅದನ್ನು ಶಿವ ಸೇವಿಸಿ ಲೋಕಕ್ಕೆ ಎದುರಾಗಿದ್ದ ಕಂಟಕವನ್ನು ನಿವಾರಿಸುತ್ತಾನೆ. ಸಮುದ್ರ ಮಂಥದಲ್ಲಿನ ಈ ಘಟನೆ ನಡೆದಿದ್ದು ಶ್ರಾವಣ ಮಾಸದಲ್ಲಿ ಆದ್ದರಿಂದ ಈ ಮಾಸವನ್ನು ಶಿವನಿಗೆ ಸಮರ್ಪಿಸಿ ಆರಾಧಿಸಲಾಗುತ್ತದೆ ಎಂಬ ನಂಬಿಕೆ ಇದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com