ಮಹಾ ಶಿವರಾತ್ರಿ: ಪರ್ವದಿನದಂದು ಶಿವನನ್ನು ಒಲಿಸಿಕೊಳ್ಳಲು ಈ ಮಂತ್ರಗಳು ಸಹಕಾರಿ

ಸನಾತನ ಧರ್ಮದಲ್ಲಿ ಸುಲಭವಾಗಿ ಒಲಿಸಿಕೊಳ್ಳಬಹುದಾದ ದೇವರೆಂದರೆ ಅದು ಶಂಕರ, ಶಂಕರ ಎಂದರೆ ಶುಭವನ್ನುಂಟು ಮಾಡುವವನು ಎಂದರ್ಥ. ಭಕ್ತಿಯಿಂದ ಪ್ರಾರ್ಥಿಸಿದರೆ ಶಂಕರ ಎಂಥವರಿಗೂ ಒಲಿಯುತ್ತಾನೆ.
ಶಿವಲಿಂಗ
ಶಿವಲಿಂಗ
Updated on
ಸನಾತನ ಧರ್ಮದಲ್ಲಿ ಸುಲಭವಾಗಿ ಒಲಿಸಿಕೊಳ್ಳಬಹುದಾದ ದೇವರೆಂದರೆ ಅದು ಶಂಕರ, ಶಂಕರ ಎಂದರೆ ಶುಭವನ್ನುಂಟು ಮಾಡುವವನು ಎಂದರ್ಥ. ಭಕ್ತಿಯಿಂದ ಪ್ರಾರ್ಥಿಸಿದರೆ ಶಂಕರ ಎಂಥವರಿಗೂ ಒಲಿಯುತ್ತಾನೆ. ಭಕ್ತಿಯಿಂದ ಪ್ರಾರ್ಥಿಸಿದ ಅಸುರರಿಗೂ ಒಲಿದ ಕಾರಣದಿಂದಲೇ ಶಿವನಿಗೆ ಭೋಳಾ ಶಂಕರ ಎಂಬ ಹೆಸರು ಇದೆ.  
ಶಿವನಿಗೆ ಸಂಬಂಧಿಸಿದಂತೆ ವೈಭವವಾಗಿ, ಅತ್ಯಂತ ಸಡಗರ ಭಕ್ತಿ ಭಾವಗಳಿಂದ ಆಚರಿಸುವ ಪರ್ವದಿನವೆಂದರೆ ಅದು ಶಿವರಾತ್ರಿ, ಈ ಬಾರಿ ಫೆ.13 ರಂದು ಬಂದಿದೆ. 
ಶಿವರಾತ್ರಿಯಂದು ಶಿವನನ್ನು ಒಲಿಸಿಕೊಳ್ಳುವುದಕ್ಕಾಗಿ ಕೆಲವು ಸರಳ ಮಂತ್ರಗಳಿದ್ದು, ಇವುಗಳನ್ನು ಪಠಿಸಿದರೆ ಶಿವ ತತ್ವವನ್ನು ತಲುಪುವುದಕ್ಕೆ ಮನಸ್ಸನ್ನು ಸಿದ್ಧಪಡಿಸಿಕೊಳ್ಳುವುದು ಸುಲಭ ಎಂಬ ನಂಬಿಕೆ ಇದೆ. ಇನ್ನು ಶಿವರಾತ್ರಿಯಂದು ಮಹಾಮೃತ್ಯುಂಜಯ ಮಂತ್ರ ಜಪಿಸುವುದೂ ಸಹ ಶ್ರೇಷ್ಠವೆಂದು ಪರಿಗಣಿಸಲಾಗಿದೆ. 
ಶಿವರಾತ್ರಿಯಂದು ಪಠಿಸಬೇಕಿರುವ ಸರಳ ಮಂತ್ರಗಳು 
ಶಿವ ಪಂಚಾಕ್ಷರಿ ಮಂತ್ರ: ಓಂ ನಮಃ ಶಿವಾಯ
ರುದ್ರ ಗಾಯತ್ರಿ ಮಂತ್ರ: ಓಂ ತತ್ಪರುಷಾಯ ವಿದ್ಮಹೇ ಮಹಾದೇವಾಯ ಧೀಮಹೀ ತನ್ನೋ ರುದ್ರ ಪ್ರಚೋದಯಾತ್
ಮೃತ್ಯುಂಜಯ ಮಂತ್ರ: ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ | ಉರ್ವಾರುಕಮಿವ ಬಂಧನಾತ್ ಮೃತ್ಯೋರ್ಮುಕ್ಷೀಯಮಾಮೃತಾತ್ 
ರುದ್ರ ಮಂತ್ರ: "ಓಂ ನಮೋ ಭಗವತೇ ರುದ್ರಾಯ".

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com