
ನವರಾತ್ರಿಯ 9ನೇ ದಿನ ದುರ್ಗಾ ಮಾತೆಯ 9ನೇ ರೂಪವಾದ ಸಿದ್ಧಿದಾತ್ರಿಯನ್ನು ಪೂಜಿಸಲಾಗುತ್ತದೆ. ದುರ್ಗೆ ಒಂದೊಂದು ದಿನ ಒಂದೊಂದು ಅವತಾರದಲ್ಲಿ ಭೂಮಿಗೆ ಬಂದು ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಾಳೆ ಎಂಬ ನಂಬಿಕೆ ಇದೆ.
ಸಿದ್ಧಿದಾತ್ರಿ ದೇವಿಯು ತನ್ನ ಎರಡು ಕೈಗಳಲ್ಲಿ ಗದೆ ಮತ್ತು ಚಕ್ರವನ್ನು ಹೊಂದಿದ್ದಾಳೆ. ಇನ್ನೆರಡು ಕೈಗಳಲ್ಲಿ ಕಮಲ ಮತ್ತು ಶಂಕು ಹಿಡಿದಿದ್ದಾಳೆ.
ಗೌರಿ ಎಂದರೆ ಆಕೆಯು ಗಿರಿ ಅಥವಾ ಪರ್ವತದ ಮಗಳೆಂದು ಹೇಳಲಾಗುತ್ತದೆ. ಗೂಳಿ ಮೇಲೆ ಪ್ರಯಾಣಿಸುವ ಗೌರಿ ತನ್ನ ಕೈಯಲ್ಲಿ ತ್ರಿಶೂಲದೊಂದಿಗೆ ಢಮರುಗ ಹಿಡಿದಿರುತ್ತಾಳೆ. ಆಕೆ ಬಿಳಿ ಬಟ್ಟೆ ಧರಿಸಿರುವರು ಮತ್ತು ಆಕೆಯ ಮುಖವು ತಂಪಾಗಿರುವ ಚಂದ್ರನಂತೆ ಹೊಳೆಯುತ್ತಿರುತ್ತದೆ.
ಮಹಾಗೌರಿಯ ಕಥೆ
ದುರ್ಗೆ ಭೂಲೋಕದಲ್ಲಿ ಜನ್ಮ ಪಡೆದಳಂತೆ ಆದರೆ ಅದರಿಂದ ಮುಕ್ತಿ ಪಡೆಯಬೇಕಾದರೆ ಆಕೆ ಶಿವನನ್ನು ಮದುವೆಯಾಗಬೇಕಾಯಿತು. ಹೀಗಾಗಿ ನಾರದ ಮುನಿಗಳ ಸಲಹೆಯಂತೆ ದೇವಿಯು ಶಿವನನ್ನು ಒಲಿಸಿಕೊಳ್ಳಲು ಹಲವಾರು ತಪಸ್ಸನ್ನು ಮಾಡಿದಳು. ವರ್ಷಗಳ ಕಾಲ ತಪಸ್ಸು ಮಾಡಿದ್ದರಿಂದ ಆಕೆಯ ದೇಹ ತುಂಬೆಲ್ಲಾ ಗಿಡ ಬಳಿ ಹಬ್ಬಿದವು, ಮಣ್ಣು ಆಕೆಯನ್ನು ತುಂಬಿಕೊಂಡಿತ್ತು. ಆಕೆ ಆಹಾರ ಹಾಗೂ ನೀರನ್ನು ಬಿಟ್ಟು ಸಂಪೂರ್ಣವಾಗಿ ತಪಸ್ಸಿನಲ್ಲಿ ತೊಡಗಿಕೊಳ್ಳುವರು. ಬಿಸಿಲಿನಿಂದಾಗಿ ಆಕೆಯ ದೇಹವು ಸಂಪೂರ್ಣವಾಗಿ ಕಪ್ಪಾಗಿತ್ತು. ಆಕೆಯ ತಪಸ್ಸಿನಿಂದ ಸಂತಸಗೊಂಡ ಶಿವನು ಪ್ರತ್ಯಕ್ಷನಾದನು. ಹಾಗೆ ಆಕೆಯ ಬೇಡಿಕೆ ಈಡೇರಿಸಿದನು.
ಸಿದ್ಧಿದಾತ್ರಿ
ಸಿದ್ಧಿ ಎಂದರೆ ಅಲೌಕಿಕ ಶಕ್ತಿ ಅಥವಾ ಸೃಷ್ಟಿ, ಅಸ್ತಿತ್ವದ ಅಂತಿಮ ಮೂಲದ ಅರ್ಥವನ್ನು ಸಾಧಿಸುವ ಸಾಮರ್ಥ್ಯ. ದಾತ್ರಿ ಎಂದರೆ ಕೊಡುವುದು. ತಾಯಿಯನ್ನು ಪೂಜೆ ಮಾಡಿದರೆ ನಿಜವಾದ ಅಸ್ತಿತ್ವವನ್ನು ಅರಿತುಕೊಳ್ಳುವ ಶಕ್ತಿ ಪ್ರಾಪ್ತಿಯಾಗುತ್ತದೆ. ತಾಯಿಯ ಆರಾಧನೆಯು ನಮ್ಮ ಮನಸ್ಸಿನಲ್ಲಿರುವ ಅಜ್ಞಾನವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಪುರಾಣ ಗ್ರಂಥಗಳ ಪ್ರಕಾರ ಜಗತ್ತಿನ ಎಂಟು ಸಿದ್ಧಿಗಳೆಂದರೆ ಅನಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಕ್ಯಾಮ್ಯ, ಇನ್ಶಿತ್ವ, ವಶಿತ್ವ. ನವದುರ್ಗೆಗಳಲ್ಲಿ ತಾಯಿ ಸಿದ್ಧಿದಾತ್ರಿಯು ಈ ಎಲ್ಲ ಅದ್ಭುತ ಅಂಶಗಳನ್ನು ಹೊಂದಿದ್ದಾಳೆ. ಬ್ರಹ್ಮಾಂಡದ ಸೃಷ್ಟಿಯ ವೇಳೆ ಶಿವನು ಪರಾಕಾಷ್ಟೆಯನ್ನು ಆರಾಧಿಸಿದನು. ಎಷ್ಟೇ ಆರಾಧಿಸದರೂ ಶಕ್ತಿ ದೇವತೆ ಪ್ರತ್ಯಕ್ಷಳಾಗಲಿಲ್ಲ. ನಂತರ ಆಕೆಯು ಶಿವನ ಎಡ ಭಾಗದ ಅರ್ಧದಲ್ಲಿ ಕಾಣಿಸಿಕೊಂಡಳು. ಅಂದಿನಿಂದ ಪರಶಿವನು ಅರ್ಧನಾರೀಶ್ವರ ಎಂಬ ಇನ್ನೊಂದು ಹೆಸರಿನಿಂದ ಗುರುತಿಸಿಕೊಂಡನು ಎಂದು ಹೇಳಲಾಗುತ್ತದೆ.
Advertisement