ಜಾತಕದ ಲಗ್ನದಲ್ಲಿ ಕುಜನಿದ್ದರೆ ಮದುವೆ ವಿಳಂಬವಾಗುವುದೇ? ವಧು- ವರ ಇಬ್ಬರಿಗೂ 'ಕುಜ ದೋಷ' ವಿದ್ದರೆ ವಿವಾಹ ಸೂಕ್ತವೇ?

ವಧು ಮತ್ತು ವರ ಇಬ್ಬರಿಗೂ ಕುಜ ದೋಷವಿದ್ದರೆ, ದೋಷವು ಶೂನ್ಯವಾಗುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಆದರೆ, ಒಬ್ಬರಿಗೆ ಮಾತ್ರ ದೋಷವಿದ್ದರೆ, ಹೊಂದಾಣಿಕೆಯಾಗುವ ಕುಂಡಲಿಗಳನ್ನು ಪರಿಶೀಲಿಸಬೇಕು.
Representational image
ಸಾಂದರ್ಭಿಕ ಚಿತ್ರ
Updated on

ತಮ್ಮ ವಯಸ್ಕ ಮಕ್ಕಳಿಗೆ ಮದುವೆ ಆಗದಿದ್ದರೆ ಪೋಷಕರು ತುಂಬಾ ಚಿಂತಿತರಾಗುತ್ತಾರೆ. ಕೆಲವು ಜಾತಕಗಳಲ್ಲಿ ಮಂಗಳಗ್ರಹದ ಪರಿಣಾಮದಿಂದ ಕುಜ ದೋಷ ಉಂಟಾಗುತ್ತದೆ. ಕುಜ ದೋಷ (ಮಂಗಳ ದೋಷ) ಎಂದರೆ ಜನ್ಮ ಕುಂಡಲಿಯಲ್ಲಿ ಕುಜ (ಮಂಗಳ) ಗ್ರಹವು ಲಗ್ನ, 4, 7, 8, ಅಥವಾ 12ನೇ ಮನೆಯಲ್ಲಿರುವುದು.

ಈ ದೋಷದಿಂದಾಗಿ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು, ವಿಚ್ಛೇದನ, ಹಣಕಾಸಿನ ತೊಂದರೆಗಳು ಮತ್ತು ಇತರ ಸಂಘರ್ಷಗಳಿಗೆ ಕಾರಣವಾಗಬಹುದು ಎಂದು ನಂಬಲಾಗಿದೆ. ವಧು ಮತ್ತು ವರ ಇಬ್ಬರಿಗೂ ಕುಜ ದೋಷವಿದ್ದರೆ, ದೋಷವು ಶೂನ್ಯವಾಗುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಆದರೆ, ಒಬ್ಬರಿಗೆ ಮಾತ್ರ ದೋಷವಿದ್ದರೆ, ಹೊಂದಾಣಿಕೆಯಾಗುವ ಕುಂಡಲಿಗಳನ್ನು ಪರಿಶೀಲಿಸಬೇಕು. ಕುಜ ದೋಷದ ಕಾರಣದಿಂದ ಮದುವೆ ವಿಳಂಬವಾಗುತ್ತವೆ ಎಂದು ಹೇಳಲಾಗುತ್ತದೆ

ಮದುವೆಗೆ ರತ್ನವಿದೆಯೇ?

ಜಾತಕದಲ್ಲಿ ಏಳನೇ ಮನೆಯನ್ನು ಆಧರಿಸಿ ಮದುವೆಯನ್ನು ಪರಿಗಣಿಸಲಾಗುತ್ತದೆ. ಏಳನೇ ಮನೆಯನ್ನು ಆಳುವ ಗ್ರಹ ದುರ್ಬಲವಾಗಿದ್ದರೆ ಅಥವಾ ಕೆಟ್ಟ ಸ್ಥಿತಿಯಲ್ಲಿದ್ದರೆ, ಅಥವಾ ಗುರು, ಶುಕ್ರ ವಿರುದ್ಧವಾಗಿದ್ದರೆ, ಮದುವೆ ವಿಳಂಬವಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ನೀವು ಅದಕ್ಕೆ ಸೂಕ್ತವಾದ ರತ್ನವನ್ನು ಧರಿಸಿದರೆ, ಮದುವೆ ಬೇಗನೆ ನಡೆಯುತ್ತದೆ ಎಂಬ ನಂಬಿಕೆಯಿದೆ.

ಕುಜದೋಷ ನಿವಾರಣೆಗೆ ಸುಬ್ರಹ್ಮಣ್ಯನ ಪೂಜೆ, ಕುಂಭ ವಿವಾಹ, ಅಶ್ವಿನಿ ಬಲಿ ಪೂಜೆ ಮತ್ತು ಸರ್ಪ ಸಂಸ್ಕಾರಗಳನ್ನು ಮಾಡಬಹುದು. ಕುಜ ದೋಷವನ್ನು ನಿವಾರಿಸಲು ಮೊದಲು ಅರಳಿ ಮರ, ಬಾಳೆ ಮರ, ಮಡಕೆ ಅಥವಾ ವಿಷ್ಣುವಿನ ಪ್ರತಿಮೆಯೊಂದಿಗೆ ಸಾಂಕೇತಿಕ ವಿವಾಹ ಮಾಡಲಾಗುತ್ತದೆ. ಕುಜದೋಷ ನಿವಾರಣೆಗೆ ಪರಿಣಾಮಕಾರಿ ಪರಿಹಾರವೆಂದರೆ ಮಂಗಳವಾರದ ಉಪವಾಸ. ದೋಷವಿರುವವರು ಈ ದಿನ ಉಪವಾಸ ಮಾಡಿ ಬರಿ ತೊಗರಿ ಬೇಳೆಯಿಂದ ಮಾಡಿದ ಆಹಾರವನ್ನು ಮಾತ್ರ ಸೇವಿಸಬೇಕು. ಇನ್ನೂ ಕೇರಳದ ತಿರುವೈರಾನಿಕುಲಂ ದೇವಸ್ಥಾನದಲ್ಲಿ ರೇಷ್ಮೆ ಬಟ್ಟೆ ಮತ್ತು ತಾಳಿಯನ್ನು ಅರ್ಪಿಸುವುದರಿಂದ ಕುಜ ದೋಷ ಪರಿಹಾರವಾಗುತ್ತದೆ ಎಂಬ ಪ್ರತೀತಿಯಿದೆ.

ಡಾ. ಪಿ.ಬಿ ರಾಜೇಶ್, ಜ್ಯೋತಿಷಿ ಮತ್ತು ಸಂಖ್ಯಾಶಾಸ್ತ್ರಜ್ಞ

Representational image
ಜ್ಯೋತಿಷ್ಯದಲ್ಲಿ ಆರೋಗ್ಯ ಕಂಡುಕೊಳ್ಳುವುದು ಹೇಗೆ: ದೇಹದ ಅನಾರೋಗ್ಯ ನಿರ್ಧರಿಸುವ ಗ್ರಹಗಳು ಯಾವುವು? 'ತ್ರಿದೋಷ' ಎಂದರೇನು?

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com