ನಿಮಗಿದು ಗೊತ್ತಾ? ಪ್ರತಿಯೊಂದು ಜನ್ಮ ನಕ್ಷತ್ರಕ್ಕೂ ಒಂದು ಪ್ರಾಣಿಯ ಅಧಿಪತ್ಯ: ಅವುಗಳ ಗುಣ ಲಕ್ಷಣಗಳೇನು; ವಿವಾಹ ಹೊಂದಾಣಿಕೆಯಲ್ಲಿ 'ಯೋನಿ ಕೂಟ'ದ ಮಹತ್ವ!

ಪ್ರತಿಯೊಬ್ಬರ ಗುಣ ಹಾಗೂ ಸ್ವಭಾವಗಳು ಬೇರೆ ಬೇರೆಯಾಗಿರುತ್ತದೆ. ಅಷ್ಟೇ ಒಂದೇ ಮನೆಯಲ್ಲಿ ಹುಟ್ಟಿದ ಮಕ್ಕಳ ಸ್ವಭಾವ ಒಂದೇ ರೀತಿ ಆಗಿರೋದಿಲ್ಲ. ಇದಕ್ಕೆ ಕಾರಣ ನಾವು ಹುಟ್ಟಿದ ನಕ್ಷತ್ರ.
Representational image
ಸಾಂದರ್ಭಿಕ ಚಿತ್ರ
Updated on

ಒಬ್ಬ ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಗ್ರಹದ ಸ್ಥಾನವನ್ನು ನಿರ್ಧರಿಸುವಲ್ಲಿ 27 ನಕ್ಷತ್ರ ಮತ್ತು ಚಿಹ್ನೆಗಳ ಪಾತ್ರವು ಅತ್ಯಂತ ನಿರ್ಣಾಯಕವಾಗಿದೆ. ಪ್ರತಿಯೊಂದೂ ನಕ್ಷತ್ರವೂ ನಿರ್ದಿಷ್ಟ ಗ್ರಹದಿಂದ ಆಳಲ್ಪಡುತ್ತದೆ, 27 ನಕ್ಷತ್ರಗಳು ಅತ್ಯಂತ ಮಹತ್ವದ್ದಾಗಿವೆ.

ಈ ಭೂಮಿ ಮೇಲೆ ಜನಿಸಿದವರು ಎಲ್ಲರೂ ಒಂದೇ ರೀತಿ ಇರುವುದಿಲ್ಲ. ಪ್ರತಿಯೊಬ್ಬರ ಗುಣ ಹಾಗೂ ಸ್ವಭಾವಗಳು ಬೇರೆ ಬೇರೆಯಾಗಿರುತ್ತದೆ. ಅಷ್ಟೇ ಒಂದೇ ಮನೆಯಲ್ಲಿ ಹುಟ್ಟಿದ ಮಕ್ಕಳ ಸ್ವಭಾವ ಒಂದೇ ರೀತಿ ಆಗಿರೋದಿಲ್ಲ. ಇದಕ್ಕೆ ಕಾರಣ ನಾವು ಹುಟ್ಟಿದ ನಕ್ಷತ್ರ. ನಿಮಗೆ ಗೊತ್ತಾ, ನಾವು ಹುಟ್ಟಿದ ನಕ್ಷತ್ರಕ್ಕೆ ಅನುಗುಣವಾಗಿ ನಮ್ಮ ಸ್ವಭಾವವಿರುತ್ತಂತೆ.

ಪ್ರತಿಯೊಂದು ನಕ್ಷತ್ರದಲ್ಲಿಯೂ ಒಂದು ಪ್ರಾಣಿಯಿರುತ್ತದೆ. ಈ ಪ್ರಾಣಿಯ ಗುಣ ಲಕ್ಷಣಗಳು ನಕ್ಷತ್ರಗಳಲ್ಲಿ ಜನಿಸಿದ ವ್ಯಕ್ತಿಗಳ ಸ್ವಭಾವದ ಮೇಲೆ ಪ್ರಭಾವ ಬೀರುತ್ತದೆ. ವಿವಾಹ ಹೊಂದಾಣಿಕೆಯ ವಿಷಯದಲ್ಲೂ ಇದನ್ನು ಪರಿಗಣಿಸಲಾಗುತ್ತದೆ. ಕೆಲವು ಯೋನಿಗಳು ಪರಸ್ಪರ ಹೊಂದಿಕೆಯಾಗದಿದ್ದರೆ, ದಾಂಪತ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಯೋನಿಗಳು ಹೊಂದಿಕೆಯಾಗುತ್ತಿದ್ದರೆ, ದಾಂಪತ್ಯ ಜೀವನವು ಶಾಂತಿಯಿಂದ ತುಂಬಿರುತ್ತದೆ ಎಂದು ನಂಬಲಾಗಿದೆ.

