ಶಿವ ಶರಭೇಶ್ವರನಾಗಿ ಅವತರಿಸಿದ್ದೇಕೆ? ನೃಸಿಂಹ-ಶರಭೇಶ್ವರ ಅವತಾರದ ಬಗ್ಗೆ ತಿಳಿದರೆ ಅಚ್ಚರಿಗೊಳ್ಳುತ್ತೀರಿ!

'ಸ್ಯಾತ್ ಪರಮೇಶ್ವರಸ್ಯಾಪಿ ಇಚ್ಛಾವಶಾತ್ ಮಾಯಾಮಯಂ ರೂಪಂ ಸಾಧಕಾನುಗ್ರಹಾರ್ಥಂ' ಅಂದರೆ ಸಾಧಕರಿಗೆ ಅನುಗ್ರಹ ಮಾಡುವುದಕ್ಕೆ ಭಗವಂತ ಸಂದರ್ಭಕ್ಕೆ ಅನುಗುಣವಾಗಿ ಬೇರೆ ಬೇರೆ ರೂಪಗಳಲ್ಲಿ ಪ್ರಕಟನಾಗುತ್ತಾನೆ ಎನ್ನುತ್ತಾರೆ ಆದಿ ಶಂಕರರು.
ಶರಭೇಶ್ವರ-ನೃಸಿಂಹ
ಶರಭೇಶ್ವರ-ನೃಸಿಂಹ
Updated on
'ಸ್ಯಾತ್ ಪರಮೇಶ್ವರಸ್ಯಾಪಿ ಇಚ್ಛಾವಶಾತ್ ಮಾಯಾಮಯಂ ರೂಪಂ ಸಾಧಕಾನುಗ್ರಹಾರ್ಥಂ' ಅಂದರೆ ಸಾಧಕರಿಗೆ ಅನುಗ್ರಹ ಮಾಡುವುದಕ್ಕೆ ಭಗವಂತ ಸಂದರ್ಭಕ್ಕೆ ಅನುಗುಣವಾಗಿ ಬೇರೆ ಬೇರೆ ರೂಪಗಳಲ್ಲಿ ಪ್ರಕಟನಾಗುತ್ತಾನೆ ಎನ್ನುತ್ತಾರೆ ಆದಿ ಶಂಕರರು. ತ್ರೇತಾಯುಗದಲ್ಲಿ ರಾಮನ ಜೊತೆ ಪರಶುರಾಮರನ್ನೂ ಸಹ ವಿಷ್ಣುವಿನ ಅವತಾರವೆಂದು, ಕೃಷ್ಣನ ಜೊತೆ ಜೊತೆಗೇ ಬಲರಾಮನನ್ನೂ ದೈವತ್ವ ಹೊಂದಿರುವ ಮಹಾಪುರುಷನೆಂದು ಶ್ರದ್ಧಾ ಭಕ್ತಿಗಳಿಂದ ಪೂಜಿಸುತ್ತೇವೆ. ಹೀಗೆ ಒಂದೇ ಬಾರಿಗೆ ಬೇರೆ ಬೇರೆ ರೂಪದಲ್ಲಿ ಭವಂತ ಆವಿರ್ಭವಿಸಬಲ್ಲ ಎಂಬುದು ಹಿಂದೂಗಳ ನಂಬಿಕೆ. 
