ನವರಾತ್ರಿ: ಕೂಷ್ಮಾಂಡ ದೇವಿಯ ಪ್ರಾರ್ಥನೆಯಿಂದ ಆರೋಗ್ಯ ವೃದ್ಧಿ!

ನವರಾತ್ರಿಯ ಆಚರಣೆಯಲ್ಲಿ ಕೆಲವು ನಿಯಮಗಳನ್ನು ಪಾಲಿಸಿದರೆ ಕೆಲವು ಸಿದ್ಧಿಗಳನ್ನು ಪಡೆಯಬಹುದು ಎಂಬ ನಂಬಿಕೆ ಇದೆ.
ಮಾತಾ ಕೂಷ್ಮಾಂಡ
ಮಾತಾ ಕೂಷ್ಮಾಂಡ
ನವರಾತ್ರಿಯ ಆಚರಣೆಯಲ್ಲಿ ಕೆಲವು ನಿಯಮಗಳನ್ನು ಪಾಲಿಸಿದರೆ ಕೆಲವು ಸಿದ್ಧಿಗಳನ್ನು ಪಡೆಯಬಹುದು ಎಂಬ ನಂಬಿಕೆ ಇದೆ. ಹಲವು ಜನರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ನವರಾತ್ರಿಯ ಸಂದರ್ಭದಲ್ಲಿ ದೇವಿಯನ್ನು ಪ್ರಾರ್ಥಿಸುತ್ತಾರೆ. 
ನವರಾತ್ರಿಯ 9 ದಿನಗಳಲ್ಲಿ ದುರ್ಗೆಗೂ ಪೂಜೆ ನಡೆಯಲಿದ್ದು, ದುರ್ಗೆಯ ಮತ್ತೊಂದು ಅವತಾರವಾದ ಮಾತಾ ಕೂಷ್ಮಾಂಡ ದೇವಿಯನ್ನೂ ಆರಾಧಿಸಲಾಗುತ್ತದೆ. ಅಷ್ಟೇ ಅಲ್ಲದೇ ಕೂಷ್ಮಾಂಡ ದೇವಿ ಜಗತ್ಜನನಿ ಎಂಬ ನಂಬಿಕೆಯೂ ಇದ್ದು, ಆ ದೇವಿಯೇ ಈ ಜಗತ್ತನ್ನು ಸೃಷ್ಟಿಸಿದ್ದು ಎಂದೂ ಹೇಳಲಾಗುತ್ತದೆ. 
ನವರಾತ್ರಿಯ 4 ನೇ ದಿನ ಕೂಷ್ಮಾಂಡ ದೇವಿಯ ಪೂಜೆ ನಡೆಯಲಿದ್ದು, ದುರ್ಗೆಯಈ ಅವತಾರವೇ ಜಗತ್ತಿನ ಅಂಧಕಾರವನ್ನೂ ಕಳೆದಿದ್ದು ಎಂಬ ಉಲ್ಲೇಖವಿದೆ. ಪರಮೇಶ್ವರನ ಪತ್ನಿಯ ಸ್ವರೂಪವೂ ಆಗಿರುವ ಕೂಷ್ಮಾಂಡ ದೇವಿಯನ್ನು ಪ್ರಾರ್ಥಿಸುವುದರಿಂದ ಆರೋಗ್ಯ, ಐಶ್ವರ್ಯ, ಶಕ್ತಿ ವೃದ್ಧಿಸುತ್ತದೆ ಎಂಬ ನಂಬಿಕೆ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com