ದೀಪಾವಳಿ ಸಮಯದಲ್ಲಿ ಎಷ್ಟು ದೀಪ ಹಚ್ಚಬೇಕು?

ದೀಪಾವಳಿ ಸಮಯದಲ್ಲಿ ತಮ್ಮ ತಮ್ಮ ಕುಲದ ಮತ್ತು ಪ್ರಾಂತೀಯ ಆಚಾರಗಳನ್ನು ಗಮನದಲ್ಲಿಟ್ಟುಕೊಂಡು, ಹಿರಿಯರು ಮಾಡಿಕೊಂಡು ಬಂದ ಪದ್ಧತಿಯಂತೆ ದೀಪಗಳನ್ನು ಹಚ್ಚಬಹುದು. ಇಷ್ಟೇ ದೀಪ ಹಚ್ಚಬೇಕೆಂದು ನಿಯಮವೇನೂ ಇಲ್ಲ. ತ್ರಿವರ್ತಿಕ ಅಂದರೆ ಮೂರು ಬತ್ತಿಗಳನ್ನು ತುಪ್ಪದಲ್ಲಿ ಅದ್ದಿ ಏಕಾರತಿ ಬೆಳಗಬಹುದು.
ಸಾಂದರ್ಭಿಕ ಚಿತ್ರ

ಕೆಲವರು ಐದು ಬತ್ತಿಗಳನ್ನು, ಏಳು ಬತ್ತಿಗಳನ್ನಿಡುತ್ತಾರೆ, ಕೆಲವರು ಎರಡು ದೀಪಗಳನ್ನಿಟ್ಟು ಪೂಜೆ ಮಾಡಬೇಕೆನ್ನುತ್ತಾರೆ, ಇದು ಅವರವರ ಕುಲದಲ್ಲಿ, ಮನೆಯಲ್ಲಿ, ಪ್ರಾಂತ್ಯದಲ್ಲಿ ಹಿಂದಿನಿಂದಲೂ ಯಾವ ರೀತಿ ಆಚರಿಸಿಕೊಂಡು ಬರಲಾಗಿದೆ ಎಂದು ನೋಡಿಕೊಂಡು ಮುಂದುವರಿಸಿಕೊಂಡು, ಬೆಸ ಸಂಖ್ಯೆಯಲ್ಲಿ ನಮ್ಮ ಶಕ್ತ್ಯಾನುಸಾರ ದೀಪಗಳನ್ನು ಬೆಳಗಬಹುದು. 

ಎಷ್ಟು ದೀಪಗಳನ್ನು ಹಚ್ಚಬೇಕು, ಎಷ್ಟು ಬತ್ತಿಗಳನ್ನಿಡಬೇಕು ಎಂಬ ಬಗ್ಗೆ ನಮ್ಮ ಹಿರಿಯರು, ಅಕ್ಕಪಕ್ಕದಲ್ಲಿ ಉಪಾಸನೆ ಮಾಡುವಂತವರಿದ್ದರೆ ಅವರು ಹೇಗೆ ಆಚರಿಸಿಕೊಂಡು ಬಂದಿರುತ್ತಾರೋ ಎಂದು ನೋಡಿಕೊಂಡು,  ಅವರ ಸಲಹೆ ಪಡೆದು ಮುಂದುವರಿಯಬಹುದು. ಭಕ್ತಿಯಿಂದ ಯಾವ ರೀತಿ ದೇವರ ಪೂಜೆ ಮಾಡಿದರೂ, ಸದುದ್ದೇಶದಿಂದ ಮಾಡಿದ ಪೂಜೆಗೆ ದೇವರು ಒಲಿಯುತ್ತಾನೆ ಎನ್ನುತ್ತಾರೆ, ಇಂತಹದ್ದೇ ನಿಯಮ, ಕಟ್ಟುಪಾಡುಗಳೇನು ಇಲ್ಲ ಎನ್ನುತ್ತಾರೆ ಆಧ್ಯಾತ್ಮಿಕ, ಸಾಂಸ್ಕೃತಿಕ ಚಿಂತಕಿ ಡಾ ಆರತಿ ಕೌಂಡಿನ್ಯ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com