ಭಾರತದಲ್ಲಿರುವ ಈ ದೇವಸ್ಥಾನಗಳಿಗೆ ಪುರುಷರಿಗೆ ಪ್ರವೇಶ ನಿಷೇಧ!

ಮಹಿಳೆಯರ ಪ್ರವೇಶಕ್ಕೆ ನಿಷಿದ್ಧವಿದ್ದ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಕುರಿತು ...
ಗುವಾಹಟಿಯ ಕಾಮಾಕ್ಯ ದೇವಸ್ಥಾನ
ಗುವಾಹಟಿಯ ಕಾಮಾಕ್ಯ ದೇವಸ್ಥಾನ
Updated on

ಮಹಿಳೆಯರ ಪ್ರವೇಶಕ್ಕೆ ನಿಷಿದ್ಧವಿದ್ದ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದ ಸುದ್ದಿಯಲ್ಲಿದೆ. ತೀರ್ಪಿನ ಬಗ್ಗೆ ಪರ-ವಿರೋಧ ಚರ್ಚೆಗಳು ಆರಂಭವಾಗಿದೆ. ಇದೇ ರೀತಿ ದೇಶದ ಕೆಲವು ದೇಗುಲಗಳಲ್ಲಿ ಪುರುಷರ ಪ್ರವೇಶಕ್ಕೆ ನಿಷೇಧವಿದೆ, ಆದರೆ ಅದು ಜನರ ಗಮನಕ್ಕೆ ಬರದೇ ಹೋಗಿದೆ. ಅಂತಹ ದೇಗುಲಗಳು ಯಾವ್ಯಾವುದು, ಎಲ್ಲೆಲ್ಲಿ ಇವೆ ಎಂದು ತಿಳಿಯೋಣ.

ಗುವಾಹಟಿಯ ಕಾಮಾಕ್ಯ ದೇವಸ್ಥಾನ: ಈ ದೇವಾಲಯಕ್ಕೆ ಪುರುಷರು ಹೋಗಬಾರದು ಎಂಬ ನಿಯಮವಿದೆ. ಈ ದೇವಸ್ಥಾನದಲ್ಲಿ ಮಹಿಳೆಯರಿಗೆ ಮಾತ್ರ ಪ್ರವೇಶವಿರುವುದು. ದೇಶದ 51 ಶಕ್ತಿಪೀಠಗಳಲ್ಲಿ ಒಂದಾದ ಗುವಾಹಟಿಯ ಕಾಮಾಕ್ಯ ದೇವಸ್ಥಾನದ ಸಂಪ್ರದಾಯಗಳಿಗೆ ವಿಶಿಷ್ಟವಾಗಿದೆ. ಆಷಾಢ ಮಾಸದ ಮೂರು ದಿನ ದೇವಾಲಯ ಮುಚ್ಚಿರುತ್ತದೆ. ಈ ಸಮಯದಲ್ಲಿ ದೇವತೆ ಋತುಮತಿಯಾಗುತ್ತಾಳೆ ಎಂಬ ನಂಬಿಕೆಯಿಂದ ಆಷಾಢ ತಿಂಗಳಲ್ಲಿ ಮೂರು ದಿನ ಮುಚ್ಚಲಾಗುತ್ತದೆಯಂತೆ. ಈ ದೇವಾಲಯಕ್ಕೆ ಮಹಿಳೆಯರು ಮುಟ್ಟಾದ ಸಂದರ್ಭದಲ್ಲಿ ಕೂಡ ಹೋಗಬಹುದು ಎಂಬುದು ಇನ್ನೊಂದು ವಿಶೇಷವಾಗಿದೆ.

ವಿಶಾಖಪಟ್ನಂ ನ ಕಾಮಾಕ್ಯ ದೇವಾಲಯ: ವಿಶಾಖಪಟ್ಟಣದ ಕಾಮಾಖ್ಯ ಪೀಠ ಕೂಡ ತಿಂಗಳಲ್ಲಿ ನಿರ್ದಿಷ್ಟ ದಿನಗಳಂದು ಪುರುಷರಿಗೆ ಪ್ರವೇಶ ನೀಡುವುದಿಲ್ಲ. ಮಹಿಳೆಯರು ಮುಟ್ಟಾದ ಸಂದರ್ಭದಲ್ಲಿ ಅವರ ಮನೆಯ ಪುರುಷರು ಈ ದೇವಾಲಯವನ್ನು ಪ್ರವೇಶಿಸಬಾರದು ಎಂಬ ಸಾಂಪ್ರದಾಯಿಕ ನಿಯಮವಿದೆ.

