ವಾರ ಭವಿಷ್ಯ: ದ್ವಾದಶ ರಾಶಿಗಳ ಫಲಾಫಲ

ವಾರ ಭವಿಷ್ಯ: ದ್ವಾದಶ ರಾಶಿಗಳ ಫಲಾಫಲ- ಕೆಲಸ, ಹಣಕಾಸು, ಪ್ರೀತಿ; ಈ ವಾರ ನಿಮ್ಮ ಪರಿಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಿ.
zodiac signs
ದ್ವಾದಶ ರಾಶಿಗಳು
Updated on

ಮೇಷ: ಕೆಲಸದಲ್ಲಿ ಉದ್ವಿಗ್ನತೆ, ಅನುಮಾನಕ್ಕೆ ಕಾರಣವಾಗಬಹುದು. ಸಹೋದ್ಯೋಗಿಗಳ ಬೆಂಬಲ. ಮನೆ ಅಥವಾ ಕಾರು ರಿಪೇರಿಯಿಂದ ವೆಚ್ಚ ಹೆಚ್ಚಳ . ಹಣಕಾಸಿನ ವಿಷಯದಲ್ಲಿ ಜಾಗ್ರತೆ. ದಂಪತಿಗಳಿಗೆ ಹಣ ಅಥವಾ ಹಿಂದಿನ ವ್ಯವಹಾರದ ಬಗ್ಗೆ ಸೂಕ್ತ ಸಮಾಲೋಚನೆ ಅಗತ್ಯ. ಸವಾಲುಗಳನ್ನು ಶಾಂತವಾಗಿ ನಿರ್ವಹಿಸಿ. ಜನರೊಂದಿಗೆ ಹೆಚ್ಚಿನ ಸಂಪರ್ಕ ಹೊಂದುವಾಗ ಜಾಗರೂಕರಾಗಿ.

ವೃಷಭ: ವೃತ್ತಿ ಸಂಬಂಧಿತ ಗಡುವುಗಳಿಂದ ನಿಮಗೆ ಒತ್ತಡ . ಕಠಿಣ ಕೆಲಸಗಳನ್ನು ಚೆನ್ನಾಗಿ ನಿರ್ವಹಿಸುವ ಸಾಧ್ಯತೆ. ನೀವು ತಂಡದ ವಿಶ್ವಾಸಾರ್ಹ ಸದಸ್ಯರು. ಆದರೆ ಜಾಗರೂಕರಾಗಿರಿ.

ಅನಿರೀಕ್ಷಿತ ಧನಾಗಮ. ಜೊತೆಗೆ ಹೆಚ್ಚುವರಿ ವೆಚ್ಚ. ಭವಿಷ್ಯಕ್ಕಾಗಿ ಸ್ವಲ್ಪ ಹಣ ಮೀಸಲಿಡಿ. ದಾಂಪತ್ಯ ಜೀವನ ಉತ್ತಮವಾಗಿರಲಿದೆ. ಹೊಸ ಸ್ನೇಹಿತರ ಸಂಪರ್ಕ

ಮಿಥುನ: ಕುಟುಂಬ ವಿಚಾರದಲ್ಲಿ ಈ ವಾರ ನೀವು ತೆಗೆದುಕೊಳ್ಳುವ ಪ್ರಬಲ ನಿರ್ಧಾರದಿಂದ ಉತ್ತಮ ಫಲಿಕಾಂಶ. ಹೊಸ ಯೋಜನೆ ಅಥವಾ ಅವಕಾಶ ಸಾಧ್ಯತೆ. ನಿಮ್ಮ ಶಕ್ತಿಯನ್ನು ಸ್ಥಿರವಾಗಿರಿಸಿಕೊಳ್ಳಿ.ನಿಮ್ಮ ಸಂಬಂಧಿಕರಿಂದ ಹಣಕಾಸಿನ ವಿಷಯವಾಗಿ ಸಿಹಿ ಸುದ್ದಿ . ನಿಮ್ಮ ಕಠಿಣ ಪರಿಶ್ರಮದಿಂದ ಆದಾಯದ ಬೆಳವಣಿಗೆಯಲ್ಲಿ ಫಲ ನೀಡುತ್ತದೆ. ನಿಮ್ಮ ಪ್ರೇಮ ಜೀವನ ಆಹ್ಲಾದಕರ. ಕೆಲ ವಿಷಯಗಳು ಸುಲಭವಾಗಿ ಬಗೆ ಹರಿಯುತ್ತವೆ. ಹೊಸ ಜನರು ನಿಮ್ಮತ್ತ ಆಕರ್ಷಿತರಾಗಬಹುದು.

