ಉತ್ಥಾನ ದ್ವಾದಶಿ: ತುಳಸಿ ಪೂಜೆ 2026- ಆಚರಣೆ ಯಾವಾಗ? ಪೂಜೆ ಸಮಯ ಮತ್ತು ವಿಧಿ ವಿಧಾನ

ಉತ್ಥಾನ ದ್ವಾದಶಿ (ತುಳಸಿ ಪೂಜೆ / ಕ್ಷೀರಾಬ್ಧಿ ವ್ರತ) ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಆಚರಿಸಲಾಗುವ ಪ್ರಮುಖ ಹಬ್ಬವಾಗಿದ್ದು, ಈ ಬಾರಿ ನವೆಂಬರ್ 21, 2026 (ಶನಿವಾರ) ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿಯಂದು ತುಳಸಿ ಪೂಜೆ ಆಚರಿಸಲಾಗುತ್ತದೆ.
File image
ಸಂಗ್ರಹ ಚಿತ್ರ
Updated on: 

ಹಿಂದೂ ಧರ್ಮದಲ್ಲಿ ತುಳಸಿ ಪೂಜೆಗೆ ವಿಶೇಷ ಮಹತ್ವವಿದೆ. ದೇಶಾದ್ಯಂತ ಭಕ್ತರು ಮನೆಗಳಲ್ಲಿ ಹಾಗೂ ದೇವಸ್ಥಾನಗಳಲ್ಲಿ ಮದುವೆಯ ಸಂಭ್ರಮದಂತೆ ತುಳಸಿ ಪೂಜೆಯನ್ನು ಆಚರಿಸುತ್ತಾರೆ. ಈ ದಿನ ಅನೇಕರು ಉಪವಾಸ ವ್ರತವನ್ನೂ ಆಚರಿಸುತ್ತಾರೆ. ವಿಶೇಷವಾಗಿ ಬ್ರಜ್ ಪ್ರದೇಶದಲ್ಲಿ ತುಳಸಿ ಪೂಜೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರತಿ ವರ್ಷ ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿಯಂದು ತುಳಸಿ ಪೂಜೆ ನಡೆಯುತ್ತದೆ.

ಉತ್ಥಾನ ದ್ವಾದಶಿ (ತುಳಸಿ ಪೂಜೆ / ಕ್ಷೀರಾಬ್ಧಿ ವ್ರತ) ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಆಚರಿಸಲಾಗುವ ಪ್ರಮುಖ ಹಬ್ಬವಾಗಿದ್ದು, ಈ ಬಾರಿ ನವೆಂಬರ್ 21, 2026 (ಶನಿವಾರ) ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿಯಂದು ತುಳಸಿ ಪೂಜೆ ಆಚರಿಸಲಾಗುತ್ತದೆ. 2026ರಲ್ಲಿ ದ್ವಾದಶಿ ತಿಥಿಯು ನವೆಂಬರ್ 21ರ ಬೆಳಗ್ಗೆ 6:31ಕ್ಕೆ ಆರಂಭವಾಗಲಿದ್ದು, ನವೆಂಬರ್ 22ರ ಬೆಳಗ್ಗೆ 4:56ಕ್ಕೆ ಮುಕ್ತಾಯವಾಗಲಿದೆ. ಉದಯ ತಿಥಿಗೆ ಹೆಚ್ಚಿನ ಮಹತ್ವ ನೀಡುವ ಹಿನ್ನೆಲೆಯಲ್ಲಿ ನವೆಂಬರ್ 21, 2026ರ ಶನಿವಾರದಂದು ತುಳಸಿ ಪೂಜೆಯನ್ನು ಆಚರಿಸಲಾಗುತ್ತದೆ. ಈ ದಿನ ಭಕ್ತರು ಉಪವಾಸ ವ್ರತ ಆಚರಿಸುವುದರ ಜೊತೆಗೆ ತುಳಸಿ ಗಿಡ ಮತ್ತು ಸಾಲಿಗ್ರಾಮ ಶಿಲೆಯ ಪೂಜೆದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ.

