ದಕ್ಷಿಣ ಭಾರತದಲ್ಲಿವೆ ಪಂಚಭೂತಗಳನ್ನು ಪ್ರತಿನಿಧಿಸುವ ಶಿವಲಿಂಗಗಳು!

ಈಶ್ವರನ ಸ್ವರೂಪವಾಗಿರುವ ಲಿಂಗವೂ ಪಂಚಭೂತಗಳನ್ನು ಪ್ರತಿನಿಧಿಸುತ್ತದೆ. ಪಂಚಭೂತಗಳನ್ನು ಪ್ರತಿನಿಧಿಸುವ ಶಿವ ಲಿಂಗಗಳು ದಕ್ಷಿಣ ಭಾರತದಲ್ಲಿದೆ ಎಂಬುದು ವಿಶೇಷ.
ದಕ್ಷಿಣ ಭಾರತದಲ್ಲಿವೆ ಪಂಚಭೂತಗಳನ್ನು ಪ್ರತಿನಿಧಿಸುವ ಶಿವಲಿಂಗಗಳು!
ದಕ್ಷಿಣ ಭಾರತದಲ್ಲಿವೆ ಪಂಚಭೂತಗಳನ್ನು ಪ್ರತಿನಿಧಿಸುವ ಶಿವಲಿಂಗಗಳು!
ಈಶಾವಾಸ್ಯಮ್ ಇದಂ ಸರ್ವಂ ಎಂದಿವೆ ಉಪನಿಷತ್ ಗಳು. ಅಂದರೆ ಜಗತ್ತಿನಲ್ಲಿರಿಯುವ ಸಕಲ ಚರಾಚರಗಳೂ ಈಶ್ವರನ ಆವಾಸಸ್ಥಾನ ಎಂಬುದು ಇದರ ತಾತ್ಪರ್ಯ. ಪಂಚಭೂತಗಳು ಸಹ ಇದಕ್ಕೆ ಹೊರತಾದುದ್ದಲ್ಲ. ಅಂತೆಯೇ ಈಶ್ವರನ ಸ್ವರೂಪವಾಗಿರುವ ಲಿಂಗವೂ ಪಂಚಭೂತಗಳನ್ನು ಪ್ರತಿನಿಧಿಸುತ್ತದೆ. 
ಶಿವಲಿಂಗವನ್ನು ಪರಮಶಕ್ತಿಯುಳ್ಳ ಮೂರ್ತ ಸ್ವರೂಪ ಎಂದೇ ಆರಾಧಿಸಲಾಗುತ್ತದೆ. ಇಂತಹ ಶಿವ ಲಿಂಗ ಅಥವಾ ಶಿವನನ್ನ ಜಗತ್ತಿನ ಲಯಕರ್ತ ಎಂದೂ ಹೇಳಲಾಗುತ್ತದೆ. ಜಗತ್ತಿನ ಲಯಕರ್ತ ಎಂದರೆ ಅಕ್ಷರಸಹ ನಾಶ ಮಾಡುವುದು ಎಂದಲ್ಲ. ಬದಲಾಗಿ ಮನುಷ್ಯನಲ್ಲಿರುವ ದುರ್ಗುಣಗಳನ್ನು ನಾಶ ಮಾಡುವುದು ಎಂದರ್ಥ ಬರುತ್ತದೆ. ಸನಾತನ ಧರ್ಮವು ಇದನ್ನೇ ಹೇಳಿದ್ದು, ಪ್ರಕೃತಿಗೆ ಅತ್ಯಂತ ನಿಕಟವಾದ ಅಂಶಗಳನ್ನು ಹೊಂದಿದೆ. 
ಪ್ರಕೃತಿಯ ಪಂಚಭೂತ (ಅಗ್ನಿ, ವಾಯು, ಜಲ, ಪೃಥ್ವಿ, ಆಕಾಶ) ಗಳನ್ನು ಶಿವ ಲಿಂಗ ಪ್ರತಿನಿಧಿಸುತ್ತದೆ. ಇದನ್ನೇ ಪ್ರತಿನಿಧಿಸುವ ಲಿಂಗ ಸ್ವರೂಪದಲ್ಲಿರುವ ಶಿವನ ದೇವಾಲಯಗಳು ದಕ್ಷಿಣ ಭಾರತದಲ್ಲಿದೆ. ಯಾವ ದೇವಾಲಯ, ಯಾವ ಪಂಚಭೂತಗಳನ್ನು ಪ್ರತಿನಿಧಿಸುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. 
ಏಕಾಂಬರೇಶ್ವರ ದೇವಾಲಯ, ಕಾಂಚಿಪುರಂ: ಪೃಥ್ವಿಲಿಂಗ, ಪೃಥ್ವಿ ತತ್ವವನ್ನು ಪ್ರತಿನಿಧಿಸುತ್ತದೆ. 
ಜಂಬುಕೇಶ್ವರ ದೇವಾಲಯ, ತಿರುವನೈಕಾವಲ್ ತಿರ್ಚಿ ಹತ್ತಿರ: ಜಂಬು ಲಿಂಗ ಜಲದ ಪ್ರತಿನಿಧಿ 
ಅರುಣಾಚಲೇಶ್ವರ ದೇವಾಲಯ ತಿರುವಣ್ಣಾಮಲೈ: ಅಗ್ನಿ ಲಿಂಗದ ದೇವಾಲಯ: ಅಗ್ನಿಯ ಪ್ರತಿನಿಧಿ 
ಕಾಳಹಸ್ತೇಶ್ವರ ದೇವಾಲಯ, ಕಾಳಹಸ್ತಿ ಆಂಧ್ರಪ್ರದೇಶ; ವಾಯು ಲಿಂಗ, ವಾಯು ಪ್ರತಿನಿಧಿ 
ತಿಲ್ಲೈ ನಟರಾಜ ದೇವಾಲಯ ಚಿದಂಬರಂ, ಆಕಾಶ ಲಿಂಗ; ಆಕಾಶ ತತ್ವವನ್ನು ಪ್ರತಿನಿಧಿಸಲಿದ್ದು, ಈ ಎಲ್ಲಾ ದೇವಾಲಯಗಳು ದಕ್ಷಿಣ ಭಾರತದಲ್ಲಿವೆ ಎಂಬುದು ವಿಶೇಷವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com