ಕಟಕ: ಹಳೆಯ ಯೋಜನೆಗಳು ಪರಿಶೀಲನೆಗೆ ಬರಬಹುದು. ಬಾಸ್‌ಗಳು ಮತ್ತು ಕ್ಲೈಂಟ್‌ಗಳಿಂದ ಹೆಚ್ಚಿನ ನಿರೀಕ್ಷೆ ಬೇಡ. ಈ ವಾರ ನಿಮ್ಮ ಪ್ರಯತ್ನಗಳು ಫಲ ನೀಡುತ್ತವೆ. ಹೊಸ ಆದಾಯದ ಮೂಲ ಸೃಷ್ಟಿ. ಹೆಚ್ಚಿನ ವ್ಯಯ, ಹೀಗಾಗಿ ಐಷಾರಾಮಿ ವಸ್ತುಗಳ ಖರೀದಿ ಬಗ್ಗೆ ಜಾಗ್ರತೆ ವಹಿಸಿ. ದಂಪತಿಗಳಿಗೆ ಉತ್ತಮ ಸಮಯ. ಅವಿವಾಹಿತರಿಗೆ ಸಂಗಾತಿ ಸಿಗುವ ಸಾಧ್ಯತೆ. ಆದಷ್ಟು ತಾಳ್ಮೆಯಿಂದಿರಿ.

ಸಿಂಹ: ಈ ವಾರ ನಿಮ್ಮ ವೃತ್ತಿ ಬದುಕಿನಲ್ಲಿ ತುಂಬಾ ಬ್ಯುಸಿ. ಇತರ ಕೆಲಸ ಕಾರ್ಯಗಳಿಂದ ಉತ್ತಮ ಫಲಿತಾಂಶ. ಉದ್ಯೋಗಾಕಾಂಕ್ಷಿಗಳು ಆರೋಗ್ಯ ರಕ್ಷಣೆ, ವಿಮೆ ಕ್ಷೇತ್ರದಲ್ಲಿರುವವರಿಗೆ ಲಾಭ. ಹಣಕಾಸಿನ ವೆಚ್ಚಗಳು ಹೆಚ್ಚು. ಏಜೆಂಟ್ ಕೆಲಸವು ಲಾಭ ತರುತ್ತದೆ. ಪ್ರಯಾಣದಿಂದ ಹೊಸ ಆದಾಯದ ಮಾರ್ಗ ಸಿಗುತ್ತದೆ. ದಂಪತಿಗಳ ವಾದ ಉಲ್ಬಣ, ಹೆಚ್ಚು ಸಮಯ ಒಟ್ಟಿಗೆ ಕಾಲ ಕಳೆಯಿರಿ, ಇದರಿಂದ ಸಂಬಂಧದಲ್ಲಿ ಸುಧಾರಣೆಯಾಗುತ್ತದೆ. ಒಂಟಿಯಾಗಿರುವವರಿಗೆ ಉತ್ತಮ ಸಮಯ.