ನಾರದ ಮುನಿಗಳು ಒಮ್ಮೆ ಬ್ರಹ್ಮದೇವರನ್ನು ಕುರಿತು, ಇರುವ ಹನ್ನೆರಡು ಮಾಸಗಳಲ್ಲಿ ಅತಿ ಶ್ರೇಷ್ಠವಾದ ಮಾಸ ಯಾವುದು ಎಂದು ಕೇಳುತ್ತಾರೆ. ಆಗ ಬ್ರಹ್ಮನು ದ್ವಾದಶಮಾಸದಲ್ಲಿ ಕಾರ್ತಿಕ ಮಾಸವೇ ಅತಿ ಶ್ರೇಷ್ಠ ಎಂದು ತಿಳಿಸುತ್ತಾರೆ. ಈ ಮಾಸದಲ್ಲಿ ಮಹಾ ವಿಷ್ಣುವಿನ ವಿಗ್ರಹಕ್ಕೆ ತುಳಸಿಯನ್ನು ಅರ್ಪಿಸಿದಲ್ಲಿ ಜನ್ಮಾದಿಜನ್ಮದ ಪಾಪಗಳು ದೂರವಾಗಬಹುದು. ಈ ದಿನದಂದು ಮುಂಜಾನೆಯೇ ಎದ್ದು ಮನೆಯ ದೇವರ ಕೋಣೆಯಲ್ಲಿ, ಮನೆಯ ಮುಂಬಾಗಿಲಿನಲ್ಲಿ, ತುಳಸಿಗಿಡದ ಮುಂದೆ ಮತ್ತು ಹಸುವಿರುವ ಕಡೆ ಜೋಡಿ ದೀಪಗಳನ್ನು ಹಚ್ಚಬೇಕು.

ಉತ್ಥಾನ ದ್ವಾದಶಿಯ ದಿನದಂದು ನೆಲ್ಲಿ ಮರದ ಕೆಳಗೆ ಶ್ರೀ ವಿಷ್ಣುವಿನ ಪೂಜೆಯನ್ನು ಮಾಡಿದಲ್ಲಿ ಪ್ರಯಾಗ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದ ಫಲಗಳನ್ನು ಪಡೆಯುವರು. ಈ ಕಾರಣದಿಂದಾಗಿ ಈ ದಿನದಂದು ತುಳಸಿಗಿಡದ ಜೊತೆಯಲ್ಲಿ ಅಗಸೆ ಮತ್ತು ನೆಲ್ಲಿ ಕೊಂಬೆಗಳನ್ನು ಇಡಲಾಗುತ್ತದೆ. ತುಳಸಿಗಿಡದ ಮುಂದೆ ತೆಂಬಿಟ್ಟನ್ನು ಮಾಡಿ ಐದು ಕಬ್ಬಿನ ತುಂಡುಗಳಿಂದ ಚಿಲುಕು ಕುಟ್ಟುವ ಸಂಪ್ರದಾಯವು ನಮ್ಮಲ್ಲಿದೆ.

ಯೋಗನಿದ್ರೆಯ ಅಂತ್ಯ: ತುಳಸಿ ಪೂಜೆ ಅಥವಾ ತುಳಸಿ ವಿವಾಹವು ದೇವುತ್ಥಾನ ಏಕಾದಶಿಯ ಮರುದಿನದಂದು ಬರುತ್ತದೆ. ಈ ಏಕಾದಶಿಯ ದಿನದಂದು ವಿಷ್ಣು ದೇವನು 4 ತಿಂಗಳುಗಳ ಯೋಗ ನಿದ್ರೆಯಿಂದ ಎಚ್ಚರಗೊಳ್ಳುತ್ತಾನೆ. ಈ ಮೂಲಕ ಚಾತುರ್ಮಾಸವು ಮುಕ್ತಾಯಗೊಂಡು ಹಿಂದೂ ಸಂಪ್ರದಾಯದಲ್ಲಿ ಶುಭ ಕಾರ್ಯಗಳು ಪ್ರಾರಂಭವಾಗುವುದು. ಆದ್ದರಿಂದ ತುಳಸಿ ಪೂಜೆಯು ಹೊಸ ಆರಂಭದ ಸಂಕೇತವಾಗಿದೆ. ಕೃತಜ್ಞತಾ ಭಾವದೊಂದಿಗೆ ಹೊಸ ಯೋಜನೆಗಳನ್ನು ಮತ್ತು ಉತ್ತಮ ಅಭ್ಯಾಸಗಳನ್ನು ಪ್ರಾರಂಭಿಸಲು ಇದೊಂದು ಸೂಕ್ತ ದಿನವಾಗಿದೆ.