ನಕ್ಷತ್ರ---------- ಪ್ರಾಣಿ------ ಗುಣಲಕ್ಷಣ

ಅಶ್ವಿನಿ - ಕುದುರೆ- ಶಕ್ತಿ, ವೇಗ, ಸ್ವಾತಂತ್ರ್ಯ-ಪ್ರೀತಿ

ಭರಣಿ - ಆನೆ- ದೃಢ ಮನಸ್ಸು, ಆತ್ಮವಿಶ್ವಾಸ, ನಾಯಕತ್ವ

ಕೃತಿಕಾ - ಮೇಕೆ- ಚುರುಕುತನ, ಉತ್ಸಾಹ, ನಿರಂತರ ಪ್ರಯತ್ನ

ರೋಹಿಣಿ - ನಾಗರಹಾವು - ಆಕರ್ಷಣೆ, ಬುದ್ಧಿವಂತಿಕೆ, ರಹಸ್ಯ

ಮೃಗಶಿರ - ಸ್ತ್ರೀ ಸರ್ಪ- ಕಪಟತನ, ಸೂಕ್ಷ್ಮತೆ, ಶೌರ್ಯ

ಆರಿದ್ರಾ - ನಾಯಿ- ನಿಷ್ಠೆ, ಉತ್ಸಾಹ, ರಕ್ಷಣಾತ್ಮಕ ಮನೋಭಾವ

ಪುನರ್ವಸು - ಬೆಕ್ಕು- ಸೂಕ್ಷ್ಮತೆ, ನಿಗೂಢತೆ, ಪ್ರೀತಿಯ ಸ್ವಭಾವ

ಪುಷ್ಯ- ಗೂಬೆ- ಧೈರ್ಯ, ಆಳವಾದ ಚಿಂತನೆ, ಶಾಂತತೆ

ಆಶ್ಲೇಷ - ಹಾವು- ಸ್ವಯಂ ಅರಿವು, ತಪಸ್ವಿ ಸ್ವಭಾವ

ಮಖಾ - ಇಲಿ- ಅಲ್ಪ ಮಾತು, ಕಠಿಣ ಪರಿಶ್ರಮ, ದೂರದೃಷ್ಟಿ

ಪೂರ್ವ ಫಲ್ಗುಣಿ - ಕೋಳಿ- ಜಾಗರೂಕತೆ, ಆತ್ಮವಿಶ್ವಾಸ

ಉತ್ತರ ಫಲ್ಗುಣಿ- ಎತ್ತು- ದೃಢ ಮನಸ್ಸು, ಅಚ್ಚುಕಟ್ಟಾಗಿ ಕೆಲಸ ನಿರ್ವಹಣಂ

ಹಸ್ತಾ - ಹಾವು - ಬುದ್ಧಿವಂತಿಕೆ, ರಹಸ್ಯ, ಆಕರ್ಷಣೆ

ಚಿತ್ತಾ - ಹುಲಿ - ಧೈರ್ಯ, ಸೌಂದರ್ಯದಲ್ಲಿ ಆಸಕ್ತಿ, ಸ್ವತಂತ್ರ ಚಿಂತನೆ

ಸ್ವಾತಿ- ಹುಲಿ - ಆತ್ಮವಿಶ್ವಾಸ, ರಕ್ಷಣೆ, ಆಸೆ

ವಿಶಾಖ - ಹುಲಿ - ದೃಢನಿಶ್ಚಯ, ಹೋರಾಟದ ಸ್ವಭಾವವಿರುತ್ತದೆ.

ಅನೂರಾಧ - ಜಿಂಕೆ - ಪ್ರೀತಿಯ ಸ್ವಭಾವ, ಸೌಂದರ್ಯ ಪ್ರಜ್ಞೆ, ಕರುಣೆ

ಜ್ಯೇಷ್ಠ - ಮೇಕೆ - ಪ್ರಾಯೋಗಿಕತೆ, ಶ್ರದ್ಧೆ, ನಮ್ರತೆ

ಮೂಲ- ನಾಯಿ - ನಿಷ್ಠೆ, ಪ್ರಾಮಾಣಿಕತೆ,

ಪೂರ್ವಾಷಾಢ - ಆನೆ - ಸ್ಥಿತಪ್ರಜ್ಞೆ, ಶಾಂತಿ ಪ್ರಿಯ, ಬುದ್ಧಿವಂತಿಕೆ

ಉತ್ತರಾಷಾಢ - ಎತ್ತು - ಧೈರ್ಯ, ಸಹಿಷ್ಣುತೆ, ನ್ಯಾಯ ಪ್ರಜ್ಞೆ

ಶ್ರವಣ - ಜಿಂಕೆ - ಕರುಣೆ, ದಯೆ, ಸೌಮ್ಯತೆ

ಧನಿಷ್ಠ - ಆನೆ - ಬುದ್ಧಿವಂತಿಕೆ, ಸ್ಥಾನದ ಪ್ರಜ್ಞೆ, ಮಹತ್ವದ ಪ್ರಜ್ಞೆ

ಶತಭಿಷ - ಕುದುರೆ- ಉತ್ಸಾಹ, ಸಹಕಾರಿ ಮನೋಭಾವ, ಸೇವಾ ಮನೋಭಾವ

ಪೂರ್ವಾಭಾದ್ರ- ಸಿಂಹ- ವಿಶ್ವಾಸ, ನಾಯಕತ್ವ, ಶಕ್ತಿ

ಉತ್ತಾರಾಭಾದ್ರ- ಎತ್ತು- ಸ್ಥಿರತೆ, ಕಾಳಜಿ , ಕುಟುಂಬ ಪ್ರೀತಿ

ರೇವತಿ- ಆನೆ- ಸೌಮ್ಯತೆ, ನೈತಿಕತೆಯ ಪ್ರಜ್ಞೆ, ಕರುಣೆ

ಡಾ. ಪಿ.ಬಿ ರಾಜೇಶ್, ಜ್ಯೋತಿಷಿ ಮತ್ತು ಸಂಖ್ಯಾಶಾಸ್ತ್ರಜ್ಞ

Representational image
ಶುಭ ಕಾರ್ಯಕ್ಕೆ ಯಾವುದು ಉತ್ತಮ? ಶುಕ್ಲ ಪಕ್ಷ- ಕೃಷ್ಣ ಪಕ್ಷಗಳ ನಡುವಿನ ವ್ಯತ್ಯಾಸವೇನು; ಪಂಚಾಂಗದಲ್ಲಿ 'ತಿಥಿ'ಗೆ ಏಕೆ ಪ್ರಾಮುಖ್ಯತೆ?

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com