ಕನ್ಯಾ: ವೃತ್ತಿ ಬದುಕಿನಲ್ಲಿ ಭಾರೀ ಯಶಸ್ಸು. ಸಹೋದ್ಯೋಗಿಗಳಿಂದ ಕಿರಿಕಿರಿ. ನಿಮ್ಮ ಮೇಲಧಿಕಾರಿಗಳಿಂದ ನಿಮಗೆ ಸೂಕ್ತ ಬೆಂಬಲ. ಸಾಮಾಜಿಕ ವೆಚ್ಚಗಳು ಸಾಮಾನ್ಯಕ್ಕಿಂತ ಹೆಚ್ಚಾಗಿರಬಹುದು. ಆದರೆ ಇದು ಹೊಸ ಆದಾಯದ ಅವಕಾಶಗಳನ್ನು ಸಹ ತರುತ್ತದೆ. ದಂಪತಿಗಳ ನಡುವಿನ ಸಂಬಂಧ ಉದ್ವಿಗ್ನ. ಸಮಾಧಾನದಿಂದ ಮಾತನಾಡಿ ಸಮಸ್ಯೆ ಬಗೆ ಹರಿಸಿಕೊಳ್ಳಿ.

ತುಲಾ: ನಿಮ್ಮ ವೃತ್ತಿ ಹೊರತುಪಡಿಸಿ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ. ಅದರ ಪ್ರತಿಫಲಗಳು ಯೋಗ್ಯವಾಗಿರುತ್ತವೆ. ಸವಾಲುಗಳು ಯಶಸ್ಸಾಗಿ ಪರಿವರ್ತನೆ. ಯಾವುದೇ ಸ್ಪರ್ಧೆಯು ನಿಮ್ಮನ್ನು ನಿಧಾನಗೊಳಿಸಲು ಸಾಧ್ಯವಿಲ್ಲ. ಮನರಂಜನೆ ಅಥವಾ ಐಷಾರಾಮಿಗಳ ಮೇಲಿನ ಹೆಚ್ಚಿನ ಖರ್ಚು ಕಡಿಮೆ ಮಾಡಿದರೆ ಉತ್ತಮ. ಸಂಘರ್ಷ ತಪ್ಪಿಸಲು ಸಂಗಾತಿಯಿಂದ ಸುಳ್ಳು ಹೇಳುವ ಸಾಧ್ಯತೆ. ರಹಸ್ಯಗಳನ್ನು ಹಂಚಿಕೊಂಡರೆ ಮನಸ್ಸು ಹಗುರು. ಪ್ರೀತಿಯಲ್ಲಿ ಬೀಳುವ ಸಾಧ್ಯತೆ. ಪ್ರಾಮಾಣಿಕವಾಗಿರಿ.

ವೃಶ್ಚಿಕ: ಸಹೋದ್ಯೋಗಿಗಳೊಂದಿಗೆ ನಿಕಟ ಸಂಬಂಧ, ಯೋಜಿಸಿದ್ದಕ್ಕಿಂತ ಮುಂಚಿತವಾಗಿ ಕೆಲಸ ಪೂರ್ಣ. ಕಚೇರಿಯಲ್ಲಿ ನಿಮ್ಮ ತಂಡದೊಂದಿಗೆ ಉತ್ತಮವಾಗಿ ವ್ಯವಹರಿಸಿ. ಈ ಹಿಂದೆ ನೀಡಿದ್ದ ಹಣ ಮರುಪಾವತಿ. ದಂಪತಿಗಳಿಗೆ ಈ ವಾರ ಯೋಗ್ಯ. ಸರಳ ಕ್ಷಣಗಳು ನಿಮ್ಮ ಸಂಬಂಧವನ್ನು ಬಲಪಡಿಸುತ್ತವೆ. ಅವಿವಾಹಿತರು ಕೆಲಸದ ಸ್ಥಳದಲ್ಲಿ ಪ್ರೀತಿಗೆ ಬೀಳುವ ಸಾಧ್ಯತೆ.

