ಕರ್ವ ಚೌತಿಯ ವಿಶೇಷತೆ, ಮಹತ್ವ ಏನು ಗೊತ್ತೆ?

ಪತ್ನಿ ತನ್ನ ಪತಿಗಾಗಿ ಆಚರಣೆ ಮಾಡುವ ಅನೇಕ ವ್ರತಗಳು ಹಾಗೂ ಪೂಜೆಗಳ ಪೈಕಿ ಕರ್ವ ಚೌತಿಯೂ ಒಂದಾಗಿದೆ. ದೇಶಾದ್ಯಂತ ಆಚರಣೆ ಮಾಡುವ ಕರ್ವ ಚೌತಿಯ ದಿನದಂದು ಗೃಹಿಣಿಯರು ಪತಿಗಾಗಿ
ಕರ್ವ ಚೌತಿ
ಕರ್ವ ಚೌತಿ
ಪತ್ನಿ ತನ್ನ ಪತಿಗಾಗಿ ಆಚರಣೆ ಮಾಡುವ ಅನೇಕ ವ್ರತಗಳು ಹಾಗೂ ಪೂಜೆಗಳ ಪೈಕಿ ಕರ್ವ ಚೌತಿಯೂ ಒಂದಾಗಿದೆ. ದೇಶಾದ್ಯಂತ ಆಚರಣೆ ಮಾಡುವ ಕರ್ವ ಚೌತಿಯ ದಿನದಂದು ಗೃಹಿಣಿಯರು ಪತಿಗಾಗಿ ಉಪವಾಸವಿದ್ದು ಪ್ರಾರ್ಥಿಸುತ್ತಾರೆ.    
ಕಾರ್ತಿಕ ಮಾಸದಲ್ಲಿ ಬರುವ ಕರ್ವ ಚೌತಿಗೂ ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಆಚರಿಸಲಾಗುವ ಭೀಮನ ಅಮಾವಾಸ್ಯೆಗೂ ಸಾಮ್ಯತೆ ಇದ್ದು, ಕೇವಲ ವಿವಾಹವಾದ ಮಹಿಳೆಯರಷ್ಟೇ ಅಲ್ಲದೇ ಅವಿವಾಹಿತ ಯುವತಿಯರೂ ಸಹ ಕರ್ವ ಚೌತಿಯನ್ನು ಆಚರಿಸುತ್ತಾರೆ. 
ಕರ್ವ ಚೌತಿ ಆಚರಣೆಗೆ ಹಲವು ಪೌರಾಣಿಕ ಹಿನ್ನೆಲೆ ಇದ್ದು, ಅವಿವಾಹಿತ ಯುವತಿಯರು ಕರ್ವ ಚೌತಿಯನ್ನು ಆಚರಿಸುವುದರಿಂದ ತಮ್ಮ ಇಚ್ಛೆಗೆ ತಕ್ಕಂತಹ ಪತಿ ಸಿಗುತ್ತಾರೆ ಎಂಬ ನಂಬಿಕೆ ಇದೆ. ಹಿಂದಿನ ಕಾಲದಲ್ಲಿ ಸಾಮಾನ್ಯವಾಗಿ ಯುದ್ಧಗಳು ನಡೆಯುತ್ತಿದ್ದವು. ಈ ವೇಳೆ ಯುದ್ಧಕ್ಕೆ ಹೊರಡುವ ಪುರುಷರ ಆರೋಗ್ಯ, ಆಯುಷ್ಯಕ್ಕಾಗಿ ಪತ್ನಿಯರು ಪ್ರಾರ್ಥಿಸುತ್ತಿದ್ದರು. ಇದೇ ಕಾಲಕ್ರಮೇಣವಾಗಿ ಕರ್ವ ಚೌತಿಯಾಗಿ ಆಚರಣೆಗೆ ಬಂತು ಎನ್ನಲಾಗುತ್ತದೆ.  
ಇನ್ನೂ ಕೆಲವರ ಪ್ರಕಾರ ಗೋಧಿ ಬಿತ್ತನೆ ಸಮಯವಾಗಿದ್ದು, ಕರ್ವ ಚೌತಿ ಗ್ರಾಮೀಣ ಭಾಗದಲ್ಲಿ ಕೃಷಿಯೊಂದಿಗೂ ಬೆಸೆದುಕೊಂಡಿದೆ.  ಕರ್ವ ಎಂದರೆ ಸಂಗ್ರಹಿಸಲಾಗುವ ಪಾತ್ರೆ, ಬೆಳೆಯನ್ನು ಸಂಗ್ರಹಿಸಲು ಬೃಹತ್ ಗಾತ್ರದ ಪಾತ್ರೆಗಳನ್ನು ಬಳಕೆ ಮಾಡಲಾಗುತ್ತಿತ್ತು. ಬೆಳೆ ಉತ್ತಮವಾಗಿ ಬರಲೆಂದು ಪ್ರಾರ್ಥಿಸಿ ಚೌತಿಯ ದಿನ ಉಪವಾಸವಿದ್ದು ದೇವರಲ್ಲಿ ಪ್ರಾರ್ಥಿಸುತ್ತಿದ್ದರು ಈ ಹಿನ್ನೆಲೆಯಲ್ಲಿ ಕರ್ವ  ಚೌತಿಯ ದಿನದಂದು ಗ್ರಾಮೀಣ ಭಾಗದಲ್ಲಿ ಉಪವಾಸ ಆಚರಿಸುವ ಸಂಪ್ರದಾಯ ಇದೆ 
ಸಂಜೆ ವೇಳೆಗೆ ವಿವಾಹವಾದ ಹೆಂಗಸರು ಒಂದೆಡೆ ಸೇರಿ ಕರ್ವ ಚೌತ್ ನ ಕಥೆಯನ್ನು ಕೇಳುತ್ತಾರೆ. ಶಿವ ಹಾಗು ಪಾರ್ವತಿಯನ್ನು ಪೂಜಿಸುವ ಈ ದಿನದಂದು ಗೌರ್ ಮಾತ ಅಥವಾ ಕರ್ವ ಮಾತೆಯ ಮೂರ್ತಿಯನ್ನು ಪೂಜಿಸುವುದು ರೂಢಿಯಲ್ಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com