ಪುಷ್ಕರದ ಬ್ರಹ್ಮ ದೇವಾಲಯ: ರಾಜಸ್ತಾನದ ಪುಷ್ಕರದಲ್ಲಿರುವ ಮಧ್ಯಯುಗದ ದೇವಾಲಯ ಎಂದು ಹೆಸರಾಗಿರುವ ಈ ದೇವಸ್ಥಾನದಲ್ಲಿ ಮದುವೆಯಾದ ಪುರುಷರಿಗೆ ಪ್ರವೇಶವಿಲ್ಲ. ತೀವ್ರ ವ್ರತ, ಕಟ್ಟುನಿಟ್ಟಿನ ಆಚರಣೆ ಹೊಂದಿರುವ ಪುರುಷರು ಮಾತ್ರ ಈ ದೇವಸ್ಥಾನ ಪ್ರವೇಶಿಸಬಹುದು. ಪುರುಷ ಭಕ್ತಾಧಿಗಳು ದೇವಾಲಯದ ಸಭಾಂಗಣದ ಹೊರಗೆ ನಿಂತು ಪೂಜೆ ಸಲ್ಲಿಸಬಹುದು, ಇಲ್ಲಿ ಪೂಜೆಗಿರುವ ಅರ್ಚಕರು ಕೂಡ ಬ್ರಹ್ಮಚಾರಿಯೇ ಆಗಿರುತ್ತಾರೆ.



ರಾಜಸ್ತಾನದ ಪುಷ್ಕರದಲ್ಲಿರುವ ಬ್ರಹ್ಮ ದೇವಾಲಯ

ಕನ್ಯಾಕುಮಾರಿ ದೇವಾಲಯ:
ಕನ್ಯಾಕುಮಾರಿಯಲ್ಲಿರುವ ಕುಮಾರಿ ಅಮ್ಮನ್ ದೇವಸ್ಥಾನದಲ್ಲಿ ಭಗವತಿ ದುರ್ಗೆಯ ಗುಡಿಯಿದೆ. ದೇವಸ್ಥಾನದ ಗೇಟ್ ವರೆಗೆ ಅವಿವಾಹಿತ ಪುರುಷರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ದೇವಸ್ಥಾನದ ಆವರಣಕ್ಕೆ ವಿವಾಹಿತ ಪುರುಷರು ಹೋಗಬಾರದು. ಪಾರ್ವತಿ ತನ್ನ ಗಂಡ ಶಿವನನ್ನು ಪಡೆಯಲು ಇದೇ ಸ್ಥಳದಲ್ಲಿ ಕುಳಿತು ಘೋರ ತಪಸ್ಸು ಮಾಡಿದಳು ಎಂಬ ಪ್ರತೀತಿಯಿದೆ. ಅದೇ ಸ್ಥಳದಲ್ಲಿ ದೇವಸ್ಥಾನ ನಿರ್ಮಾಣವಾಗಿದೆ. ಈ ದೇವಸ್ಥಾನದಲ್ಲಿ ಕನ್ಯಾ ಮತ್ತು ಭಗವತಿ ದುರ್ಗೆಯನ್ನು ಮಹಿಳೆಯರು ಮಾತ್ರ ಆರಾಧಿಸುತ್ತಾರೆ.



ಕನ್ಯಾಕುಮಾರಿ ದೇವಸ್ಥಾನ


ಮುಜಾಫರ್ ಪುರದ ಮಾತಾ ದೇವಾಲಯ: ಬಿಹಾರ ರಾಜ್ಯದ ಮುಜಾಫರ್ ಪುರದಲ್ಲಿರುವ ಮಾತ ದೇವಸ್ಥಾನಕ್ಕೆ ಪುರುಷರಿಗೆ ಪ್ರವೇಶ ನಿಷೇಧವಿದೆ. ಮಹಿಳೆಯರು ಋತುಮತಿಯಾದ ಸಂದರ್ಭದಲ್ಲಿ ಮಹಿಳೆಯರು ಮಾತ್ರ ಪ್ರವೇಶಿಸಲು ದೇವಸ್ಥಾನದ ಆಡಳಿತ ಮಂಡಳಿ ಪ್ರವೇಶ ಕಲ್ಪಿಸಿದೆ. ಈ ಸಮಯದಲ್ಲಿ ಪುರುಷ ಅರ್ಚಕರು ಕೂಡ ದೇವಸ್ಥಾನವನ್ನು ಪ್ರವೇಶಿಸುವಂತಿಲ್ಲ ಎಂಬ ಕಠಿಣ ನಿಯಮವಿದೆ. ನಂತರ ದೇವಾಲಯ ಮಹಿಳೆಯರಿಗೆ ಮಾತ್ರ ಎಂದು ಹೆಸರುವಾಸಿಯಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com