ತುಳಸಿ ವಿವಾಹ: ತುಳಸಿ (ವೃಂದಾ) ಮತ್ತು ವಿಷ್ಣು/ದಾಮೋದರ (ಶಾಲಿಗ್ರಾಮ) ನಡುವಿನ ಸಾಂಕೇತಿಕ ವಿವಾಹವನ್ನು ಈ ದಿನ ಆಚರಿಸಲಾಗುತ್ತದೆ.

ಇತರ ಹೆಸರುಗಳು: ಇದನ್ನು ತುಳಸಿ ಪೂಜೆ, ಕ್ಷೀರಾಬ್ಧಿ ವ್ರತ ಮತ್ತು ಮಥನ ದ್ವಾದಶಿ ಎಂದೂ ಕರೆಯುತ್ತಾರೆ.

ಬೃಂದಾವನ ಅಲಂಕಾರ: ತುಳಸಿ ಕಟ್ಟೆಯನ್ನು ರಂಗೋಲಿ, ಹೂವು, ಮಾವಿನ ಎಲೆ ಮತ್ತು ದೀಪಗಳಿಂದ ಅಲಂಕರಿಸಲಾಗುತ್ತದೆ.

ಪೂಜೆ ಮತ್ತು ವಿವಾಹ ವಿಧಿ: ತುಳಸಿ ಗಿಡದ ಜೊತೆಗೆ ಬೆಟ್ಟದನೆಲ್ಲಿಕಾಯಿ (ಆಮ್ಲಾ) ರೆಂಬೆ ಇಟ್ಟು, ಕೃಷ್ಣ ಅಥವಾ ಶಾಲಿಗ್ರಾಮ ಮೂರ್ತಿಯೊಂದಿಗೆ ಪೂಜೆ ನೆರವೇರಿಸಲಾಗುತ್ತದೆ.

ದೀಪ ಮತ್ತು ಧೂಪವನ್ನು ಬೆಳಗಿಸಿ ಪೂಜಿಸಿ, ವಿವಾಹ ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ. ಈ ಸಂದರ್ಭದಲ್ಲಿ ಮಂಗಳಗೀತೆಗಳನ್ನು ಹಾಡಬಹುದು.

ಕೊನೆಯಲ್ಲಿ ತುಳಸಿ ಮಾತೆ ಮತ್ತು ಭಗವಾನ್ ವಿಷ್ಣುವಿಗೆ ಆರತಿ ಮಾಡಿ ಪೂಜೆಯನ್ನು ಸಂಪನ್ನಗೊಳಿಸಿ. ಹೀಗೆ ಭಕ್ತಿಯಿಂದ ತುಳಸಿ ಪೂಜೆವನ್ನು ಆಚರಿಸುವ ಮೂಲಕ ದೇವರ ಆಶೀರ್ವಾದ ಪಡೆಯಬಹುದು.

File image
ಗುರುವಾಯೂರು ಏಕಾದಶಿಗೆ ವಿಶೇಷ ಸಿದ್ಧತೆ: ದಶಮಿಯಿಂದ ದ್ವಾದಶಿಯ ಬೆಳಗಿನವರೆಗೂ ನಿರಂತರ ದರ್ಶನ; ಶ್ರೀಮದ್ ಭಗವದ್ಗೀತೆ ಪಾರಾಯಣ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X