ಈ ತತ್ವಕ್ಕೆ ಇರುವ ಮತ್ತೊಂದು ಉದಾಹರಣೆಯೇ ನೃಸಿಂಹ-ಶರಭೇಶ್ವರ ಅವತಾರಗಳು. ಎಲ್ಲರಿಗೂ ತಿಳಿದಿರುವಂತೆ ಹಿರಣ್ಯಕಶ್ಯಪನ್ನು ಸಂಹರಿಸಲು ವಿಷ್ಣು ನೃಸಿಂಹನಾಗಿ ಅವತರಿಸಿದ್ದ. ಈ ಅವತಾರ ಉಗ್ರ ನೃಸಿಂಹನೆಂದೇ ಹೆಚ್ಚು ಪ್ರಸಿದ್ಧ. ಹಿರಣ್ಯಕಶ್ಯಪನ ವಧೆಯ ನಂತರ ನೃಸಿಂಹನನ್ನು ದೇವಾನುದೇವತೆಗಳೆಲ್ಲಾ ಸಮಾಧಾನ ಪಡಿಸಿ ಶಾಂತಗೊಳಿಸಲು ಯತ್ನಿಸುತ್ತಾರೆ. ಆದರೆ ನೃಸಿಂಹ ಅವತಾರದ ಉಗ್ರತ್ವ ಕಡಿಮೆಯಾಗುವುದಿಲ್ಲ. ಆತಂಕಗೊಂಡ ದೇವತೆಗಳು ನೃಸಿಂಹನ ಉಗ್ರತ್ವವನ್ನು ಕಡಿಮೆ ಮಾಡಿ ವಿಷ್ಣುವಿನ ಶಾಂತತೆಯನ್ನು ಮರಳಿ ಸ್ಥಾಪಿಸಲು ಮಹಾದೇವನನ್ನು ಪ್ರಾರ್ಥಿಸುತ್ತಾರೆ. ಶಿವ ಲಯಕಾರಕ ಆದಿ ಇದ್ದ ಮೇಲೆ ಅಂತ್ಯವೂ ಇರಲೇಬೇಕಲ್ಲಾ. ಹಾಗಾಗಿ ನೃಸಿಂಹ ಅವತಾರದ ಉಗ್ರತೆಯನ್ನು ಅಂತ್ಯಗೊಳಿಸಲು ಶಿವ ಶರಭೇಶ್ವರನಾಗಿ ಅವತರಿಸಬೇಕಾಗುತ್ತದೆ. 
ನೃಸಿಂಹ ಅವತಾರ ಅರ್ಧ ಪ್ರಾಣಿ ಹಾಗೂ ಅರ್ಧ ಮನುಷ್ಯನ ಅವತಾರವಾಗಿದ್ದರೆ, ಮನುಷ್ಯ, ಪ್ರಾಣಿ, ಬೃಹತ್ ಪಕ್ಷಿ ಎಲ್ಲವೂ ಸಮ್ಮಿಳಿತವಾದ ಅವತಾರವೇ ಶರಭೇಶ್ವರ ಅವತಾರ. ಅಂದರೆ ನೃಸಿಂಹ ಅವತಾರದ ಆರ್ಭಟವನ್ನು ತಗ್ಗಿಸಲು ಅದಕ್ಕಿಂತಲೂ ಭೀಕರವಾಗಿ ಕಾಣಿಸುವ ಅವತಾರದ ಅವಶ್ಯಕತೆ ಇದ್ದಾಗ ಶರಭೇಶ್ವರ ಅವತಾರವಾಗುತ್ತದೆ ಎಂಬುದು ನಂಬಿಕೆ. 
ರೂಪ ಹಾಗೂ ಶಕ್ತಿಗಳಲ್ಲಿ ನೃಸಿಂಹ ಅವತಾರವನ್ನು ಶಾಂತಗೊಳಿಸುವ ಶಕ್ತಿ ಶರಭೇಶ್ವರ ಅವತಾರಕ್ಕೆ ಇತ್ತು ಎನ್ನುತ್ತದೆ ಪುರಾಣಗಳು. ನೃಸಿಂಹ ಅವತಾರದ ಭೀಕರತೆಯನ್ನು ಕೊನೆಯಾಗಿಸಿದ ಶರಭೇಶ್ವರನ ಅವತಾರವನ್ನು ಇಂದಿಗೂ ಹಲವೆಡೆ ಪೂಜಿಸಲಾಗುತ್ತದೆ.  "ಹಿರಣ್ಯಕಶ್ಯಪನನ್ನು ಸಂಹರಿಸಲು ವಿಷ್ಣು ನೃಸಿಂಹನಾಗಿ ಅವತರಿಸಬೇಕಾಯಿತು. ಉಗ್ರನೃಸಿಂಹನನ್ನು ಶಾಂತಗೊಳಿಸಲು ಈಶ್ವರ ಶರಭೇಶ್ವರನಾಗಿ ಅವತರಿಸಬೇಕಾಯಿತು. ಆದರೆ ನೃಸಿಂಹ ಹಾಗೂ ಶರಭೇಶ್ವರ ಅವತಾರಕ್ಕೆ ಕಾರಣವಾದ ಶಕ್ತಿ ಒಂದೇ. ಎರಡೂ ಬೇರ್ಪಡಿಸಲಾಗದ ಅಂಶಗಳಾಗಿದ್ದು ಒಂದೇ ರೀತಿಯಲ್ಲಿ ಪೂಜಿಸಲ್ಪಡುತ್ತವೆ" ಎಂಬುದು ಸನಾತನ ಧರ್ಮದ ನಂಬಿಕೆಯಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com