ಧನಸ್ಸು: ವೃತ್ತಿ ಜೀವನದಲ್ಲಿ ಸ್ವಲ್ಪ ಮಟ್ಟಿನ ಏರು ಪೇರು. ವಿವರಗಳ ಕೊರತೆಯಿಂದಾಗಿ ನೀಡಿದ್ದ ಗಡುವಿನಲ್ಲಿ ಕೆಲಸ ಪೂರ್ಣಗೊಳ್ಳುವಲ್ಲಿ ವಿಳಂಬ. ಮನೆ ಅಥವಾ ಕೆಲಸದಲ್ಲಿ ಅನಿರೀಕ್ಷಿತ ನಿರ್ವಹಣಾ ವೆಚ್ಚಗಳು ಉದ್ಭವಿಸಬಹುದು. ಸ್ನೇಹಿತರಿಂದಾಗಿ ಹೆಚ್ಚುವರಿ ಆದಾಯ. ಹಣ ಅಥವಾ ಹಿಂದಿನ ಜೀವನಕ್ಕೆ ಸಂಬಂಧಿಸಿದ ಗುಪ್ತ ಸತ್ಯಗಳು ಬಹಿರಂಗ ಸಾಧ್ಯತೆ. ಶಾಂತ ಮತ್ತು ಪ್ರಾಮಾಣಿಕರಾಗಿರಿ. ಸ್ನೇಹಿತರ ಬಳಿ ತಮ್ಮ ಭಾವನೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ.

ಮಕರ: ವೃತ್ತಿಯಲ್ಲಿ ಹೆಚ್ಚಿನ ಮನ್ನಣೆ, ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದಿಂದ ಉತ್ತಮ ಫಲಿತಾಂಶ ಪಡೆಯಬಹುದು. ನಿಮಗೆ ನೀಡಿರುವ ಕೆಲಸವನ್ನು ಶೀಘ್ರವಾಗಿ ಅಚ್ಚುಕಟ್ಟಾಗಿ ನಿರ್ವಹಿಸುತ್ತೀರಿ. ಮನೆ ಅಥವಾ ಕೆಲಸದಲ್ಲಿ ಅನಿರೀಕ್ಷಿತ ನಿರ್ವಹಣಾ ವೆಚ್ಚಗಳು ಉದ್ಭವಿಸಬಹುದು. ಸ್ನೇಹಿತರಿಂದ ಹೆಚ್ಚುವರಿ ಆದಾಯ, ಶಾಂತ ಮತ್ತು ಪ್ರಾಮಾಣಿಕರಾಗಿರಿ.

ಕುಂಭ: ಕೆಲಸದ ಹೊರೆ ಹೆಚ್ಚಳ. ಆದರೆ ಹೊಸ ಕೌಶಲ್ಯಗಳನ್ನು ಕಲಿಯುವುದು ನಿಮ್ಮ ವೃತ್ತಿಜೀವನದಲ್ಲಿ ಬೆಳೆಯಲು ಸಹಾಯ ಮಾಡುತ್ತದೆ. ಸಹೋದ್ಯೋಗಿ ಗಳ ಬೆಂಬಲ. ಆಕಸ್ಮಿಕ ಧನ ಲಾಭ ಸಂಗಾತಿಯೊಂದಿಗ ಹೆಚ್ಚಿನ ಸಂಘರ್ಷ ಬೇಡ. ನೀವಿಬ್ಬರೂ ಕಲೆಯ ಮೂಲಕ ಗುಣಮಟ್ಟದ ಸಮಯವನ್ನು ಆನಂದಿಸುತ್ತೀರಿ, ಪ್ರಣಯವನ್ನು ಮರಳಿ ತರುತ್ತೀರಿ. ಸುಖಾ ಸುಮ್ಮನೆ ಸಮಯ ಹಾಗಗೂ ಹಣ ವ್ಯರ್ಥ ಮಾಡದಿರಿ.

ಮೀನ: ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಹಾಗೂ ಮನ್ನಣೆ. ಕಳೆದುಕೊಂಡಿದ್ದ ಅವಕಾಶವು ಮರಳಲಿದೆ. ನೀವು ಉದ್ಯೋಗ ಸಂದರ್ಶನವನ್ನು ಹೊಂದಿದ್ದರೆ, ನಿಮಗೆ ತ್ವರಿತ ಪ್ರತಿಕ್ರಿಯೆ ಸಿಗುತ್ತದೆ. ಆಪ್ತರಿಂದ ಹಣಕಾಸಿನ ನೆರವು . ಹಳೇಯ ಸಾಲ ಮರು ಪಾವತಿ, ಆಸ್ತಿ ಮೌಲ್ಯದಲ್ಲಿ ಹೆಚ್ಚಳ ಸಾಧ್ಯತೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com